ಎರಡು ಜಡೆಯನ್ನು ಎಳೆದು ಕೇಳುವೆನು ಈ ಹಾಡು ಟಿವಿಯಲ್ಲಿ ಬಂದಾಗ ನನಗೆ ನನ್ನ ಬಾಲ್ಯದಲ್ಲಿ ಜಡೆ ಹಾಕಿ ಶಾಲೆಗೆ ಹೋಗುವ ಪ್ರಸಂಗ ನೆನಪಾಗುತ್ತಿತ್ತು. ಬಸ್‌ನಲ್ಲಿ, ಬಸ್ ಸ್ಟಾಂಡಲ್ಲಿ ಹಾದಿಲಿ ಬೀದಿಲಿ ಹೈಸ್ಕೂಲ್ ಹುಡುಗಿಯರ ಎರಡು ಜಡೆಯನ್ನು ನೋಡಿದರೆ ನಮ್ಮ ಹಳೆ ನೆನಪಿನ ಜತೆಗೆ ಅನೇಕ ಸಂಗತಿ ನೆನೆಯುತ್ತಿದೆ.
ನಾನು ನನ್ನ ಉದ್ದ ಹಾಗೂ ದಟ್ಟವಾದ ಕೂದಲಿನ ಜಡೆ ನೋಡಿಕೊಂಡಿದ್ದು ಅದೇ ಎಸೆಸೆಲ್ಸಿಯಲ್ಲಿ ಕ್ಲಾಸಲ್ಲಿ ಅದೇ ಕೊನೆಯಾಗಿತ್ತು. ಆದಮೇಲಂತೂ ಹಾಸ್ಟೇಲ್ ನಿಂದ ಮನೆಗೆ ,ಮನೆಯಿಂದ ಹಾಸ್ಟೆಲ್‌ಗೆ
ಹೋಗಿ ಬಂದು ಸ್ನಾನದ ನೀರು ಬದಲಾಗಿ ಆ ಎರಡು ಜಡೆಯಲ್ಲಿ ಒಂದು ಜಡೆ ಮಾತ್ರ ತಲೆಯಲ್ಲಿ ಉಳಿದುಕೊಂಡಿದೆ. ಹೈಸ್ಕೂಲಿಗೆ ಹೋಗಬೇಕಾದ್ರೆ ದಿನಾಲು ರಿಬ್ಬನ್ ಜತೆ ಎರಡು ಜಡೆ, ರವಿವಾರ ಮಾತ್ರ ತಲೆಗೆ ಹಿರೋಯಿನ್ ತರಾ ಕೂದಲನ್ನ ಎಡಕ್ಕು, ಬಲಕ್ಕು, ಮತ್ತೆ ಕಣ್ಮುಂದೆ ಹಾರಾಡಸ್ತಾ ಒಪನ್ ಹೇರ್ ಬಿಟ್‌ಕೊಂಡು ಹಾಡ ಹಾಡ್ತಾ ಇದ್ರೆ ಅಮ್ಮ “”ಏ ಸಾಕಿನ್ನು ಕೂದಲೂ ಉದುರುತ್ತವೇ ಜಡೆ ಹಾಕ್ತಿನಿ ಬಾ” ಅಂತಾ ಅಂದಾಗ ಮನಸ್ಸಿನಲ್ಲಿ ಹೃದಯ ಸಮುದ್ರ ಕಲಕಿ ಅಂತಾ ಸಾಂಗ್ ಪ್ಲೆ ಆಗಿ ಬಿಡ್ತಾ ಇತ್ತು.
ಕೂದಲಿನ ಕಾಳಜಿ ತೋರಿಸುತ್ತಿದ್ದ ಅಮ್ಮನಿಗೆ ಒಳಗೊಳಗೆ ಬೈತಿದ್ದ ನಾವು, ಹಾಸ್ಟೇಲಲ್ಲಿ ಈಗ ಒಬ್ಬರೆ ತಲೆ ಬಾಚ್ಕೊಬೇಕು, ಆ ಕೂದಲೋ ಬೇಸಗೆಯಲ್ಲಿ ನೀರಿಲ್ಲದೆ ಒಣಗಿದ ಕೊತ್ತಂಬರಿ ಸೊಪ್ಪಿನ ಸೂಡಿಗಿಂತ ಸಣ್ಣದಾಗಿ ಬಿಟ್ಟಿದೆ. ಯು ಶೆಪ್, ವಿ ಶೆಪ್ ಹೇರ್ ಕಟ್ ಮಾಡಿಕೊಂಡರು, ಈವಾಗ ಎಷ್ಟೇ ಟ್ರೆಂಡಿ ಹೆರ್ ಸ್ಟೈಲ್ ಇದ್ರು, ಅವಾಗಿನ ರಿಬ್ಬನಿಂದ ಕಟ್ಟಿರೋ ಜಡೆಯ ಝಲಕ್ಕೆ ಬೇರೆ. ಜಡೆ ಎಮೋಶನ್ ಜತೆ ಮನಸ್ಸಿಗೆ ಮುದ ನೀಡೋ ಬಾಲ್ಯದ ಸವಿನೆನಪು ನೆನೆದಷ್ಟು ಚೆಂದವೇ.
ಮಲ್ಲಮ್ಮ
ವಿಜಯಪುರ