Advertisement

ಸಭೆಯಲ್ಲಿ ಸದಸ್ಯರು-ಪಿಡಿಒ ವಾಕ್ಸಮರ

07:20 AM Feb 10, 2019 | Team Udayavani |

ರಾಮನಗರ: ಹಿಂದಿನ ಸಭೆಯಲ್ಲಿ ಆಗಿದ್ದ ನಿರ್ಣಯಗಳನ್ನು ರದ್ದು ಮಾಡಿದ್ದೇಕೆ ಎಂದು ಪಿಡಿಒ ಅವರನ್ನು ಕೆಲವು ಸದಸ್ಯರು ಪ್ರಶ್ನಿಸಿದ್ದೇ ಸಾಮಾನ್ಯ ಸಭೆ ಗೊಂದಲದ ಗೂಡಾದ ಪ್ರಸಂಗ ತಾಲೂಕಿನ ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ನಡೆಯಿತು.

Advertisement

ಶುಕ್ರವಾರ ನಡೆದ ಸಾಮಾನ್ಯ ಸಭೆಯ ಆರಂಭದಲ್ಲಿ ಸದಸ್ಯರಾದ ಯೋಗಾನಂದ ಅವರು ಪಿಡಿಒ ಶಾಮಿದ್‌ ಓಲೇಕರ್‌ ಅವರನ್ನು ಕುರಿತು ಈ ಹಿಂದೆ ನಡೆದ ಸಭೆಯಲ್ಲಿ ಆಗಿದ್ದ ನಿರ್ಣಯವನ್ನು ಒಡೆದು ಹಾಕಿದ್ದೇಕೆ, ಸಭೆಯನ್ನು ಮುಂದೂಡಿದ್ದೇಕೆ ಎಂದು ಪ್ರಶ್ನಿಸಿದರು. ಇದಕ್ಕೆ ಸದಸ್ಯರಾದ ಶಿವಣ್ಣ, ರುದ್ರಪ್ಪ ಅವರು ಸಹ ದನಿಗೂಡಿಸಿ, ಮೊದಲು ಅದಕ್ಕೆ ಸಮರ್ಪಕ ಉತ್ತರ ಕೊಟ್ಟು ನಂತರ ಸಭೆ ಆರಂಭಿಸಿ ಎಂದು ಪಟ್ಟು ಹಿಡಿದರು.

ವೇದಿಕೆ ಮುಂಭಾಗ ಧರಣಿ: ಇದಕ್ಕೆ ಪಿಡಿಒ ಅವರು ಹಿಂದಿನ ಸಭೆಯಲ್ಲಿ ಗಲಾಟೆ ನಡೆದಿದ್ದರಿಂದ ಸಭೆ ಮುಂದೂಡಿದ್ದಾಗಿ, ತಾಪಂ ಇಒ ಅವರಿಗೆ ನಿರ್ಣಯವನ್ನು ರದ್ದು ಮಾಡುವ ಅಧಿಕಾರ ಇದೆ ಎಂದು ಸಮಜಾಯಿಷಿ ನೀಡಲು ಯತ್ನಿಸಿದರು. ಇದಕ್ಕೆ ಒಪ್ಪದ ಯೋಗಾನಂದ ವೇದಿಕೆ ಮುಂಭಾಗ ಧರಣಿ ಕುಳಿತು ‘ಅಯ್ಯಯ್ಯೋ ಅನ್ಯಾಯ’ ಎಂದು ಕೂಗಲಾರಂಭಿಸಿದರು.

ಇನ್ನು ಕೆಲವು ಸದಸ್ಯರು ಪಿಡಿಒ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಕೆರಳಿದ ಪಿಡಿಒ ಓಲೇಕರ್‌ ಸಹ ಸದರಿ ಸದಸ್ಯರ ವಿರುದ್ಧ ಹರಿಹಾಯಲು ಆರಂಭಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ನಂದ ಪ್ರಭಾ ಅವರು, ಸಭೆಯ ಗೌರವ ಕಾಪಾಡಿ ಎಂದು ಪದೇ ಪದೆ ಮನವಿ ಮಾಡಿಕೊಂಡರು ಸದಸ್ಯರು ಮತ್ತು ಪಿಡಿಒ ಅವರು ಯಾವ ಕಿಮ್ಮತ್ತು ಕೊಡಲಿಲ್ಲ.

