Advertisement

ಬುಶ್‌ಫೈರ್‌ ಕ್ರಿಕೆಟ್‌ ಬಾಶ್‌: ಸಿಡ್ನಿಯಿಂದ ಮೆಲ್ಬರ್ನ್ ಗೆ

11:41 PM Feb 06, 2020 | Team Udayavani |

ಮೆಲ್ಬರ್ನ್: ಆಸ್ಟ್ರೇಲಿಯದಲ್ಲಿ ಸಂಭವಿಸಿದ ಭೀಕರ ಕಾಡ್ಗಿಚ್ಚಿನಲ್ಲಿ ನಿರಾಶ್ರಿತರಾದವರ ನೆರವಿಗಾಗಿ ನಡೆಯಲಿರುವ “ಬುಶ್‌ಫೈರ್‌ ಕ್ರಿಕೆಟ್‌ ಬಾಶ್‌’ ಸಹಾಯಾರ್ಥ ಪಂದ್ಯ ಸಿಡ್ನಿಯಿಂದ ಮೆಲ್ಬರ್ನ್ ಗೆ ಸ್ಥಳಾಂತರಗೊಂಡಿದೆ.

Advertisement

ರವಿವಾರ ಇಲ್ಲಿನ “ಜಂಕ್ಷನ್‌ ಓವಲ್‌’ನಲ್ಲಿ ರಿಕಿ ಪಾಂಟಿಂಗ್‌ ಇಲೆವೆನ್‌ ಮತ್ತು ಆ್ಯಡಂ ಗಿಲ್‌ಕ್ರಿಸ್ಟ್‌ ತಂಡಗಳು ಸೆಣಸಲಿವೆ.ಮೂಲ ವೇಳಾಪಟ್ಟಿಯಂತೆ ಈ ಪಂದ್ಯ ಸಿಡ್ನಿಯಲ್ಲಿ ಶನಿವಾರ ರಿಕಿ ಪಾಂಟಿಂಗ್‌ ಇಲೆವೆನ್‌ ಮತ್ತು ಶೇನ್‌ ವಾರ್ನ್ ಇಲೆವೆನ್‌ ನಡುವೆ ನಡೆಯಬೇಕಿತ್ತು. ಆದರೆ ಇಲ್ಲಿನ ಪ್ರತಿಕೂಲ ಹವಾಮಾನ ದಿಂದಾಗಿ “ಕ್ರಿಕೆಟ್‌ ಆಸ್ಟ್ರೇಲಿಯ’ ಈ ಪಂದ್ಯವನ್ನು ಮೆಲ್ಬರ್ನ್ ನಲ್ಲಿ ನಡೆಸಲು ತೀರ್ಮಾನಿಸಿದೆ.

ಪಂದ್ಯ ಒಂದು ದಿನ ಮುಂದೂಡಲ್ಪಟ್ಟ ಕಾರಣ ಶೇನ್‌ ವಾರ್ನ್ ಆಡಲು ಲಭ್ಯರಾಗುತ್ತಿಲ್ಲ. ಅವರು ಪೂರ್ವ ಒಪ್ಪಂದದಂತೆ ಬೇರೊಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿದೆ. ಜತೆಗೆ ಮೈಕಲ್‌ ಕ್ಲಾರ್ಕ್‌, ಮೈಕಲ್‌ ಹಸ್ಸಿ ಹಾಗೂ ಕೆಲವು ವನಿತಾ ಕ್ರಿಕೆಟಿಗರೂ ಈ ಸಹಾಯಾರ್ಥ ಪಂದ್ಯಕ್ಕೆ ಲಭಿಸುತ್ತಿಲ್ಲ.ತೆಂಡುಲ್ಕರ್‌, ಪೇನ್‌ ಕೋಚ್‌ ಲೆಜೆಂಡ್ರಿ ಕ್ರಿಕೆಟರ್‌ ಸಚಿನ್‌ ತೆಂಡುಲ್ಕರ್‌ ಮತ್ತು ಟಿಮ್‌ ಪೇನ್‌ ಕ್ರಮವಾಗಿ ಪಾಂಟಿಂಗ್‌ ಇಲೆವೆನ್‌ ಹಾಗೂ ಗಿಲ್‌ಕ್ರಿಸ್ಟ್‌ ಇಲೆವೆನ್‌ ತಂಡದ ಕೋಚ್‌ ಆಗಿದ್ದಾರೆ.

ಇದು 10 ಓವರ್‌ಗಳ ಪ್ರದರ್ಶನ ಪಂದ್ಯವಾಗಿದೆ. ಮೊದಲ 5 ಓವರ್‌ ಪವರ್‌ ಪ್ಲೇ ಆಗಿರುತ್ತದೆ. ಇಲ್ಲಿ ಯಾವುದೇ ಬೌಲಿಂಗ್‌ ನಿರ್ಬಂಧವಿಲ್ಲ. ಇಲ್ಲಿನ ಹಾಗೂ ಬಿಗ್‌ ಬಾಶ್‌ ಲೀಗ್‌ ಫೈನಲ್‌ ಪಂದ್ಯದ ಮೊತ್ತವನ್ನು “ಬುಶ್‌ಫೈರ್‌ ಫ‌ಂಡ್‌’ಗೆ ನೀಡಲಾಗುವುದು.ಲಾರಾ, ಯುವರಾಜ್‌, ಅಕ್ರಮ್‌, ಹೇಡನ್‌ ಸಹಿತ ಮಾಜಿ ಕ್ರಿಕೆಟಿಗರ ನೇಕರು ಈ ಪಂದ್ಯದಲ್ಲಿ ಆಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next