Advertisement
ಪುರಸಭೆಯ 23 ಸದಸ್ಯರ ಪೈಕಿ ಬಹುತೇಕ ಮಂದಿ ತಮ್ಮ ಸ್ಥಾನಗಳಿಗೆ ಡಿಸೆಂಬರ್ ಎರಡನೇ ವಾರ ರಾಜೀನಾಮೆ ನೀಡಿ ರಾಜಕೀಯಿದಂದ ದೂರ ಉಳಿಯಲು ಒಂದೆರಡು ಸುತ್ತು ಸಭೆ ನಡೆಸಿ ನಿರ್ಧರಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
Related Articles
Advertisement
ರೇವಣ್ಣ ದರ್ಬಾರ್: ಪುರಸಭೆ ಅಭಿವೃದ್ಧಿ ಮತ್ತು ಕ್ರಿಯಾಯೋಜನೆಗಳನ್ನು ರೂಪಿಸುವ ಹಕ್ಕು ಕಳೆದುಕೊಂಡಿದ್ದು, ಎಲ್ಲಕ್ಕೂ ಮಾಜಿ ಸಚಿವ ಹಾಗೂ ಶಾಸಕ ರೇವಣ್ಣ ಅವರ ಕುಟುಂಬ ಹಾಕಿದ ಗೆರೆಯನ್ನು ದಾಟಲಾಗದೆ, ನಾಮ್ ಕೇ ವಾಸ್ತೆ ಮಾಸಿಕ ಸಭೆಗಳನ್ನು ನಡೆಸುತ್ತ ಬಂದಿರುವುದು ಸದಸ್ಯರಲ್ಲಿಯೇ ಬೇಸರಕ್ಕೆ ಕಾರಣವಾಗಿದೆ. ಅಲ್ಲದೆ ಜನರು ಕೇಳುವ ಪ್ರಶ್ನೆಗಳಿಗೆ ಉತ್ತರ ಹೇಳದ ಸ್ಥಿತಿ ನಿರ್ಮಾಣವಾಗಿದೆ.
ಇತ್ತೀಚಿನ ದಿನಗಳಲ್ಲಿ ಪುರಸಭೆ ಮಾಸಿಕ ಸಭೆಗೆ ಮೊದಲು ಶಾಸಕ ರೇವಣ್ಣ ಅವರ ಮನೆಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಿ ನಾಳಿನ ಪುರಸಭೆ ಮಾಸಿಕ ಸಭೆ ಇದೇ ರೀತಿ ನಡೆಸಬೇಕೆಂದು ಹುಕುಂ ನೀಡಿ ಕಳುಹಿಸುತ್ತಿರುವುದು ಆಯ್ಕೆಗೊಂಡ ಸದಸ್ಯರಲ್ಲಿ ಅಸಮಾಧಾನವನ್ನು ಸೃಷ್ಟಿಸುತ್ತಿದೆ.
ಪ್ರತಿಯೊಂದಕ್ಕೆ ಆಜ್ಞೆ ಪರಿಪಾಲನೆ : ಪುರಸಭೆಯಲ್ಲಿನ ಸಿಬ್ಬಂದಿಗಳು ತಮಗೆ ಮನ ಬಂದಂತೆ ನಡೆದುಕೊಳ್ಳುತ್ತಿ ರುವುದು ಮತ್ತು ಭ್ರಷ್ಟಾಚಾರದ ಕೂಪವಾಗಿರುವುದು ಆಯ್ಕೆಗೊಂಡ ಸದಸ್ಯರುಗಳಿಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಸಣ್ಣಪುಟ್ಟ ಸಾರ್ವಜನಿಕ ಸಮಸ್ಯೆಗಳಿಗೂ ರೇವಣ್ಣ ಅವರ ಕುಟುಂಬದ ಅಣತಿಯಂತೆ ಪುರಸಭೆ ಸಿಬ್ಬಂದಿ ನಡೆದುಕೊಳ್ಳುತ್ತಿರುವುದು ಸದಸ್ಯರುಗಳಿಗೆ ಮೂಲ ಬೇಸರಕ್ಕೆ ಕಾರಣವಾಗಿದೆ.
ನೆನಪಿಸಿದ ಬೇಲೂರು ಪುರಸಭೆ : ಮೂರು ತಿಂಗಳ ಹಿಂದೆ ಜಿಲ್ಲೆ ಬೇಲೂರು ಪುರಸಭೆ ಚುನಾವಣೆಯಲ್ಲಿ ಆಲ್ಲಿನ ಜನತೆ ಭದ್ರಕೋಟೆಯಾಗಿರುವ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಮೂಲೆಗುಂಪು ಮಾಡಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಕೈಹಿಡಿದಿದ್ದರು. ಬಳಿಕ ಜೆಡಿಎಸ್ ಸ್ಥಾನಗಳನ್ನು ಪಡೆಯಿತು ಆದರೆ ಸದಸ್ಯರಿಗೆ ಸ್ಥಾನಮಾನ ಸಿಗದಂತಾಯಿತು.
ವ್ಯವಸ್ಥಾಪಕಿ ಈಗ ಮುಖ್ಯಾಧಿಕಾರಿ
ಪುರಸಭೆ ಮುಖ್ಯಾಧಿಕಾರಿ ಆಗಿರುವ ಪುರಸಭೆಯಲ್ಲಿ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಸುತ್ತಿದ್ದ ಶಾಂತಲಾ ಅವರಿಗೆ ಪುರಸಭೆ ಮುಖ್ಯಾಧಿಕಾರಿ ಅಗಿ ನೇಮಕಗೊಂಡಿರುವುದು ಯಾರದೋ ಕೈಯಲ್ಲಿ ಮಾಣಿಕ್ಯ ನೀಡಿದಂತಾಗಿದೆ. ನೀವು ಅಧ್ಯಕ್ಷರಾಗಿ ಮುಂದುವರೆಯಬೇಕಾದರೆ ಅದಕ್ಕೆ ನನ್ನ ಸಹಕಾರ ಬೇಕು ಎಂಬ ದರ್ಪದ ಮಾತುಗಳು ಅಧ್ಯಕ್ಷೆ ವೀಣಾ ಅವರ ಮನಸ್ಸನ್ನು ಘಾಸಿಗೊಳಿಸಿದೆ.