Advertisement
ಪಂದ್ಯದ 4ನೇ ದಿನವಾದ ಶನಿವಾರ ಬ್ಯಾಟಿಂಗ್ ಮುಂದುವರಿಸಿದ ಭಾರತ 8 ವಿಕೆಟಿಗೆ 106 ರನ್ ಗಳಿಸಿ ಡಿಕ್ಲೇರ್ ಮಾಡಿತು. ಆಸ್ಟ್ರೇಲಿಯಕ್ಕೆ ಲಭಿಸಿದ ಗೆಲುವಿನ ಗುರಿ 399 ರನ್. ಬ್ಯಾಟಿಂಗಿಗೆ ಪ್ರಶಸ್ತವಲ್ಲದ ಟ್ರ್ಯಾಕ್‌ನಲ್ಲಿ ಈಗಾಗಲೇ 85 ಓವರ್‌ಗಳನ್ನು ನಿಭಾಯಿಸಿರುವ ಆಸೀಸ್ 8 ವಿಕೆಟಿಗೆ 258 ರನ್ ಗಳಿಸಿ ದಿನದಾಟ ಮುಗಿಸಿದೆ.
ಸದ್ಯ ಭಾರತಕ್ಕೆ ಅಡ್ಡಗಾಲಿಟ್ಟು ನಿಂತವರೆಂದರೆ ಅಮೋಘ ಆಲ್‌ರೌಂಡ್ ಪ್ರದರ್ಶನವಿತ್ತ ಪ್ಯಾಟ್ ಕಮಿನ್ಸ್. ದ್ವಿತೀಯ ಸರದಿಯಲ್ಲಿ ಭಾರತದ 6 ವಿಕೆಟ್‌ಗಳನ್ನು ಹಾರಿಸಿದ ಕಮಿನ್ಸ್, ಅಜೇಯ 61 ರನ್ ಮಾಡಿ ತಂಡದ ಕುಸಿತಕ್ಕೆ ತಡೆಯಾಗಿ ನಿಂತಿದ್ದಾರೆ. ಇದು ಆಸ್ಟ್ರೇಲಿಯದ ದ್ವಿತೀಯ ಸರದಿಯಲ್ಲಿ ದಾಖಲಾದ ಏಕೈಕ ಅರ್ಧ ಶತಕ. ಇವರೊಂದಿಗೆ 6 ರನ್ ಮಾಡಿರುವ ನಥನ್ ಲಿಯೋನ್ ಕ್ರೀಸಿನಲ್ಲಿದ್ದಾರೆ. ಈ ಜೋಡಿಯಿಂದ ಮುರಿಯದ 9ನೇ ವಿಕೆಟಿಗೆ 43 ರನ್ ಒಟ್ಟುಗೂಡಿದೆ. ಬ್ಯಾಟಿಂಗಿಗೆ ಬರಬೇಕಿರುವ ಮತ್ತೂಬ್ಬ ಆಟಗಾರ ಜೋಶ್ ಹ್ಯಾಝಲ್‌ವುಡ್. ಕಮಿನ್ಸ್ 103 ಎಸೆತಗಳನ್ನು ನಿಭಾಯಿಸಿದ್ದು, 5 ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದ್ದಾರೆ. ಲಿಯೋನ್ 6 ರನ್ನಿಗಾಗಿ 38 ಎಸೆತ ಎದುರಿಸಿದ್ದಾರೆ.
