Advertisement
ಕಡತದಲ್ಲೇ ಇದೆ: ರಾಮಾನುಜಾಚಾರ್ಯರ ತಪೋಭೂಮಿ ಹಾಗೂ ದಕ್ಷಿಣ ಬದರೀಕಾಶ್ರಮವೂ ಆದ ಐತಿಹಾಸಿಕ ಮೇಲುಕೋಟೆ ಆಂಧ್ರಪ್ರದೇಶದ ತಿರುಮಲದಷ್ಟೆ ಪ್ರಖ್ಯಾತ ಪ್ರವಾಸಿ ತಾಣವಾಗಿದ್ದರೂ ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳಿಂದ ವಂಚಿತವಾಗಿದೆ. ಮುಖ್ಯವಾಗಿ ಭಕ್ತರಿಗೆ ತಂಗಲು ಸರ್ಕಾರದ ವತಿಯಿಂದ ಯಾವುದೇ ರೀತಿಯ ವಸತಿಗೃಹ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸುಸಜ್ಜಿತ ಪಾರ್ಕಿಂಗ್ ಮತ್ತು ಶೌಚಾಲಯದ ಸೌಲಭ್ಯ, ವೈದ್ಯಕೀಯ ಸೇವೆ ಇಲ್ಲ. ಸೀಮಿತವಾದ ಅವಕಾಶದಲ್ಲೇ ಕ್ಷೇತ್ರಕ್ಕೆ ಹಲವು ಮೂಲಭೂತ ಸೌಲಭ್ಯ ಕಲ್ಪಿಸಲು ಶಾಸಕ ಸಿ.ಎಸ್.ಪುಟ್ಟರಾಜು ಶ್ರಮಿಸಿದ್ದಾರೆ. ಆದರೆ,ಸರ್ಕಾರದ ನಿರ್ಲಕ್ಷ್ಯದ ಪರಿಣಾಮ ಪ್ರಾಧಿಕಾರದ ರಚನೆಯ ಪ್ರಸ್ತಾವನೆ ಕಡತದಲ್ಲೇ ಉಳಿದಿದೆ.
Related Articles
Advertisement
ಮೇಲುಕೋಟೆಯಲ್ಲಿ ಅಭಿವೃದ್ಧಿ ಕಾರ್ಯಗಳ ದೊಡ್ಡ ಪಟ್ಟಿಯೇ ಇದ್ದು, ಯೋಜನೆ ಮುಕ್ತಾಯವಾಗಿರುವ ನಿರುಪಯುಕ್ತವಾದ ಹೇಮಾವತಿ ವಸತಿ ಗೃಹಗಳನ್ನು ದೇಗುಲದ ವಶಕ್ಕೆ ಪಡೆದು ಭಕ್ತರಿಗೆ ವಸತಿ ಗೃಹ ನಿರ್ಮಾಣ, ಕಲ್ಯಾಣಿ ಮತ್ತು ಕೊಳಗಳ ಜೀರ್ಣೋದ್ಧಾರ, ಮಂಟಪಗಳ ರಕ್ಷಣೆ, ದೇವಾಲಯದ ಜಮೀನು ವಶಕ್ಕೆ ಪಡೆದು ಜನೋಪಯೋಗಿ ಕೆಲಸಮಾಡಬೇಕು. ಕ್ರೀಡಾಂಗಣ ನಿರ್ಮಾಣ, ಶತಮಾನದ ಸರ್ಕಾರಿ ಶಾಲೆ, ಸಂಸ್ಕೃತ ಪಾಠಶಾಲೆಬಲವರ್ಧನೆ, ಗ್ರಂಥಾಲಯದ ಜೀರ್ಣೋದ್ಧಾರ, ನೂತನ ರಥ ನಿರ್ಮಾಣ, ಬೆಟ್ಟಕ್ಕೆ ರೂಪ್ ವೇ, ದೇವಾಲಯಕ್ಕೆ ಪ್ರತ್ಯೇಕ ಪೊಲೀಸ್ ಉಪಠಾಣೆ, ಕಲ್ಯಾಣಿ, ಬೆಟ್ಟ ಹಾಗೂ ದೇವಾಲಯಗಳಿಗೆ ಶಾಶ್ವತದೀಪಾಲಂಕಾರ, ಚೆಲುವನಾಯಣನ ಉತ್ಸವಗಳನ್ನು ವೈಭವವಾಗಿ ನಡೆಸಿದೇವಾಲಯದ ಆದಾಯ ಹೆಚ್ಚಿಸಿ ನೌಕಕರಿಗೆ ಕನಿಷ್ಠ ವೇತನಜಾರಿಗೊಳಿಸುವುದು. ಮೇಲುಕೋಟೆ ಪಂಚೆ ಮತ್ತು ಪುಳಿಯೋಗರೆ ಉದ್ಯಮವನ್ನು ಪ್ರೋತ್ಸಾಹಿಸಿ ಉದ್ಯೋಗಾವಕಾಶ ಸೃಷ್ಟಿ ಮಾಡುವುದೂ ಸೇರಿದಂತೆ ಹಲವು ರೀತಿಯ ಕಾರ್ಯಗಳನ್ನು ಪ್ರಾಧಿಕಾರದಿಂದ ಮಾಡಬಹುದಾಗಿದೆ.
