Advertisement
ಈ ಕುರಿತು ಮಾಹಿತಿ ಕೇಳಿದರೆ ತಿಂಗಳವರೆಗೆ ಕಾಯಬೇಕೆ ಎಂದು ಜಿಲ್ಲಾ ಕೃಷಿ ಮತ್ತು ಕೃಷಿ ಕೈಗಾರಿಕೆ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಬೂಟ್ ಹಾಗೂ ಸಾಕ್‌ಗಳನ್ನು ಎಲ್ಲಿಂದ ಖರೀದಿಸುತ್ತೀರಿ ಎಂದು ಪ್ರಶ್ನಿಸಿದರು. ಪಂಜಾಬ ಬೂಟ್ ಹೌಸ್‌ನಿಂದ ಖರೀದಿಸುತ್ತೇವೆ ಎಂದು ಶಿಕ್ಷಣಾಧಿಕಾರಿಗಳು ತಿಳಿಸಿದರು. ಈ ಕುರಿತಂತೆ ಕೋಳಕೂರ, ಆಂದೋಲಾ ಸಿಆರ್‌ಸಿಗಳಿಗೆ ಪ್ರಶ್ನಿಸಿದರೆ ಅವರು ಮಾಹಿತಿ ನೀಡಿಲ್ಲ. ಅವರಿಗೆ ನೋಟಿಸ್ ನೀಡಿ ಎಂದು ಹೇಳಿದಾಗ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಪ್ಪ ಹುಲಕಲ್ ಕ್ಷಮೆ ಕೇಳಿದರು.
ನೀರು ಸರಬರಾಜು ಇಲಾಖೆ ಅಧಿಕಾರಿ ಪಾಂಡುರಂಗ ಸಭೆ ಗಮನಕ್ಕೆ ತಂದರು. ಮುಂದೆ ಜೂನ್ ತಿಂಗಳ ವರೆಗೆ ಬಹಳಷ್ಟು ನೀರಿನ ಕೊರತೆ ಉಲ್ಬಣ ಆಗುತ್ತದೆ ಎಂದು ಜಿಪಂ ಸದಸ್ಯರು ತಿಳಿಸಿದರು. ಆಗ ಈಗಾಗಲೇ ಹಳ್ಳಿಗಳಿಗೆ ಕೊಳವೆ ಬಾವಿ ಹಾಕುತ್ತಿದ್ದೇವೆ ಎಂದು ಪಾಂಡುರಂಗ
ತಿಳಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಜಿಪಂ ಸದಸ್ಯರು ಸುಮಾರು 70ರಿಂದ 80 ಲಕ್ಷ ರೂ. ವರೆಗೆ ಖರ್ಚುಮಾಡಿ ಬಾವಿ ಹಾಗೂ ನೀರಿನ ಟ್ಯಾಂಕ್ ನಿರ್ಮಿಸಿದರೂ ಅವುಗಳು ಹಾಳಾಗಿವೆ. ಅನಾವಶ್ಯಕವಾಗಿ ಕೊಳವೆ ಬಾವಿ ಹಾಕಿ ನೀರು ಲಭ್ಯವಾಗದಿದ್ದರೇ ಯಾರು ಹೊಣೆ ಎಂದು ಪ್ರಶ್ನಿಸಿದರು.
Related Articles
ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಸಿ. ಮಾನೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು ಇದ್ದರು.
Advertisement
ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ರದ್ದುಗೊಳಿಸಿ ಜೇವರ್ಗಿ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಯನ್ನು ತಾಪಂ ಹಾಗೂ ಜಿಪಂ ಕಾಯ್ದೆ ಅನುಸಾರವಾಗಿ ಚುನಾವಣೆ ನಡೆಸಬೇಕಿತ್ತು. ಆದರೆ ಅದು ನಡೆದಿಲ್ಲ. ಅಲ್ಲದೇ ಸದಸ್ಯರಿಗೆ ಯಾವುದೇ ನೋಟಿಸ್ ನೀಡಿಲ್ಲ. ಆದ್ದರಿಂದ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ರದ್ದು ಪಡಿಸಬೇಕು ಎಂದು ಜಿಪಂ ಸದಸ್ಯರು ತಿಳಿಸಿದಾಗ, ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳು ಸದಸ್ಯರ ಹೊಂದಾಣಿಕೆ ಮೇರೆಗೆ ಆಯ್ಕೆ ಮಾಡಿದ್ದೇವೆ ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ನೀವೇ ಸುಪ್ರಿಂ ಎಂದು ತಿಳಿದಿದ್ದಿರಾ ಎಂದು ಜಿಪಂ ಸದಸ್ಯರು ತರಾಟೆ ತೆಗೆದುಕೊಂಡರು.
ಫಲಾನುಭವಿಗಳಿಂದ ಹಣ ವಸೂಲಿ ಜೇವರ್ಗಿ ತಾಲೂಕಿನಲ್ಲಿ ಬರುವ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿನ ವಸತಿ ಯೋಜನೆಯಡಿ ಫಲಾನುಭವಿಗಳಿಂದ ಸುಮಾರು 20 ರಿಂದ 40ಸಾವಿರ ರೂ. ವರೆಗೆ ಅ ಧಿಕಾರಿಗಳು ಹಾಗೂ ಚುನಾಯಿತ ಸದಸ್ಯರು ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪವಿದೆ. ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಜಿಪಂ ಸದಸ್ಯರಾದ ಶಿವರಾಜ ಪಾಟೀಲ ರದ್ದೇವಾಡಗಿ, ಶಾಂತಪ್ಪ ಕೂಡಲಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.