ಸಭೆಯಿಂದ ಹೊರಹೋದ ಪಿಡಿಒ: ಈ ಮಧ್ಯೆ ಯೋಗಾನಂದ ಮತ್ತು ಪಿಡಿಒ ಅವರ ನಡುವೆ ಏಕವಚನದ ವಾಕ್ಸಮರ ನಡೆದು ಹೋಯಿತು. ಕೆಲ ಹೊತ್ತು ಗೊಂದಲದ ವಾತಾವರಣ ಮುಂದುವರಿದು, ಪಿಡಿಒ ಓಲೇಕರ್‌ ಸಭೆಯಿಂದ ಹೊರ ಹೋದರು. ಅವರು ಹೊರ ಹೋಗುತ್ತಿದ್ದ ವೇಳೆ ಸದಸ್ಯೆ ಹಾಗೂ ಮಾಜಿ ಅಧ್ಯಕ್ಷೆ ಸುನಂದ ಅವರು ಸಹ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ಮಧ್ಯೆ ಕೆಲವು ಸದಸ್ಯರು ಯೋಗಾನಂದರನ್ನು ಧರಣಿ ಕೈಬಿಡಿಸುವಲ್ಲಿ ಯಶಸ್ವಿಯಾದರು.

Advertisement

ನಂತರ ಪಿಡಿಒ ಓಲೇಕರ್‌ ಸಭೆಗೆ ವಾಪಸ್ಸಾದರು. ಅಧ್ಯಕ್ಷೆ ನಂದಪ್ರಭಾ ಅವರು ಸಭೆಯನ್ನು ಸುಸೂತ್ರವಾಗಿ ನಡೆಯಲು ಬಿಡಿ ಎಂದು ಮನವಿ ಮಾಡಿದರು. ಪುನಃ ಸದಸ್ಯರು ಮತ್ತು ಪಿಡಿಒ ಅವರ ನಡುವೆ ವಾಕ್ಸಮರದ ನಡುವೆಯೇ ಸಭೆ ಮುಕ್ತಾಯವಾಯಿತು. ಗ್ರಾಮಠಾಣೆ ವಿಸ್ತರಣೆಗೆ ಸದಸ್ಯರು ಸಹಕರಿಸಿ: ಗ್ರಾಮಠಾಣೆ ವಿಸ್ತರಣೆಗೆ ಗ್ರಾಪಂ ಸದಸ್ಯರ ಸಹಕಾರ ನೀಡಬೇಕು ಎಂದು ತಾಪಂ ಅಧ್ಯಕ್ಷ ಗಾಣಕಲ್‌ ನಟರಾಜ್‌ ತಿಳಿಸಿದರು.

ತಾಲೂಕಿನ ಮಂಚನಾಯ್ಕನಹಳ್ಳಿ ಗ್ರಾಪಂನಲ್ಲಿ ನಡೆದ ಸಾಮಾನ್ಯ ಸಭೆಗೂ ಮುನ್ನ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ನಾಗರಿಕರಿಗೆ ಗ್ರಾಮ ಠಾಣೆ ವಿಸ್ತರಣೆಯಿಂದ ಉಪಯುಕ್ತವಾಗಲಿದೆ. ಮನೆ ಕಟ್ಟಿಕೊಂಡು ದಶಕಗಳಿಂದ ವಾಸಿಸುತ್ತಿದ್ದರೂ ಖಾತೆ ಆಗದೆ, ಸರ್ವೆ ಸಂಖ್ಯೆಯಲ್ಲೇ ಅವರ ಆಸ್ತಿಗಳಿವೆ. ಗ್ರಾಮ ಠಾಣೆ ವಿಸ್ತರಣೆಯಿಂದ ಈ ಸಮಸ್ಯೆ ದೂರವಾಗಲಿದೆ. ಹೀಗಾಗಿ ಸದಸ್ಯರು ತಾಪಂನೊಂದಿಗೆ ಸಹಕರಿಸಬೇಕು ಎಂದರು.

