Advertisement

ಮೆಲ್ವಿನ್‌ ರೆಗೊ ಸಿಂಡಿಕೇಟ್‌ ಬ್ಯಾಂಕ್‌ ಎಂಡಿಯಾಗಿ ನೇಮಕ

03:45 AM Jul 04, 2017 | Team Udayavani |

ಬೆಂಗಳೂರು: ಸಿಂಡಿಕೇಟ್‌ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಮೆಲ್ವಿನ್‌ ರೆಗೊ ಅವರು ಜುಲೈ 1 ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಈ ಮೊದಲು ಬ್ಯಾಂಕ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ರೆಗೊ, ಹಲವಾರು ಬ್ಯಾಂಕಿಂಗ್‌ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
 
ಐಡಿಬಿಐ ಬ್ಯಾಂಕ್‌ನ ಉಪ ವ್ಯವಸ್ಥಾಪಕ ನಿರ್ದೇಶಕರಾಗಿ, ಐಡಿಬಿಐ ಹೋಮ್‌ ಫೈನಾನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಪುಣೆಯ ಸಿಮ್‌ಬಯೋಸಿಸ್‌ ಇನ್‌
ಸ್ಟಿಟ್ಯೂಟ್‌ ಆಫ್ ಬಿಸಿನೆಸ್‌ ಮ್ಯಾನೇಜ್‌ಮೆಂಟ್‌ನಿಂದ ಎಂಬಿಎ ರ್‍ಯಾಂಕ್‌ ಪಡೆದಿರುವ ರೆಗೊ ಅವರು, ಕಾರ್ಪೊರೇಟ್‌ ಬ್ಯಾಂಕಿಂಗ್‌, ರಿಹೆಬಿಲಿಟೇಷನ್‌ ಫೈನಾನ್ಸ್‌, ಟ್ರೆಷರಿ, ಇಂಟರ್‌ನ್ಯಾಷನಲ್‌ ಅಂಡ್‌ ಡೊಮೆಸ್ಟಿಕ್‌ ರಿಸೋರ್ಸಸ್‌, ಇನ್‌ಫ್ರಾಸ್ಟ್ರಕ್ಚರ್‌ ಕಾರ್ಪೊರೇಟ್‌ ಗ್ರೂಪ್‌ ಸೇರಿ ಹಲವಾರು ವಿಷಯಗಳ ಪರಿಣಿತರಾಗಿದ್ದಾರೆ. ಬ್ಯಾಂಕ್‌ನ ಬೆಳವಣಿಗೆಯ ದೃಷ್ಟಿಯಿಂದ ರೆಗೊ ಅವರ ಅನುಭವ ಎಲ್ಲಾ ಆಯಾಮಗಳಿಂದಲೂ ಬ್ಯಾಂಕ್‌ಗೆ ಹೆಚ್ಚಿನ ಅನುಕೂಲವಾಗಲಿದೆ
ಎಂದು ಸಿಂಡಿಕೇಟ್‌ ಬ್ಯಾಂಕ್‌ ಪ್ರಕಟಣೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next