Advertisement
ಪಟ್ಟಣದ ಗುರುಭವನದಲ್ಲಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ 2018-19ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಸಂಸ್ಥೆಯಲ್ಲಿ ಉತ್ತಮವಾಗಿ ನಡೆಯುತ್ತಿತ್ತು. ಗೋಡೋನ್‌ನಲ್ಲಿ ಅವ್ಯವಹಾರದಿಂದಾಗಿ ಗೋಡೋನ್ ಮುಚ್ಚಿದ ಪರಿಣಾಮ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಎತ್ತುವಳಿಗೆ ಕಡಿವಾಣ ಬಿದ್ದ ಪರಿಣಾಮ ಸುಮಾರು 4 ಲಕ್ಷ ನಷ್ಟ ರೂ. ಉಂಟಾಗಿದೆ ಎಂದರು.
Related Articles
Advertisement
ದೂರುಗಳ ಸುರಿಮಳೆ: ಮತ್ತೂರ್ವ ಸದಸ್ಯ ಶಿವಮೂರ್ತಿ ಸಂಸ್ಥೆ ನಡೆಸುತ್ತಿರುವ ಪೆಟ್ರೋಲ್ ಬಂಕ್‌ನಲ್ಲಿ ಹಣ ದುಬಳಕೆಯಾಗಿದೆ. ಸೊಸೈಟಿಯ ಹಣವನ್ನು ಸಹ ದುಬಳಕೆಯಾಗಿದ್ದು, ಕೂಡಲೇ ತನಿಖೆಯಾಗಬೇಕು. ತನಿಖೆ ಮುಗಿಯುವವರೆಗೆ ಸಂಸ್ಥೆಯ ಕಾರ್ಯದರ್ಶಿ ಲೂಸಿ ಪ್ಲಾರಿನ್ ಅವರನ್ನು ಅಮಾನತಿನಲ್ಲಿಟ್ಟು ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು ಎಂದು ದೂರಿನ ಸುರಿಮಳೆಯನ್ನು ಸದಸ್ಯರು ಮಾಡಿದ್ದಾರೆ.
ಸಭೆಯಲ್ಲಿ ಪ್ರತಿಭಟನೆ: ಪಾಳ್ಯ ಗ್ರಾಮದ ಸದಸ್ಯ ಪರಶಿವ ಟಿಎಪಿಸಿಎಂಎಸ್‌ನಲ್ಲಿ ಸಾಕಷ್ಟು ಹಣ ದುರ್ಬಳಕೆಯಾಗಿದೆ ಹೊರತು ಸದಸ್ಯರಿಗೆ ಯಾವುದೇ ತರಹದ ಅನುಕೂಲ ಆಗಿಲ್ಲ. ಸಂಸ್ಥೆಯ ಪದಾಧಿಕಾರಿಗಳು ಹಣವನ್ನು ನುಂಗಿ ಸಂಸ್ಥೆಯ ಕಾರ್ಯದರ್ಶಿ ಕೆಲಸ ಕಳೆದುಕೊಳ್ಳುವಂತೆ ಆಗಿದ್ದು, ಈ ಎಲ್ಲಾ ಅವ್ಯವಹಾರಕ್ಕೆ ಅಧ್ಯಕ್ಷರು ಸೂಕ್ತ ಉತ್ತರ ನೀಡಬೇಕೆಂದು ಸಭೆಯ ಮುಂಭಾಗ ಪ್ರತಿಭ ಟಿಸಿ ಧರಣಿ ಕುಳಿತರು.
ಸದಸ್ಯರ ದೂರಿನಂತೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಂಡು ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದ ಅಧ್ಯಕ್ಷರು, ಸಂಸ್ಥೆ ವತಿಯಿಂದ ನೂತನವಾಗಿ ನಿರ್ಮಿಸಿರುವ ಮಳಿಗೆಯಲ್ಲಿ ಸಣ್ಣಪುಟ್ಟ ಕೆಲಸ ಪೂರ್ಣಗೊಳ್ಳುತ್ತಿದ್ದಂತೆ ಸಾರ್ವಜನಿಕರ ಉಪಯೋಗಕ್ಕೆ ಉದ್ಘಾಟಿಸಲಾಗುವುದು ಎಂದರು.
ನೂತನ ಕಲ್ಯಾಣ ಮಂಟಪ: ಸರ್ವಸದಸ್ಯರು ಟಿಎಪಿಸಿಎಂಎಸ್ ವತಿಯಿಂದ ನೂತನ ಕಲ್ಯಾಣ ಮಂಟಪವೊಂದನ್ನು ನಿರ್ಮಿಸುವಂತೆ ಸಲಹೆ ನೀಡಿದ್ದು, ಕೂಡಲೇ ಕಲ್ಯಾಣ ಮಂಟಪವೊಂದನ್ನು ನಿರ್ಮಾಣ ಮಾಡಿ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಕೊಡಲಾಗುವುದು ಎಂದು ತಿಳಿಸಿದರು.
ಸಂಸ್ಥೆಯನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ದಿವಂಗತ ಜಿ.ರಾಜೂಗೌಡರು ಮತ್ತು ಮಾಜಿ ಸಚಿವ ಎಚ್.ನಾಗಪ್ಪ ಅವರು ಸ್ಥಾಪಿಸಿದ ಈ ಸಂಸ್ಥೆಗೆ ಯಾವುದೇ ತರಹದ ಕಪ್ಪುಚುಕ್ಕೆ ಬರದ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ಸದಸ್ಯರ ಸದ್ದುಗದ್ದಲದೊಂದಿಗೆ ಸಭೆ ಮುಕ್ತಾಯಗೊಳಿಸಿದರು. ಉಪಾಧ್ಯಕ್ಷೆ ಉತ್ತಮ್ಮ, ನಿರ್ದೇಶಕರಾದ ಮಹದೇವಸ್ವಾಮಿ, ಲಿಂಗರಾಜು, ಮಹದೇವಸ್ವಾಮಿ, ಮಾದೇಶ, ಗೋಪಾಲನಾಯ್ಡು, ಮಂಜುನಾಥ, ಇತರರು ಇದ್ದರು.