Advertisement

ದೇಶದಲ್ಲಿ ಅಭಿವೃದ್ಧಿ ಪರ್ವ ಆರಂಭಿಸಿದ್ದು ಕಾಂಗ್ರೆಸ್‌

02:43 PM Mar 01, 2022 | Team Udayavani |

ಕೆಜಿಎಫ್: ಬ್ರಿಟಿಷರನ್ನು ದೇಶದಿಂದ ಓಡಿಸಿದ್ದು, ಅದಕ್ಕಾಗಿ ಹೋರಾಟಗಳನ್ನು ಮಾಡಿದ್ದು, ನಂತರದ ದಿನಗಳಲ್ಲಿ ದೇಶದಲ್ಲಿ ಕಾರ್ಖಾನೆಗಳನ್ನು ತೆರೆದಿದ್ದು ಅಭಿವೃದ್ಧಿ ಪರ್ವವನ್ನು ಸ್ಥಾಪಿಸಿದ್ದು ಕಾಂಗ್ರೆಸ್‌ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.

Advertisement

ನಗರದಲ್ಲಿಂದು ಕಾಂಗ್ರೆಸ್‌ ಪಕ್ಷದ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರ ಅಧಿಕಾರಕ್ಕೆ ಬರಬೇಕಾದರೆ ಸಂಘಟನೆಮುಖ್ಯ. ಸಂಘಟನೆಯಿಂದಲೇ ಅಧಿಕಾರಕ್ಕೆ ಬಂದು ಸೇವೆ ಮಾಡಬಹುದು. ಈಗಿನಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಂದ ಬಹಳಷ್ಟು ನಿರೀಕ್ಷೆ ಮಾಡುತ್ತಿದೆ. ಸ್ವಾತಂತ್ರ್ಯ ಹೋರಾಟದ ಸಮಯ ದಲ್ಲಿ ನಿಸ್ವಾರ್ಥವಾಗಿ ಕಾಂಗ್ರೆಸ್‌ ಪಕ್ಷದವರು ಕೆಲಸ ಮಾಡಿದ್ದರು ಎಂಬುದನ್ನು ನೆನೆಪಿಸಿಕೊಳ್ಳಬೇಕು ಎಂದರು.

ಕೆಸಿ.ರೆಡ್ಡಿಯಂತಹ ಹೋರಾಟಗಾರರು ಪ್ರಥಮ ಮುಖ್ಯಮಂತ್ರಿಯಾಗಿದ್ದರು. ಅಂತಹ ಹೋರಾಟಗಾರರನ್ನು ತಾಲೂಕು ನೀಡಿದೆ. ಕಾರ್ಯಕರ್ತರುಕಾಂಗ್ರೆಸ್‌ ಇತಿಹಾಸವನ್ನು ಜನ ಸಾಮಾನ್ಯರಿಗೆತಿಳಿಸಬೇಕು. ಮುಂದಿನ ದಿನಗಳಲ್ಲಿ ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡಿ ಸದಸ್ಯತ್ವ ನೋಂದಣಿ ಕಾರ್ಯಕ್ರಮ ವನ್ನು ಚಾಲನೆ ನೀಡಬೇಕು ಎಂದರು.

ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಸಂದರ್ಭದಲ್ಲಿ ನುಡಿದಂತೆ ನಡೆದರು. ಕೆಸಿ ವ್ಯಾಲಿಯೋಜನೆಗೆ ಹಣ ಮೀಸಲಿಟ್ಟು, ಇಡೀ ಕೋಲಾರದಲ್ಲಿಂದು ಎಲ್ಲಾ ಕೆರೆ ಕಟ್ಟೆಗಳು ತುಂಬುವಂತೆಮಾಡಿದ್ದಾರೆ. ಮೇಕೆದಾಟು ಯೋಜನೆಯಲ್ಲಿನೀರು ವ್ಯರ್ಥವಾಗದಂತೆ ತಡೆಯಲು ಕಾಂಗ್ರೆಸ್‌ ಶ್ರಮಿಸುತ್ತಿದೆ ಎಂದು ಹೇಳಿದರು.

ಇಂದು ಯುವಕರಿಗೆ ಯಾವುದೇ ಉದ್ಯೋಗವಿಲ್ಲ. ಕೇಂದ್ರ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳನ್ನುಮುಚ್ಚುತ್ತಿರುವ ಇಂದಿನ ಸರ್ಕಾರ ಏನು ಸಾಧನೆಮಾಡಿದೆ ಎಂದು ಪ್ರಶ್ನಿಸಿದರು. ಹಿಜಾಬ್‌ಪ್ರಕರಣ ಗಂಭೀರ ಸ್ವರೂಪ ತಾಳುತ್ತಿದೆ. ಮಕ್ಕಳಲ್ಲಿವಿಷಬೀಜ ಬಿತ್ತಲಾಗುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.

Advertisement

ಕಾಂಗ್ರೆಸ್‌ ಸದಸ್ಯರನ್ನು ನಿಷ್ಠೆ ಇರುವವರನ್ನುಮಾತ್ರ ಮಾಡಬೇಕು. ಮುಂದಿನ ದಿನಗಳಲ್ಲಿ ಸದಸ್ಯರಾಗಿರುವವರಿಗೆ ಅಧಿಕಾರದಅವಕಾಶಗಳು ಬರುತ್ತವೆ. ಬೂತ್‌ ಮಟ್ಟದಪದಾಧಿಕಾರಿಗಳಿಗೆ ಮತದಾನದ ಹಕ್ಕು ಇರುತ್ತದೆ.ಕಾರ್ಯಕರ್ತರು ಬಯಸಿದವರು ಮಾತ್ರ ರಾಜ್ಯಮತ್ತು ರಾಷ್ಟ್ರ ಮಟ್ಟದಲ್ಲಿ ನಾಯಕರಾಗಲು ಸಾಧ್ಯವಾಗುತ್ತದೆ ಎಂದರು.

ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿ ಇರದ ಸಂದರ್ಭದಲ್ಲಿ ಕೂಡ ಕಾರ್ಯಕರ್ತರು ನನ್ನ ಜೊತೆ ಇದ್ದರು. ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ 10 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧಕ್ಕೆ ಮಂಜೂರುಆಯಿತು. 8 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆಗೆಹಣ ಮಂಜೂರಾಯಿತು. ಕ್ಷೇತ್ರದಲ್ಲಿ 50 ರಿಂದ60 ಕೋಟಿ ಅಭಿವೃದ್ಧಿ ಕೆಲಸ ಆಯಿತು. ಎರಡುಕೋಟಿ ವೆಚ್ಚದಲ್ಲಿ ತಾಪಂ ಕಚೇರಿ ಕಾಮಗಾರಿ ನಡೆಯುತ್ತಿದೆ ಎಂದರು.

ಕೆಪಿಸಿಸಿ ವೀಕ್ಷಕರಾಗಿ ಕಾವ್ಯ ಮತ್ತು ಶಬೀರ್‌ ಆಲಿ ಆಗಮಿಸಿದ್ದರು. ನಗರಸಭೆಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ, ವೆಂಕಟಕೃಷ್ಣರೆಡ್ಡಿ,ಉಷ, ಕೃಷ್ಣಪ್ಪ, ಆನಂದಮೂರ್ತಿ, ರಾಧಾಕೃಷ್ಣರೆಡ್ಡಿ, ಮೊದಲೈಮುತ್ತು, ತೇನ್‌ಮೋಳಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next