Advertisement

ಮೇಕೆದಾಟುಗೆ ಒತ್ತಾಯಿಸಿ ಆಗಸ್ಟ್ 18ಕ್ಕೆ ರೈತ ಸಂಘ, ಕನ್ನಡಪರ ಸಂಘಟನೆಗಳಿಂದ ಬೈಕ್ ರ‍್ಯಾಲಿ

07:39 PM Aug 10, 2021 | Team Udayavani |

ಕನಕಪುರ : ಮೇಕೆದಾಟು ಅಣೆಕಟ್ಟು ಯೋಜನೆ ಶೀಘ್ರ ಕಾರ್ಯಗತ ಗೊಳಿಸುವಂತೆ ಒತ್ತಾಯಿಸಿ ಆಗಸ್ಟ್ 18ರಂದು ಜಿಲ್ಲಾ ಕೇಂದ್ರದಿಂದ ಮೇಕೆದಾಟು ಉದ್ದೇಶಿತ ಸ್ಥಳದವರೆಗೂ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಚಿಲ್ಲೂರ ಮುನಿರಾಜು ತಿಳಿಸಿದರು.

Advertisement

ನಗರದ ರಾಜಾರಾವ್ ರಸ್ತೆಯಲ್ಲಿರುವ ಸಂಘದ ಕಚೇರಿಯಲ್ಲಿ ದಲಿತ ಮತ್ತು ಕನ್ನಡಪರ ಸಂಘಟನೆ ಹಾಗೂ ರೈತ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು ರಾಜ್ಯದ ಜನರಿಗೆ ಅನುಕೂಲವಾಗುವ ಮೇಕೆದಾಟು ಯೋಜನೆಯನ್ನು ಜಾರಿಗೆ ತರದೆ ಕಳೆದ ಐದು ವರ್ಷಗಳಿಂದ ಎಲ್ಲಾ ರಾಜಕೀಯ ಪಕ್ಷಗಳು ಯೋಜನೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಪ್ರಸ್ತುತ ಕೇಂದ್ರ ಸರ್ಕಾರ ಯೋಜನೆ ಜಾರಿಗೆ ತರಲು ಕಣಿವೆ ರಾಜ್ಯಗಳ ಅನುಮತಿ ಪಡೆಯುವುದು ಅಗತ್ಯ ಎಂಬ ಷರತ್ತು ವಿಧಿಸಿ ಒಕ್ಕೂಟದ ವ್ಯವಸ್ಥೆಗೆ ದಕ್ಕೆ ತರುವ ಕೆಲಸ ಮಾಡುತ್ತಿದೆ ಮಳೆಗಾಲದಲ್ಲಿ ಹರಿದು ಬರುವ ಹೆಚ್ಚುವರಿ ನೀರನ್ನು ಸಂಗ್ರಹ ಮಾಡಿ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳುವುದು ಮೇಕೆದಾಟು ಯೋಜನೆಯ ಮೂಲ ಉದ್ದೇಶ ಇದರಿಂದ ತಮಿಳುನಾಡಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ ಎಂಬುದು ಗೊತ್ತಿದ್ದರೂ ತಮಿಳುನಾಡು ಸರಕಾರ ಮತ್ತು ಅಲ್ಲಿನ ರಾಜಕಾರಣಿಗಳು ಈ ಯೋಜನೆಗೆ ತೊಡಕುಂಟು ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ :   ರಾಜ್ಯದ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಕೇಂದ್ರ ಸಚಿವರಿಗೆ ಬಿ.ಸಿ.ಪಾಟೀಲ್ ಮನವಿ

ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ವಿರೋಧ ಪಕ್ಷಗಳ ರಾಜಕೀಯ ಮೇಲಾಟಕ್ಕೆ ಮಹಾತ್ವಾಕಾಂಕ್ಷಿ ಮೇಕೆದಾಟು ಯೋಜನೆ ಯಾವುದೇ ಕಾರಣಕ್ಕೂ ಬಲಿಯಾಗಬಾರದು ಸರ್ಕಾರಗಳ ಇಚ್ಛಾಶಕ್ತಿಯ ಕೊರತೆ ಮತ್ತು ವಿಳಂಬ ಧೋರಣೆಯನ್ನು ಖಂಡಿಸಿ ಶೀಘ್ರ ಮೇಕೆದಾಟು ಯೋಜನೆಯನ್ನು ಜಾರಿಗೆ ತರುವಂತೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ರ್ಯಾಲಿಯ ನೇತೃತ್ವವನ್ನು ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ವಹಿಸಲಿದ್ದು ವಿಭಾಗಿಯ ಉಪಾಧ್ಯಕ್ಷ ಕೆ ಮಲ್ಲಯ್ಯ ಹಾಗೂ ವಿಭಾಗಿಯ ಕಾರ್ಯದರ್ಶಿಗಳು ರಾಜ್ಯದ ಸಮಿತಿಯ ಎಲ್ಲ ಸದಸ್ಯರು ಕನ್ನಡಪರ ದಲಿತ ಪರ ಸಂಘಟನೆಗಳು ಸೇರಿದಂತೆ ತುಮಕೂರು ಕೋಲಾರ ಚಿಕ್ಕಬಳ್ಳಾಪುರ ಬೆಂಗಳೂರು ನಗರ ಹಾಗೂ ಮಂಡ್ಯ ಜಿಲ್ಲೆಗಳಿಂದಲೂ ರೈತ ಮುಖಂಡರು ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಆಗಸ್ಟ್ 18ರಂದು ರಾಮನಗರ ಜಿಲ್ಲಾ ಕೇಂದ್ರದ ವಿಧಾನಸೌಧದಿಂದ 10:00 ಗಂಟೆಗೆ ಬೈಕ್ ರ್ಯಾಲಿ ಹೊರಡಲಿದ್ದು ಕನಕಪುರದ ಮಾರ್ಗವಾಗಿ ಸಂಗಮದಲ್ಲಿರುವ ಮೇಕೆದಾಟು ಉದ್ದೇಶಿತ ಸ್ಥಳದವರೆಗೂ ರ್ಯಾಲಿ ನಡೆಸಿ ಬಳಿಕ ಪ್ರತಿಭಟನೆ ನಡೆಸಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ ರಾಜ್ಯದ ಜನರ ಒಳಿತಿಗಾಗಿ ಹಮ್ಮಿಕೊಂಡಿರುವ  ಹೋರಾಟಕ್ಕೆ ಸಮಾನಮನಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು.

ಈ ಸಭೆಯಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ನೀಲಿ ರಮೇಶ್ ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ್ ವೈಭವ ಕರ್ನಾಟಕದ ಜಿಲ್ಲಾಧ್ಯಕ್ಷ ಪುಟ್ಟಲಿಂಗಯ್ಯ ದಲಿತ ಸಂಘರ್ಷ ಸಮಿತಿಯ ನಾಗರಾಜು ಲೋಕೇಶ್ ಜಿಲ್ಲಾ ಲೇಖಕರ ವೇದಿಕೆಯ ಕೂ.ಗಿ. ಗಿರಿಯಪ್ಪ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕುಮಾರ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್ ಸಿದ್ದೇಗೌಡ ಕೃಷ್ಣಪ್ಪ ತಾಲೂಕು ಉಪಾಧ್ಯಕ್ಷ ಬಸವರಾಜು ಕಾರ್ಯಧ್ಯಕ್ಷ ಅಭಿಷೇಕ್ ಸಿದ್ದರಾಮೇಗೌಡ ಸೇರಿದಂತೆ ರೈತ ಮುಖಂಡರು ಕನ್ನಡ ಪರ ಸಂಘಟನೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

ಇದನ್ನೂ ಓದಿ :   ಎಲ್ ಐ ಸಿಯ ಈ ಪಾಲಿಸಿ ನೀವು ಪಡೆದರೇ, ಇಷ್ಟು ಪ್ರಮಾಣದಲ್ಲಿ ನಿಮಗೆ ಪಿಂಚಣಿ ಲಭ್ಯವಾಗುತ್ತದೆ.!?

Advertisement

Udayavani is now on Telegram. Click here to join our channel and stay updated with the latest news.

Next