Advertisement

ಸಂತ ಆಂತೋನಿ ಅವರ ಪುಣ್ಯ ಸ್ಮರಣಿಕೆಗಳ ಉತ್ಸವ

03:35 AM Feb 16, 2017 | |

ಮಂಗಳೂರು: ಸಂತ ಆಂತೋನಿ ಅವರ ಪುಣ್ಯ ಸ್ಮರಣಿಕೆಗಳ ಉತ್ಸವ ಬುಧವಾರ ನಗರದ ಮಿಲಾಗ್ರಿಸ್‌ ಚರ್ಚ್‌ನಲ್ಲಿ ಬಿಷಪ್‌ ರೆ| ಡಾ| ಅಲೋಶಿಯಸ್‌ ಪಾವ್‌ ಡಿ”ಸೋಜಾ ಅವರ ಅಧ್ಯಕ್ಷತೆಯಲ್ಲಿ ಜರಗಿತು.

Advertisement

ಹಜಾರಿಬಾಗ್‌ ಧರ್ಮಪ್ರಾಂತದ ಬಿಷಪ್‌ ಜೋ ಜೋ ಆನಂದ್‌ ಮತ್ತು 40 ಧರ್ಮಗುರುಗಳು ಉಪಸ್ಥಿತರಿದ್ದರು. ಸಂತ ಅಂತೋನಿ ಅವರು ದೇವರ ಪಾದಕಮಲ ಸೇರಿ 800 ವರ್ಷಗಳಾಗಿದ್ದರೂ ಅವರ ನಾಲಗೆ ಇನ್ನೂ ಹಾಳಾಗಾದೆ ತಾಜಾ ಸ್ಥಿತಿಯಲ್ಲಿ ಉಳಿದಿದ್ದು, ಈ ಸ್ಮರಣಿಕೆ ಸ್ಮರಣಾರ್ಥ ಪ್ರತೀ ವರ್ಷ ಹಬ್ಬ ಆಚರಿಸಲಾಗುತ್ತದೆ. ಬಲಿಪೂಜೆಯಲ್ಲಿ ಬೋಂದೆಲ್‌ ಚರ್ಚ್‌ನ ಧರ್ಮಗುರು ಫಾ| ಆ್ಯಂಡ್ರು ಡಿ’ಸೋಜಾ ಅವರು ಸಂತ ಅಂತೋನಿ ಅವರ ಸೇವೆಯ ಜೀವನದ ಮೇಲೆ ಬೆಳಕು ಚೆಲ್ಲಿ ಪ್ರವಚನ ನೀಡಿದರು.

ಬುಧವಾರ ಬೆಳಗ್ಗೆ 8.15ಕ್ಕೆ ವಂ| ವಿಲಿಯಮ್‌ ಬರೋಕಸ್‌ ಅವರು ಪ್ರಾಯಸ್ಥರಿಗಾಗಿ ಮಿಲಾಗ್ರಿಸ್‌ ಚರ್ಚ್‌ನಲ್ಲಿ ಬಲಿ ಪೂಜೆ ಅರ್ಪಿಸಿದರು. ಮಂಗಳೂರು ಧರ್ಮಪ್ರಾಂತದ ಪ್ರಧಾನ ಗುರು ಮೊ ಡೆನಿಸ್‌ ಮೊರಾಸ್‌ ಪ್ರಭು ಬೆಳಗ್ಗೆ 11 ಗಂಟೆಗೆಆಶ್ರಮದ ನಿವಾಸಿಗಳಿಗೆ, ವಿಶೇಷ ಆಹ್ವಾನಿತ ರಿಗಾಗಿ ಹಲವಾರು ಧರ್ಮಗುರುಗಳೊಂದಿಗೆ ಜೆಪ್ಪು ಆಶ್ರಮದಲ್ಲಿ ಬಲಿಪೂಜೆ ಅರ್ಪಿಸಿದರು. 

ಸಂಜೆ 4.30ಕ್ಕೆ ಮಾಹೆ ಪುಣ್ಯಕ್ಷೇತ್ರದ ನಿರ್ದೇಶಕ ವಂ| ಜೆರೋಮ್‌ ಚೆಂಗಂತರ ಅವರು ಮಲಯಾಳಂ ಭಾಷೆಯಲ್ಲಿ ಮಿಲಾಗ್ರಿಸ್‌ ಚರ್ಚ್‌ನಲ್ಲಿ ಬಲಿಪೂಜೆ ಅರ್ಪಿಸಿದರು. ಸಂಜೆ ನಡೆದ ಬಲಿಪೂಜೆಯಲ್ಲಿ ಅಧಿಕ ಭಕ್ತರು ಭಾಗವಹಿಸಿದರು. ಪೂಜೆಯಲ್ಲಿ ಪಾಲ್ಗೊಂಡ
ವರೆಲ್ಲರಿಗೂ ಸಂತ ಅಂತೋನಿಯವರ ಪ್ರಸಾದದ ಸಂಕೇತವಾಗಿ ಬ್ರೆಡ್‌ ವಿತರಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next