Advertisement

ಮಹಾರಾಷ್ಟ್ರದಲ್ಲಿ ತಬ್ಲೀಘಿ ಜಮಾತ್‌ ಸದಸ್ಯ ಆತ್ಮಹತ್ಯೆ

02:54 AM Apr 12, 2020 | Hari Prasad |

ಅಕೋಲಾ: ಕೋವಿಡ್ ಸೋಂಕು ದೃಢಪಡುತ್ತಿದ್ದಂತೆಯೇ ತಬ್ಲೀಘಿ ಜಮಾತ್‌ ಸದಸ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರದ ಅಕೋಲಾದಲ್ಲಿ ಈ ಘಟನೆ ನಡೆದಿದೆ. ಸೋಂಕು ದೃಢಪಟ್ಟ ವ್ಯಕ್ತಿಯನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು.

Advertisement

ಶುಕ್ರವಾರ ಸೋಂಕು ಖಚಿತವಾಗುತ್ತಿದ್ದಂತೆಯೇ ಸ್ನಾನದ ಮನೆಯಲ್ಲಿದ್ದ ಶೇವಿಂಗ್‌ ಸೆಟ್‌  ಬ್ಲೇಡ್‌ ಅನ್ನು ಬಳಸಿ, ಗಂಟಲನ್ನು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ, ಹೊಸದಿಲ್ಲಿಯ 13 ಸ್ಥಳಗಳಲ್ಲಿ ಅವಿತಿದ್ದ ತಬ್ಲೀಘಿಯ 102 ಮಂದಿ ಸದಸ್ಯರ ಪೈಕಿ 52 ಮಂದಿಗೆ ಸೋಂಕು ದೃಢಪಟ್ಟಿದೆ. ಮತ್ತೂಂದೆಡೆ ಉತ್ತರ ಪ್ರದೇಶ ಪೊಲೀಸರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಲೆಮರೆಸಿಕೊಂಡಿರುವ ತಬ್ಲೀಘಿ ಸದಸ್ಯರ ಬಗ್ಗೆ ಮಾಹಿತಿ ನೀಡಿದರೆ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next