Advertisement
ಸೇವೆಯ ನಿಮಿತ್ತ ಪ್ರಯಾಣಿಸುತ್ತಿದ್ದ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ಯೋಧ ಏಕನಾಥ ಶೆಟ್ಟಿ ಸೇರಿ 29 ಜನ ಭಾರತೀಯ ಸೈನಿಕರು ಇಂದಿಗೂ ಕಣ್ಮರೆಯಾಗಿಯೇ ಉಳಿದಿದ್ದಾರೆ. ಏಕನಾಥ ಶೆಟ್ಟಿ ಬರುವಿಕೆಯ ನಿರೀಕ್ಷೆಯಲಿರುವ ಕುಟುಂಬ ಸದಸ್ಯರು ಅನಾಥ ಭಾವದಲಿ ಮರುಗುತ್ತಿದ್ದಾರೆ.
ವಿಮಾನವೊಂದು ನಾಪತ್ತೆಯಾಗಿ ಕಿಂಚಿತ್ತು ಕುರಿಹು ಪತ್ತೆಯಾಗದಿರುವುದು ಭಾರತೀಯ ವಾಯುಪಡೆ ಇತಿಹಾಸದಲ್ಲೆ ಮೊದಲ ಕರಾಳ ನೆನಪಾಗಿದೆ. ಅಂದು ವಿಮಾನ ಪತ್ತೆ ಹಚ್ಚಲು ಕೇಂದ್ರ ಸರಕಾರ ಮತ್ತು ಮಿಲಿಟರಿ ತಜ್ಞರು ಸತತ ಮೂರು ತಿಂಗಳು ಎರಡು ಪಿ.8 ಎ ವಿಮಾನ, ಮೂರು ಡೋರ್ನಿಯರ್ ವಿಮಾನ, ಒಂದು ಜಲಾಂತರ್ಗಾಮಿ, ನೌಕಾಸೇನೆಯ 12 ನೌಕೆಗಳ ಮೂಲಕ ಪ್ರಯತ್ನಿಸಿದ್ದವು. ಗುರುವಾಯನಕೆರೆ ವೀರ ಸೇನಾನಿ ಏಕನಾಥ ಶೆಟ್ಟಿಯವರು ಅದೇ ವಿಮಾನದಲ್ಲಿ ತಮ್ಮ ಸೇವಾ ಪಯಣ ಆರಂಭಿಸಿದ್ದರು. ಆದರೆ ಅಂದು ಬೆಳಗ್ಗೆ 9.12 ಕ್ಕೆ ಸಂಪರ್ಕ ಕಡಿತಗೊಂಡು ಮಧ್ಯಾಹ್ನ 1.50ರ ವರೆಗೂ ಸಂಪರ್ಕ ಸಿಗದೇ ಇದ್ದಾಗ ವಾಯುಸೇನೆ ಮಾಹಿತಿ ನೀಡಿತ್ತು.
Related Articles
Advertisement
ಅಂದಿನಿಂದ ಇಂದಿನವರೆಗೂ ಏಕನಾಥ ಶೆಟ್ಟಿ ನೆನಪಿನಲ್ಲೆ ಪತ್ನಿ ಜಯಂತಿ ಶೆಟ್ಟಿ, ಮಗ ಅಕ್ಷಯ್ ಶೆಟ್ಟಿ, ಪುತ್ರಿ ಅಶಿತಾ ಶೆಟ್ಟಿ ಮರುಗುವಂತಾಗಿದೆ.
ಪುತ್ರಿ ಉದ್ಯೋಗ ನಿರೀಕ್ಷೆಯೂ ಈಡೇರಿಲ್ಲಮಗಳು ಅಶಿತಾ ಶೆಟ್ಟಿ ಎಂಎಚ್‌ಆರ್ ಡಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ ಬೆಂಗಳೂರು ಬಯೋಕಾನ್ ಲಿಮಿಟೆಡ್ ಕಂಪನಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಮಗ ಅಡ್ಯಾರು ಸಹ್ಯಾದ್ರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಪುತ್ರಿ ಸರಕಾರಿ ಹುದ್ದೆಯ ನಿರೀಕ್ಷೆಯಲ್ಲಿದ್ದು, ಅವಕಾಶ ಸಿಕ್ಕಲ್ಲಿ ತಂದೆಯಂತೆ ದೇಶ ಸೇವೆಗೆ ಸನ್ನದ್ಧರಾಗಿದ್ದಾರೆ. ಪತಿಯ ನೆನಪಲ್ಲಿ ವರ್ಷಗಳು ಕಳೆಯುತ್ತಿದ್ದೇವೆ. ಅಧಿಕಾರಿಗಳು, ಮಂತ್ರಿಗಳು ಮಗಳಿಗೆ ಸರಕಾರಿ ಉದ್ಯೋಗ ಭರವಸೆ ನೀಡಿದ್ದರು. ಇದೀಗ ಅವಳ ಶಿಕ್ಷಣ ಪೂರ್ಣಗೊಂಡಿದೆ. ಇನ್ನು ಭರವಸೆ ಈಡೇರಿಲ್ಲ ಎಂಬ ಬೇಸರ ಇದೆ ಎನ್ನುತ್ತಿದ್ದಾರೆ ಏಕನಾಥ ಶೆಟ್ಟಿ ಅವರ ಪತ್ನಿ ಜಯಂತಿ ಶೆಟ್ಟಿ.