Advertisement

ಆಸ್ತಿ ವಿವರ ಸಲ್ಲಿಸದ ಹನ್ನೊಂದು ಗ್ರಾಪಂ ಸದಸ್ಯರ ಸದಸ್ಯತ್ವ ರದ್ದು

06:00 AM Jun 01, 2018 | |

ಬೆಂಗಳೂರು: ಕಾನೂನು ಪ್ರಕಾರ ರಾಜ್ಯ ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಸದ ರಾಜ್ಯದ 11 ಗ್ರಾಮ ಪಂಚಾಯಿತಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಲಾಗಿದೆ. ಚುನಾವಣಾ ಆಯೋಗಕ್ಕೆ 2016ನೇ ಸಾಲಿನ ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರಣೆ ಸಲ್ಲಿಸದ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಆಲದಕಟ್ಟೆ ಕೆ.ಎಂ-1 ಗ್ರಾ.ಪಂ. ಸದಸ್ಯ ರಾಜಶೇಖರ ಶಿವಲಿಂಗಯ್ಯ ಹಿರೇಮಠ, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಗರಗ ಗ್ರಾ.ಪಂ. ಸದಸ್ಯ ಜಿ.ಪಿ. ಓಂಕಾರಪ್ಪ, ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ರಾಯನಾಳ ಗ್ರಾ.ಪಂ. ಸದಸ್ಯೆ ಮಂಜುಳಾ ಅವರನ್ನು ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ.

Advertisement

ಅದೇ ರೀತಿ 2017ನೇ ಸಾಲಿನ ಆಸ್ತಿ ಮತ್ತು ಹೊಣೆಗಾರಿಕೆ ವಿವರ ಸಲ್ಲಿಸದ ತುಮಕೂರು ತಾಲೂಕಿನ ಗಂಗೋನಹಳ್ಳಿ ಗ್ರಾ.ಪಂ. ಸದಸ್ಯೆ ರಾಜಮ್ಮ, ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಕಾರ್ಮಾಡು ಗ್ರಾ.ಪಂ. ಸದಸ್ಯ ಸಿ.ಪಿ.ಸಮೀರ, ನೆಲಜಿ ಗ್ರಾ.ಪಂ. ಸದಸ್ಯೆ ಮೇದರ ಶೋಭಾ ಮಂದಣ್ಣ, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮಾಲಗಾರನಹಳ್ಳಿ ಗ್ರಾ.ಪಂ. ಸದಸ್ಯೆ ರೂಪ, ಹಾಸನ ಜಿಲ್ಲೆಯ ಕೌಶಿಕ ಗ್ರಾ.ಪಂ.ನ ಶ್ರೀರಾಮನಗರ ವಾರ್ಡ್‌ ಸದಸ್ಯೆ ಶಾರದಾಬಾಯಿ, ಸತ್ಯಮಂಗಲ ಗ್ರಾ.ಪಂ. 6ನೇ ವಾರ್ಡ್‌ ಸದಸ್ಯ ಎ.ಶ್ರೀನಿವಾಸ, ಬೆಂಗಳೂರು ನಗರ ಜಿಲ್ಲೆ ಉತ್ತರ ತಾಲೂಕಿನ ಕೊಡಗಿ ತಿರುಮಳಾಪುರ ಗ್ರಾ.ಪಂ. ಸದಸ್ಯೆ ಎ.ಪುಷ್ಪಲತಾ, ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಹಲಕಟ್ಟಾ ಸದಸ್ಯೆ ರೇಣುಕಾ ಸದಸ್ಯತ್ವ  ಕಳೆದುಕೊಂಡಿದ್ದಾರೆ. 2017-18ನೇ ಸಾಲಿನ ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರಗಳನ್ನು ಆಯೋಗಕ್ಕೆ ಸಲ್ಲಿಸದೆ ಇರುವ ಗ್ರಾ.ಪಂ, ತಾ.ಪಂ ಹಾಗೂ ಜಿ.ಪಂ ಸದಸ್ಯರು ಕೂಡಲೇ ಆನ್‌ಲೈನ್‌ ಮೂಲಕ ಸಲ್ಲಿಸಲು ಸೂಚಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next