Advertisement

ರಾಜಧನ ಬಿಡುಗಡೆಗೆ ಆಗ್ರಹಿಸಿ ವಿಧಾನ ಪರಿಷತ್ ಚುನಾವಣೆ ಬಹಿಷ್ಕಾರ!

06:09 PM Dec 10, 2021 | Team Udayavani |

ತೀರ್ಥಹಳ್ಳಿ : ಗ್ರಾಮಪಂಚಾಯ್ತಿಗೆ ರಾಜಧನ ಬಿಡುಗಡೆ ವಿಚಾರದಲ್ಲಿ ತಾಲ್ಲೂಕಿನ ನಾಲೂರು – ಕೋಳಿಗೆ ಗ್ರಾಮ ಪಂಚಾಯತಿ ಸದಸ್ಯರಿಬ್ಬರು ವಿಧಾನ ಪರಿಷತ್ ಚುನಾವಣೆ ಮತದಾನ ಮಾಡಲು ಹೋಗದೆ ಮತದಾನವನ್ನು ಬಹಿಷ್ಕರಿಸಿದ್ದಾರೆ.

Advertisement

ಕೋಳಿಗೆ ಗ್ರಾಪನ ಜೆಡಿಎಸ್ ಬೆಂಬಲಿತ ಸಂದೀಪ್ ಗಾಡರಗದ್ದೆ ಮತ್ತು ಸುಧಾ ದೇವರಾಜ್ ಮತದಾನ ಬಹಿಷ್ಕರಿಸಿದ್ದಾರೆ. ಎರಡು ವರ್ಷದಿಂದ ಗ್ರಾಮ ಪಂಚಾಯತಿಗೆ ಬರಬೇಕಿದ್ದ 2 ಕೋಟಿ ರಾಜಧನ ಹಣವನ್ನು ಅಧಿಕಾರಿಗಳು ಬಿಡುಗಡೆ ಮಾಡಿಲ್ಲವೆಂದು ಆರೋಪಿಸಿ ಇಬ್ಬರು ಸದಸ್ಯರು ಮತ ದಾನ ಬಹಿಷ್ಕರಿಸಿದ್ದಾರೆ.

ಈ ಗ್ರಾಮ ಪಂಚಾಯತಿ ಯಲ್ಲಿ 7 ಜನ ಸದಸ್ಯರು ಮತದಾನ ಬಹಿಷ್ಕರಿಸುವುದಾಗಿ ಒಂದು ವಾರದ ಹಿಂದೆ ಹೇಳಿಕೆ ಕೊಟ್ಟಿದ್ದರು. ಆದರೆ ಮತದಾನದ ದಿನವಾದ ಶುಕ್ರವಾರದಂದು ಇಬ್ಬರು ಸದಸ್ಯರನ್ನ ಬಿಟ್ಟು ಉಳಿದ ಐವರು ಬಿಜೆಪಿ ಬೆಂಬಲಿತ ಸದಸ್ಯರು ಮತದಾನ ಮಾಡಿದ್ದಾರೆ.

7 ಜನರಲ್ಲಿ ಐವರು ಬಿಜೆಪಿ ಬೆಂಬಲಿತ ಸದಸ್ಯರಿದ್ದು, ಒಬ್ಬರು ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಈಗ ಇಬ್ಬರು ಗ್ರಾಪಂ ಸದಸ್ಯರನ್ನ ಹೊರತು ಪಡಿಸಿ ಐವರು ಮತದಾನ ಮಾಡಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರರವರಿಂದ ಮತದಾನ

Advertisement

ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಪಟ್ಟಣ ಪಂಚಾಯಿತಿಯ ಮತ ಕೇಂದ್ರದಲ್ಲಿ ತಮ್ಮ ಮತವನ್ನು ಚಲಾಯಿಸಿದರು.

ಭಾರತೀಯ ಜನತಾ ಪಕ್ಷದ ಕಚೇರಿಯಿಂದ ಪಟ್ಟಣ ಪಂಚಾಯತ್ ಸದಸ್ಯರಾದ ಯತಿರಾಜ್, ಸಂದೇಶ್ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ ,ರವೀಶ್ ಭಟ್, ಜ್ಯೋತಿ ಮೋಹನ್ , ಜ್ಯೋತಿಗಣೇಶ್ ,ಮತ್ತು ಪಕ್ಷದ ಮುಖಂಡರೊಂದಿಗೆ ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಆಗಮಿಸಿ ತಮ್ಮ ಮತವನ್ನು ಚಲಾಯಿಸಿದರು .

ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಶಿವಮೊಗ್ಗ ಜಿಲ್ಲೆಯ ಅಭ್ಯರ್ಥಿ ಆಗಿರುವ ಅರುಣ್ ರವರು 1500 ಅಂತರದ ಬಹುಮತದಿಂದ ಆಯ್ಕೆಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು .

ಸಚಿವ ಅರಗ ಜ್ಞಾನೇಂದ್ರ ರವರೊಂದಿಗೆ ತಾಲ್ಲೂಕು ಬಿಜೆಪಿ ಅಧ್ಯಕ್ಷ ರಾಘವೇಂದ್ರ ನಾಯಕ್ ತಾಲೂಕು ಸೊಸೆಟಿಯ ಅಧ್ಯಕ್ಷ ನಾಗರಾಜ ಶೆಟ್ಟಿ .ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರು ಯುವ ಧುರಿಣ ಕುಕ್ಕೆ ಪ್ರಶಾಂತ್, ಚಂದವಳ್ಳಿ ಸೋಮಶೇಖರ್, ಬೇಗುವಳ್ಳಿ ಕವಿರಾಜ್,ಗೀತಾ ಸದಾನಂದ ಶೆಟ್ಟಿ ,ವೆಂಕಟೇಶ್ ಪಟವರ್ಧನ್ ಮುಂತಾದ ನಾಯಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next