Advertisement

Melkar: ನಿಲ್ಲಿಸಿದ್ದ ಲಾರಿ ಮುಂದಕ್ಕೆ ಚಲಿಸಿ ಕಾರಿಗೆ ಢಿಕ್ಕಿ; ಇಬ್ಬರು ಮಹಿಳೆಯರಿಗೆ ಗಾಯ

11:34 PM Sep 15, 2023 | Team Udayavani |

ಬಂಟ್ವಾಳ: ರಾ.ಹೆ. 75ರ ಮೆಲ್ಕಾರಿನಲ್ಲಿ ನಿಲ್ಲಿಸಿದ್ದ ಲಾರಿಯೊಂದು ಮುಂದಕ್ಕೆ ಚಲಿಸಿ ಕಾರಿನ ಜತೆಗೆ ಬಸ್ಸಿಗೆ ಕಾಯುತ್ತಿದ್ದ ಇಬ್ಬರು ಮಹಿಳೆಯರಿಗೆ ಢಿಕ್ಕಿ ಹೊಡೆದ ಘಟನೆ ಶುಕ್ರವಾರ ನಡೆದಿದೆ.

Advertisement

ಘಟನೆಯಲ್ಲಿ ಬಸ್ಸಿಗೆ ಕಾಯುತ್ತಿದ್ದ ಮಹಿಳೆಯರಾದ ಹಜ್ರಾ ಶಮ ಹಾಗೂ ಖತೀಜಾತುಲ್‌ ಗಾಯಗೊಂಡವರು. ಅವರು ರಸ್ತೆಯ ಬದಿಯ ಚರಂಡಿಗೆ ಬಿದ್ದು ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.

ಲಾರಿ ಢಿಕ್ಕಿ ಹೊಡೆದ ಪರಿಣಾಮ ಮಾರುತಿ ಆಮ್ನಿ ಜಖಂಗೊಂಡಿದೆ.

ಹೆದ್ದಾರಿ ಕಾಮಗಾರಿ ನಿರ್ವಹಿಸುವ ಸಂಸ್ಥೆಗೆ ಸೇರಿದ ಲಾರಿಯ ಚಾಲಕ ಆನಂದ ಪಾಸ್ವಾನ್‌ ಸರ್ವೀಸ್‌ ರಸ್ತೆಯ ಬದಿ ಲಾರಿಯನ್ನು ನಿಲ್ಲಿಸಿ ಸ್ಥಳೀಯ ಅಂಗಡಿಯೊಂದಕ್ಕೆ ತೆರಳಿದ್ದ. ಈ ವೇಳೆ ಹ್ಯಾಂಡ್‌ ಬ್ರೇಕ್‌ ಹಾಕದ ಪರಿಣಾಮ ಲಾರಿ ಏಕಾಏಕಿ ಮುಂದಕ್ಕೆ ಚಲಿಸಿದೆ. ಢಿಕ್ಕಿ ಹೊಡೆದ ಲಾರಿ ಬಳಿಕ ಹೆದ್ದಾರಿ ಬದಿಗೆ ವಾಲಿ ನಿಂತಿದೆ. ಲಾರಿ ಚಾಲಕನ ನಿರ್ಲಕ್ಷ್ಯತನದ ಕುರಿತು ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next