Advertisement

ಕೋವಿಡ್ ಸೋಂಕಿಗೆ ಗೋಕಾಕ್ ನಗರಸಭಾ ಸದಸ್ಯ ಬಲಿ

01:42 PM Aug 09, 2020 | keerthan |

ಬೆಳಗಾವಿ: ಕೋವಿಡ್-19 ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಮಧ್ಯೆ ಕೋವಿಡ್ ಸೋಂಕಿಗೆ ರಾಜ್ಯದಲ್ಲಿ‌ ಮತ್ತೊಬ್ಬ ನಗರಸಭಾ ಸದಸ್ಯ ಬಲಿಯಾಗಿದ್ದಾರೆ.

Advertisement

ಗೋಕಾಕ್ ನಗರಸಭೆಯ ಹಿರಿಯರೊಬ್ಬರು ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದಾರೆ.

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಆಪ್ತರಾಗಿದ್ದ ಅವರು ಕೋವಿಡ್ ನಿಯಂತ್ರಣಕ್ಕಾಗಿ ನಿರಂತರ ಹೋರಾಟ ಮಾಡಿದ್ದರಲ್ಲದೆ ಗೋಕಾಕ ತಾಲೂಕಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಿದ್ದರು.

ತಮ್ಮ ಆಪ್ತನ  ನಿಧನಕ್ಕೆ ಸಚಿವ ರಮೇಶ್ ಜಾರಕಿಹೊಳಿ ಕಂಬನಿ ಮಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next