ಈ ಮಧ್ಯೆ ಬಹುತೇಕ ಸದಸ್ಯರು ತಮ್ಮ ಪಂಚಾಯ್ತಿಯ ಕೆಲವು ಸಿಬ್ಬಂದಿಯ ವಿರುದ್ಧವೇ ಹರಿಹಾಯ್ದರು. ಇದಕ್ಕೆ ಪ್ರತಿಕ್ರಯಿಸಿದ ತಾಪಂ ಅಧ್ಯಕ್ಷರು, ಗ್ರಾಮ ಠಾಣೆ ವಿಸ್ತರಣೆಗೆ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ನಾಗರಿಕರನ್ನು ಅರ್ಜಿ ಸಲ್ಲಸುವಂತೆ ಪ್ರೋತ್ಸಾಹಿಸಿ. ಅರ್ಜಿಯನ್ನು ಗಣಕಯಂತ್ರಗಳಲ್ಲಿ ಅಪ್‌ಲೋಡ್‌ ಮಾಡಿದ ನಂತರ ಅರ್ಜಿ ಸಂಖ್ಯೆಗಳನ್ನು ತಮಗೆ ಕಳುಹಿಸಿಕೊಡಿ. ಅರ್ಜಿಗಳನ್ನು ಶೀಘ್ರ ವಿಲೇವಾರಿಗೆ ತಾವು ಶ್ರಮಿಸುವುದಾಗಿ ಭರವಸೆ ನೀಡಿದರು.

ಹಿಂದಿನ ಸಭೆಯಲ್ಲಿ ಗ್ರಾಮ ಠಾಣೆ ವಿಸ್ತರಣೆ ಮತ್ತು ಇ-ಖಾತೆ ಮತ್ತು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಕೈಗಾರಿಕೆಗಳ ತೆರಿಗೆ ಸಂಗ್ರಹದ ವಿಷಯವಾಗಿ ಚರ್ಚೆ ಮಾಡಿದ್ದರೂ ಈ ವಿಷಯಗಳನ್ನು ಸಭಾ ನಡಾವಳಿಯಲ್ಲಿ ಪಿಡಿಒ ಅವರು ದಾಖಲಿಸಿಲ್ಲ ಎಂದು ಮಂಚನಾಯ್ಕನಹಳ್ಳಿ ಗ್ರಾಪಂ ಸದಸ್ಯ ಎಚ್.ಎಸ್‌.ಯೋಗಾನಂದ ದೂರಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ನಿರ್ಣಯದ ಕೆಲ ಭಾಗಗಳನ್ನು ಅವರು ಒಡೆದು ಹಾಕಿದ್ದಾರೆ. ಅದಕ್ಕೆ ಪಿಡಿಒ ಅವರಿಂದ ಸರಿಯಾದ ಉತ್ತರವಿಲ್ಲ. ಅಲ್ಲದೆ, ಸಭೆಯ ಅನುಮತಿ ಪಡೆಯದೇ ಪಿಡಿಒ ಅವರು ಸಭೆಯಿಂದ ಹೊರ ಹೋಗಿದ್ದರು. ಇಂತಹ ಅಧಿಕಾರಿಯ ವಿರುದ್ಧ ಕ್ರಮವಹಿಸಲು ನಿರ್ಣಯವಾಗಬೇಕಿತ್ತು. ಆದರೆ, ಅಧ್ಯಕ್ಷರು ತಮಗೆ ಸಹಕಾರ ನೀಡಲಿಲ್ಲ. ಅಧ್ಯಕ್ಷೆ ನಂದಪ್ರಭಾ ಅವರು ಸಭೆ ಪ್ರಗತಿಯಲ್ಲಿರುವಾಗಲೇ ಪದೇ ಪದೆ ಅವರ ಪತಿಯ ಬಳಿ ಸಲಹೆ ಕೇಳುತ್ತಿದ್ದರು. ಇದು ಪಂಚಾಯ್ತಿ ಆಡಳಿತ ಎಂದು ಆರೋಪಿಸಿದರು.

ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದೆ: ಸಭೆಯಲ್ಲಿ ಆಗುತ್ತಿದ್ದ ಗದ್ದಲ ಮತ್ತು ಸದಸ್ಯರ ಕೆಲವು ಅನುಮಾನಗಳ ಬಗ್ಗೆ ತಾವು ಪಂಚಾಯತ್‌ ರಾಜ್‌ ವ್ಯವಸ್ಥೆಯ ಕೆಲವು ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದೆ ಎಂದು ಸದಸ್ಯ ಯೋಗಾನಂದ ಅವರ ಆರೋಪವನ್ನು ಮಂಚನಾಯ್ಕನಹಳ್ಳಿ ಗ್ರಾಪಂ ಅಧ್ಯಕ್ಷೆ ನಂದ ಪ್ರಭಾ ತಳ್ಳಿಹಾಕಿದರು. ಕೆಲವು ಸದಸ್ಯರು ಬೇಕಂತಲೇ ಸಭೆಗೆ ಅಡ್ಡಿಯಾಗುತ್ತಿದ್ದಾರೆ. ಪಂಚಾಯ್ತಿ ಅಭಿವೃದ್ಧಿಗೆ ಇದರಿಂದ ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚರ್ಚಿಸಿದ ವಿಷಯ ಪಿಡಿಒ ದಾಖಲಿಸಿಲ್ಲ: ಹಿಂದಿನ ಸಭೆಯಲ್ಲಿ ಗ್ರಾಮ ಠಾಣೆ ವಿಸ್ತರಣೆ ಮತ್ತು ಇ-ಖಾತೆ ಮತ್ತು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಕೈಗಾರಿಕೆಗಳ ತೆರಿಗೆ ಸಂಗ್ರಹದ ವಿಷಯವಾಗಿ ಚರ್ಚೆ ಮಾಡಿದ್ದರೂ ಈ ವಿಷಯಗಳನ್ನು ಸಭಾ ನಡಾವಳಿಯಲ್ಲಿ ಪಿಡಿಒ ಅವರು ದಾಖಲಿಸಿಲ್ಲ ಎಂದು ಮಂಚನಾಯ್ಕನಹಳ್ಳಿ ಗ್ರಾಪಂ ಸದಸ್ಯ ಎಚ್.ಎಸ್‌.ಯೋಗಾನಂದ ದೂರಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ನಿರ್ಣಯದ ಕೆಲ ಭಾಗಗಳನ್ನು ಅವರು ಒಡೆದು ಹಾಕಿದ್ದಾರೆ. ಅದಕ್ಕೆ ಪಿಡಿಒ ಅವರಿಂದ ಸರಿಯಾದ ಉತ್ತರವಿಲ್ಲ. ಅಲ್ಲದೆ, ಸಭೆಯ ಅನುಮತಿ ಪಡೆಯದೇ ಪಿಡಿಒ ಅವರು ಸಭೆಯಿಂದ ಹೊರ ಹೋಗಿದ್ದರು. ಇಂತಹ ಅಧಿಕಾರಿಯ ವಿರುದ್ಧ ಕ್ರಮವಹಿಸಲು ನಿರ್ಣಯವಾಗಬೇಕಿತ್ತು. ಆದರೆ, ಅಧ್ಯಕ್ಷರು ತಮಗೆ ಸಹಕಾರ ನೀಡಲಿಲ್ಲ. ಅಧ್ಯಕ್ಷೆ ನಂದಪ್ರಭಾ ಅವರು ಸಭೆ ಪ್ರಗತಿಯಲ್ಲಿರುವಾಗಲೇ ಪದೇ ಪದೆ ಅವರ ಪತಿಯ ಬಳಿ ಸಲಹೆ ಕೇಳುತ್ತಿದ್ದರು. ಇದು ಪಂಚಾಯ್ತಿ ಆಡಳಿತ ಎಂದು ಆರೋಪಿಸಿದರು.

ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದೆ: ಸಭೆಯಲ್ಲಿ ಆಗುತ್ತಿದ್ದ ಗದ್ದಲ ಮತ್ತು ಸದಸ್ಯರ ಕೆಲವು ಅನುಮಾನಗಳ ಬಗ್ಗೆ ತಾವು ಪಂಚಾಯತ್‌ ರಾಜ್‌ ವ್ಯವಸ್ಥೆಯ ಕೆಲವು ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದೆ ಎಂದು ಸದಸ್ಯ ಯೋಗಾನಂದ ಅವರ ಆರೋಪವನ್ನು ಮಂಚನಾಯ್ಕನಹಳ್ಳಿ ಗ್ರಾಪಂ ಅಧ್ಯಕ್ಷೆ ನಂದ ಪ್ರಭಾ ತಳ್ಳಿಹಾಕಿದರು. ಕೆಲವು ಸದಸ್ಯರು ಬೇಕಂತಲೇ ಸಭೆಗೆ ಅಡ್ಡಿಯಾಗುತ್ತಿದ್ದಾರೆ. ಪಂಚಾಯ್ತಿ ಅಭಿವೃದ್ಧಿಗೆ ಇದರಿಂದ ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next