Related Articles
Advertisement
ಜಡೇಜಾಗೆ ಹೆಚ್ಚಿನ ಯಶಸ್ಸುಭಾರತ ತನ್ನ ಸಾಂ ಕ ಬೌಲಿಂಗ್ ಸಾಮರ್ಥ್ಯದ ಮೂಲಕ ಕಾಂಗರೂ ಪಡೆಯ ಮೇಲೆರಗಿತು. ಸ್ಪಿನ್ನರ್ ರವೀಂದ್ರ ಜಡೇಜ 3 ವಿಕೆಟ್ ಉರುಳಿಸಿ ಹೆಚ್ಚಿನ ಯಶಸ್ಸು ಸಾಧಿಸಿದ್ದಾರೆ. ಮೊದಲ ಸರದಿಯ ಬೌಲಿಂಗ್ ಹೀರೋ ಜಸ್‌ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ತಲಾ 2 ವಿಕೆಟ್ ಹಾರಿಸಿದರು. ತನ್ನ ಪ್ರಥಮ ಓವರಿನ 2ನೇ ಎಸೆತದಲ್ಲೇ ಫಿಂಚ್ ಅವರನ್ನು ಕೊಹ್ಲಿಗೆ ಕ್ಯಾಚ್ ಕೊಡಿಸುವ ಮೂಲಕ ಬುಮ್ರಾ ಅಪಾಯಕಾರಿಯಾಗಿ ಗೋಚರಿಸಿದರು. ಮತ್ತೂಬ್ಬ ಓಪನರ್ ಹ್ಯಾರಿಸ್ (13) ಅವರಿಗೆ ಜಡೇಜ ಬಲೆ ಬೀಸಿದರು. 33 ರನ್ನಿಗೆ 2 ವಿಕೆಟ್ ಬಿತ್ತು. ಖ್ವಾಜಾ (33), ಶಾನ್ ಮಾರ್ಷ್ (44) ಮತ್ತು ಹೆಡ್ (34) ಹೋರಾಡಿದರೂ ಇನ್ನಿಂಗ್ಸ್ ಬೆಳೆಸಲು ವಿಫಲರಾದರು. ಮತ್ತೋರ್ವ ಮಾರ್ಷ್ ಗಳಿಕೆ 10 ರನ್ ಮಾತ್ರ. ನಾಯಕ ಪೇನ್ 67 ಎಸೆತಗಳಿಗೆ ಜವಾಬಿತ್ತು 26 ರನ್ ಮಾಡಿದರು. ಸ್ಟಾರ್ಕ್ 18 ರನ್ ಮಾಡಿ ನಿರ್ಗಮಿಸಿದರು. ಮಾಯಾಂಕ್ ತಾಳ್ಮೆಯ ಆಟ
28 ರನ್ ಮಾಡಿ ಆಡುತ್ತಿದ್ದ ಮಾಯಾಂಕ್ ಅಗರ್ವಾಲ್ 42ರ ತನಕ ಸಾಗಿ ಕಮಿನ್ಸ್‌ಗೆ ಬೌಲ್ಡ್ ಆದರು. 102 ಎಸೆತ ಎದುರಿಸಿದ ಅಗರ್ವಾಲ್, 4 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ ಚೊಚ್ಚಲ ಟೆಸ್ಟ್‌ನಲ್ಲೇ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಪಂತ್ 33 ರನ್ ಮಾಡಿದರು (43 ಎಸೆತ, 3 ಬೌಂಡರಿ, 1 ಸಿಕ್ಸರ್). “ಬಾಕ್ಸಿಂಗ್ ಡೇ’ ಇತಿಹಾಸದತ್ತ ಭಾರತ
ಭಾರತ ಈವರೆಗೆ ಮೆಲ್ಬರ್ನ್ನಲ್ಲಿ 2 ಟೆಸ್ಟ್ ಪಂದ್ಯಗಳನ್ನು ಜಯಿಸಿದರೂ ಇವೆರಡೂ “ಬಾಕ್ಸಿಂಗ್ ಡೇ’ ಪಂದ್ಯಗಳಾಗಿರಲಿಲ್ಲ. ಹೀಗಾಗಿ ಟೆಸ್ಟ್ ಇತಿಹಾಸದಲ್ಲಿ ತನ್ನದೇ ಆದ ಪ್ರತಿಷ್ಠೆ ಹೊಂದಿರುವ “ಬಾಕ್ಸಿಂಗ್ ಡೇ’ ಪಂದ್ಯವನ್ನು ಗೆದ್ದು ಆಸ್ಟ್ರೇಲಿಯದ ನೆಲದಲ್ಲಿ ಹೊಸತೊಂದು ಇತಿಹಾಸ ನಿರ್ಮಿಸುವ ಸುವರ್ಣಾವಕಾಶವೊಂದು ಭಾರತಕ್ಕೆ ಒದಗಿ ಬಂದಿದೆ. ಹಾಗೆಯೇ ಆಸ್ಟ್ರೇಲಿಯ 2010ರ ಆ್ಯಶಸ್ ಸರಣಿಯ ಬಳಿಕ “ಬಾಕ್ಸಿಂಗ್ ಡೇ’ ಟೆಸ್ಟ್ ಪಂದ್ಯವನ್ನು ಸೋತದ್ದಿಲ್ಲ. ಅಂದು ಇಂಗ್ಲೆಂಡ್ ಕೈಯಲ್ಲಿ ಇನ್ನಿಂಗ್ಸ್ ಹಾಗೂ 157 ರನ್ನುಗಳ ಭಾರೀ ಸೋಲಿಗೆ ತುತ್ತಾಗಿತ್ತು. ಸ್ಕೋರ್‌ಪಟ್ಟಿ
* ಭಾರತ ಪ್ರಥಮ ಇನ್ನಿಂಗ್ಸ್ 7 ವಿಕೆಟಿಗೆ 443 ಡಿಕ್ಲೇರ್
* ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್ 151
* ಭಾರತ ದ್ವಿತೀಯ ಇನ್ನಿಂಗ್ಸ್
(ನಿನ್ನೆ 5 ವಿಕೆಟಿಗೆ 54)
ಮಾಯಾಂಕ್ ಅಗರ್ವಾಲ್ ಬಿ ಕಮಿನ್ಸ್ 42
ರಿಷಬ್ ಪಂತ್ ಸಿ ಪೇನ್ ಬಿ ಹ್ಯಾಝಲ್‌ವುಡ್ 33
ರವೀಂದ್ರ ಜಡೇಜ ಸಿ ಖ್ವಾಜಾ ಬಿ ಕಮಿನ್ಸ್ 5
ಮೊಹಮ್ಮದ್ ಶಮಿ ಔಟಾಗದೆ 0
ಇತರ 7
ಒಟ್ಟು (8 ವಿಕೆಟಿಗೆ ಡಿಕ್ಲೇರ್) 106
ವಿಕೆಟ್ ಪತನ: 6-83, 7-100, 8-106.
ಬೌಲಿಂಗ್:
ಮಿಚೆಲ್ ಸ್ಟಾರ್ಕ್ 3-1-11-0
ಜೋಶ್ ಹ್ಯಾಝಲ್‌ವುಡ್ 10.3-3-22-2
ನಥನ್ ಲಿಯೋನ್ 13-1-40-0
ಪ್ಯಾಟ್ ಕಮಿನ್ಸ್ 11-3-27-6 ಆಸ್ಟ್ರೇಲಿಯ ದ್ವಿತೀಯ ಇನ್ನಿಂಗ್ಸ್
(ಗೆಲುವಿನ ಗುರಿ 399 ರನ್)
ಮಾರ್ಕಸ್ ಹ್ಯಾರಿಸ್ ಸಿ ಅಗರ್ವಾಲ್ ಬಿ ಜಡೇಜ 13
ಆರನ್ ಫಿಂಚ್ ಸಿ ರೋಹಿತ್ ಬಿ ಬುಮ್ರಾ 3
ಉಸ್ಮಾನ್ ಖ್ವಾಜಾ ಎಲ್‌ಬಿಡಬ್ಲ್ಯು ಶಮಿ 33
ಶಾನ್ ಮಾರ್ಷ್ ಎಲ್‌ಬಿಡಬ್ಲ್ಯು ಬುಮ್ರಾ 44
ಟ್ರ್ಯಾವಿಸ್ ಹೆಡ್ ಬಿ ಇಶಾಂತ್ 34
ಮಿಚೆಲ್ ಮಾರ್ಷ್ ಸಿ ಕೊಹ್ಲಿ ಬಿ ಜಡೇಜ 10
ಟಿಮ್ ಪೇನ್ ಸಿ ಪಂತ್ ಬಿ ಜಡೇಜ 26
ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ 61
ಮಿಚೆಲ್ ಸ್ಟಾರ್ಕ್ ಬಿ ಶಮಿ 18
ನಥನ್ ಲಿಯೋನ್ ಬ್ಯಾಟಿಂಗ್ 6
ಇತರ 10
ಒಟ್ಟು (8 ವಿಕೆಟಿಗೆ) 258
ವಿಕೆಟ್ ಪತನ: 1-6, 2-33, 3-63, 4-114, 5-135, 6-157, 7-176, 8-215.
ಬೌಲಿಂಗ್:
ಇಶಾಂತ್ ಶರ್ಮ 12-0-37-1
ಜಸ್‌ಪ್ರೀತ್ ಬುಮ್ರಾ 17-1-53-2
ರವೀಂದ್ರ ಜಡೇಜ 32-6-82-3
ಮೊಹಮ್ಮದ್ ಶಮಿ 21-2-71-2
ಹನುಮ ವಿಹಾರಿ 3-1-7-0