Advertisement
ಶ್ವೇತಭವನಕ್ಕೆ ಡೊನಾಲ್ಡ್ ಟ್ರಂಪ್ ಗುಡ್‌ಬೈ ಹೇಳುತ್ತಿದ್ದಂತೆ, ಟ್ರಂಪ್‌ಗೆ ಗುಡ್‌ಬೈ ಹೇಳಲು ಪತ್ನಿ ಮೆಲಾನಿಯಾ ಕಾಯುತ್ತಿದ್ದಾರಂತೆ! ಹೀಗೆಂದು ಶ್ವೇತಭವನದ ಸಿಬಂದಿಯೇ ಮಾಹಿತಿ ನೀಡಿದ್ದಾರೆ.
Related Articles
Advertisement
ಸೋಲೊಪ್ಪಲು ಸಲಹೆ ನೀಡಿದ ಟ್ರಂಪ್ ಅಳಿಯ
“ಮಾವಾ ಸೋಲು ಒಪ್ಪಿಕೊಳ್ಳಿ” ಹೀಗೆಂದು ಡೊನಾಲ್ಡ್ ಟ್ರಂಪ್ ಅವರಿಗೆ ಅಳಿಯ ಮತ್ತು ಹಿರಿಯ ಸಲಹೆಗಾರ ಜೆರಾರ್ಡ್ ಕುಶ್ನರ್ ಸಲಹೆ ಮಾಡಿದ್ದಾರೆ ಎನ್ನಲಾಗಿದೆ. ಅಮೆರಿಕದ ಮಾಧ್ಯಮ ಸಂಸ್ಥೆಗಳು ಡೆಮಾಕ್ರಾಟ್ ಪಕ್ಷದ ಜೋ ಬೈಡೆನ್ ಅವರೇ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಅಧಿಕವಾಗಿದೆ ಎಂದು ವರದಿಗಳನ್ನು ಪ್ರಕಟಿಸಿದ ಬಳಿಕ ಟ್ರಂಪ್ “ಜಯ ಸಾಧಿಸಿದ್ದೇನೆ ಎಂದು ಬೈಡೆನ್ ಆತುರದಿಂದ ಹೇಳಿಕೊಳ್ಳುತ್ತಿದ್ದಾರೆ. ಹೋರಾಟ ಇನ್ನೂ ಮುಕ್ತಾಯವಾಗಿಲ್ಲ’ ಎಂದು ಹೇಳಿಕೆ ನೀಡಿದ್ದರು. ಇದಾದ ಬಳಿಕ ಕುಶ್ನರ್ ಟ್ರಂಪ್‌ರನ್ನು ಭೇಟಿ ಮಾಡಿ ಹೆಚ್ಚು ವಿವಾದ ಮಾಡದೆ ಚುನಾವಣೆಯಲ್ಲಿ ಸೋಲು ಒಪ್ಪಿಕೊಳ್ಳುವುದು ಸೂಕ್ತ ಎಂದು ಸಲಹೆ ಮಾಡಿದ್ದರೆಂದು ಮಾಧ್ಯಮಗಳು ವರದಿ ಮಾಡಿವೆ.