ವೈರಮುಡಿಗೆ 2 ಕೋಟಿ ರೂ.ವಿಶೇಷ ಅನುದಾನ ಅಗತ್ಯ:
ಮೇಲುಕೋಟೆ ವೈರಮುಡಿ ಪುರಾತನ ಆಚರಣೆಯಾಗಿದ್ದು, ಒಂದು ರಾತ್ರಿ ನಡೆಯುವ ಈ ಉತ್ಸವ ದಕ್ಷಿಣಭಾರತ ಮತ್ತು ಉತ್ತರಭಾರತದ ಭಕ್ತರನ್ನು ಕೈಬೀಸಿ ಕರೆಯುತ್ತದೆ. ಇಂತಹ ಜಾತ್ರೆಗೆ ಸರ್ಕಾರವಿಶೇಷ ಅನುದಾನ ನೀಡಬೇಕಿದೆ. ಬ್ರಹ್ಮೋತ್ಸವದ ವೇಳೆದೇವಾಲಯ, ಸ್ಮಾರಕಗಳಿಗೆ ಭವ್ಯವಾದ ದೀಪಾಲಂಕಾರ ಮಾಡಿ ಇಲ್ಲಿನಡೆಯುವ ಉತ್ಸವಗಳಿಗೆ ವ್ಯಾಪಕ ಪ್ರಚಾರ ನೀಡಿದರೆ ವರ್ಷವಿಡೀಭಕ್ತರನ್ನು ಮೇಲುಕೋಟೆ ತನ್ನತ್ತ ಸೆಳೆದು ಸಾವಿರಾರು ಮಂದಿಗೆಉದ್ಯೋಗ ಸೃಷ್ಟಿಸಿ ಕೊಡುತ್ತದೆ. ಇದಕ್ಕಾಗಿಯೇ ಸರ್ಕಾರ 2 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂಬುದು ಶಾಸಕ ಸಿ.ಎಸ್.ಪುಟ್ಟರಾಜು ಅವರ ಒತ್ತಾಯವಾಗಿದೆ.
ರಾಮಾನುಜರ ಸಹಸ್ರಮಾನೋತ್ಸವಕ್ಕೆ ಕಾಸಿಲ್ಲ : ರಾಮಾನುಜರ ಸಹಸ್ರಮಾನೋತ್ಸವ ಆಚರಣೆಯನ್ನು ಸರ್ಕಾರಬಳಸಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಅವಕಾಶವಿತ್ತಾದರೂಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕವಡೆ ಕಾಸನ್ನೂನೀಡದೆ ನಿರ್ಲಕ್ಷ್ಯ ವಹಿಸಿತು. ಆಂಧ್ರದ ಚಿನ್ನಜೀಯರ್ ಪ್ರಧಾನಿಮೋದಿಯನ್ನು ರಾಮಾನುಜರ ತಪೋ ಭೂಮಿ ಮೇಲುಕೋಟೆಗೆ ಕರೆತರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಪ್ರಧಾನಿಮೋದಿ ಕಾರ್ಯಕ್ರಮಗಳು ನಿಗದಿಯಾದ ನಂತರಪ್ರಯಾಸಪಡುವ ಬದಲು ಸರ್ಕಾರ ಪ್ರಾಧಿಕಾರ ರಚನೆ ಮಾಡಿ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕಿದೆ.
ರಾಮಾನುಜರ ಕರ್ಮಭೂಮಿಯಾದಮೇಲುಕೋಟೆಯನ್ನುತಿರುಮಲೆ ಮಾದರಿಯಲ್ಲಿ ಅಭಿವೃದ್ಧಿ ಮಾಡಲು ವಿಫುಲಅವಕಾಶವಿದೆ. ಸರ್ಕಾರಮೇಲುಕೋಟೆ ಅಭಿವೃದ್ಧಿಗೆ ವಿಶೇಷ ಆಸಕ್ತಿವಹಿಸಬೇಕಾದ ಅಗತ್ಯವಿದೆ. –ಶ್ರೀ ಯದುಗಿರಿ ಯತಿರಾಜ ಶ್ರೀಮನ್ನಾರಾಯಣ ರಾಮಾನುಜ ಜೀಯರ್, ಪೀಠಾಧಿಪತಿ, ಯದುಗಿರಿ ಯತಿರಾಜಮಠ
ಸರ್ಕಾರ ಈ ಬಜೆಟ್‌ನಲ್ಲಾದರೂ ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರ ಘೋಷಿಸಬೇಕು. ಬಾಕಿಯಿರುವ ಎಲ್ಲ ಅಭಿವೃದ್ಧಿ ಕಾರ್ಯಗಳೂ ತ್ವರಿತವಾಗಿನಡೆದು ಭಾರತದ ಪ್ರಮುಖ ಶ್ರೀವೈಷ್ಣವ ಕೇಂದ್ರಹಾಗೂ ರಾಮಾನುಜರ ಅಭಿಮಾನ ಕ್ಷೇತ್ರಮೇಲುಕೋಟೆ ಭಕ್ತ ಸ್ನೇಹಿ ಧಾರ್ಮಿಕ ಕ್ಷೇತ್ರವಾಗಿ ರೂಪುಗೊಳ್ಳಲು ಸಹಕಾರಿ. – ಶ್ರೀನಿವಾಸನರಸಿಂಹನ್ ಗುರೂಜಿ, ಚೆಲುವನಾರಾಯಣಸ್ವಾಮಿ ದೇವಸ್ಥಾನ, ಮೇಲುಕೋಟೆ
– ಸೌಮ್ಯ ಸಂತಾನಂ