Advertisement

ಸೆನ್ಸಾರ್‌ನಲ್ಲಿ ಎ ಸರ್ಟಿಫಿಕೆಟ್ ಪಡೆದ “ಮೇಲೊಬ್ಬ ಮಾಯವಿ’

08:29 AM Jun 23, 2020 | Lakshmi GovindaRaj |

ಅ್ಯಕ್ರೊಮೊಟಾಪ್ಸಿಯಾ (Achromatopsia) ನ್ಯೂನತೆ ಮತ್ತು ಹಲವು ಸಾವು-ನೋವುಗಳಿಗೆ ಇಂದಿಗೂ ಸಾಕ್ಷಿಯಾಗಿರುವ ಮಾಫಿಯಾದ ವಿಭಿನ್ನ ಕಥಾಹಂದರ ಹೊಂದಿರುವ, ನೈಜ ಘಟನೆಗಳ ಕುರಿತಾದ ವಿನೂತನ ಜಾನರ್ “ಮೇಲೊಬ್ಬ ಮಾಯಾವಿʼ ಚಿತ್ರವನ್ನು ಸೆನ್ಸಾರ್ ಮಂಡಳಿ ಯಾವುದೇ ಕಟ್ ಮತ್ತು ಸೌಂಡ್ ಮ್ಯೂಟ್ ಸಹ ನೀಡದೆ “ಎ’ ಪ್ರಮಾಣಪತ್ರ ನೀಡಿದೆ.

Advertisement

ಸಿನಿಮಾ ಪತ್ರಕರ್ತ ಬಿ.ನವೀನ್‌ ಕೃಷ್ಣ ಕಥೆ ಬರೆದು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಕದ್ರಿ ಮಣಿಕಾಂತ್ ಅವರ ಸಂಗೀತವಿದ್ದು, ಕೆ.ಗಿರೀಶ್ ಕುಮಾರ್ ಸಂಕಲನ,  ದೀಪಿತ್ ಕ್ಯಾಮೆರಾ ಕೈಚಳಕ, ಮತ್ತು ರಾಮು ನೃತ್ಯವಿದೆ. ಇನ್ನು ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಚಿತ್ರದ ನಾಯಕನಾಗಿದ್ದು, ಅನನ್ಯ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ.

ಅಲ್ಲದೇ ಪತ್ರಕರ್ತ, ಚಿಂತಕ, ಚಕ್ರವರ್ತಿಚಂದ್ರಚೂಡ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಚಿತ್ರಕ್ಕೆ ಚಿತ್ರಕಥೆ,ಸಾಹಿತ್ಯ,ಸಂಭಾಷಣೆ ಬರೆದಿದ್ದಾರೆ. ಉಳಿದಂತೆ ಕೃಷ್ಣಮೂರ್ತಿಕವತ್ತಾರ್, ಎಂ.ಕೆ.ಮಠ, ಬೆನಕ ನಂಜಪ್ಪ, ನವೀನ್ಕು ಮಾರ್, ಲಕ್ಷೀಅರ್ಪಣ್, ಪವಿತ್ರಾ ಜಯರಾಮ್, ಮುಖೇಶ್ ಮುಂತಾದವರ ತಾರಾಬಳಗವಿದೆ ನಟಿಸಿದ್ದಾರೆ. ಪುತ್ತೂರು ಭರತ್ ಮತ್ತು ತನ್ವಿ ಅಮಿನ್ ಕೊಲ್ಯ ಜಂಟಿಯಾಗಿ ಶ್ರೀಕಟೀಲ್ ಸಿನಿಮಾಸ್ ಮೂಲಕ ಚಿತ್ರ ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next