ಮೋದಿ ಕುಲನಾಮ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆಗೆ ಒಳಗಾಗುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡ ಬಳಿಕ ಪ್ರಜಾಪ್ರಾತಿನಿಧ್ಯ ಕಾಯ್ದೆಯ ನಿಬಂಧನೆಗಳ ಕುರಿತು ಹೆಚ್ಚು ಹೆಚ್ಚು ಚರ್ಚೆಗಳು ಆರಂಭವಾಗಿವೆ. 1988ರಿಂದ ಈವರೆಗೆ ದೇಶದಲ್ಲಿ ಬೇರೆ ಬೇರೆ ಕಾರಣಗಳಿಗಾಗಿ 42 ಮಂದಿ ಜನಪ್ರತಿನಿಧಿಗಳು ತಮ್ಮ ಸಂಸತ್ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ.
ಯಾವ್ಯಾವ ಕಾರಣಕ್ಕೆ ಅನರ್ಹ?
ಪಕ್ಷಾಂತರ, ಅಸಂಸದೀಯ ವರ್ತನೆ, ಅಪರಾಧದ ಹಿನ್ನೆಲೆ, 2 ಅಥವಾ ಅದಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವುದು, ಸಂಸತ್‌ನಲ್ಲಿ ಪ್ರಶ್ನೆ ಕೇಳುವುದಕ್ಕೆ ಲಂಚ ಪ್ರಕರಣ, ಅಡ್ಡ ಮತದಾನ ಇತ್ಯಾದಿ. 1985ರಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಯಾದ ಬಳಿಕ ಮೊದಲ ಬಾರಿಗೆ ಅನರ್ಹಗೊಂಡಿದ್ದು ಕಾಂಗ್ರೆಸ್ ಸಂಸದ ಲಾಲುªಹೋಮ. ಅನಂತರ 9ನೇ ಲೋಕಸಭೆಯಲ್ಲಿ ಜನತಾದಳ ನಾಯಕ ವಿ.ಪಿ.ಸಿಂಗ್ ಮೈತ್ರಿ ಸರಕಾರ ರಚಿಸಿದ ಸಂದರ್ಭದಲ್ಲಿ ಲೋಕಸಭೆಯ 9 ಸದಸ್ಯರು ಪಕ್ಷಾಂತರ ಕಾಯ್ದೆಯ ಉರುಳಿಗೆ ಸಿಲುಕಿ ಅನರ್ಹಗೊಂಡಿದ್ದರು.
ರಾಜ್ಯಸಭೆ ಸದಸ್ಯತ್ವ ಕಳೆದುಕೊಂಡವರು
ಮುಫ್ತಿ ಮೊಹಮ್ಮದ್ ಸಯೀದ್ (1989)
ಸತ್ಯಪಾಲ್ ಮಲಿಕ್ (1989)
ಶರದ್ ಯಾದವ್ (2017)
ಅಲಿ ಅನ್ವರ್ (2017)
ಶಿಬು ಸೊರೇನ್ (2001)
ಜಯಾ ಬಚ್ಚನ್ (2006)