Advertisement

ಮೇಕೆದಾಟು ಅನುಷ್ಠಾನಕ್ಕೆ  ಸರ್ಕಾರ ಬದ್ಧ

03:32 PM Aug 08, 2022 | Team Udayavani |

ಹನೂರು: ಬೆಂಗಳೂರು ಭಾಗದ ಕುಡಿಯುವ ನೀರಿನ ಸಮಸ್ಯೆ ಮತ್ತು ವಿದ್ಯುತ್‌ ಸಮಸ್ಯೆಯನ್ನು ನಿವಾರಿಸಲು ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಅರಣ್ಯ ಸಚಿವ ಉಮೇಶ್‌ ಕತ್ತಿ ಹೇಳಿದರು.

Advertisement

ತಾಲೂಕಿನ ಮೇಕೆದಾಟು ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ್ದ ಅರಣ್ಯ ಸಚಿವರು ಮಲೆ ಮಹದೇಶ್ವರ ವನ್ಯಜೀವಿ ವಲಯ ಮತ್ತು ಮೇಕೆದಾಟು ಪ್ರದೇಶವನ್ನು ವೀಕ್ಷಿಸಿದ ಬಳಿಕ ಮಾತನಾಡಿ, ಮೇಕೆದಾಟು ಯೋಜನೆ ಯಿಂದ ತ.ನಾಡಿಗೆ ಯಾವುದೇ ಸಮಸ್ಯೆಯಿಲ್ಲ. ಏನೇ ಆದರೂ ಅವರಿಗೆ ನಿಗದಿಯಾಗಿರುವಂತಹ ನೀರನ್ನು ನೀಡಲಾಗುತ್ತದೆ. ಆದರೂ ತಮಿಳುನಾಡು ಸರ್ಕಾರ ಏಕೆ ತಗಾದೆ ತೆಗೆದಿದೆಯೋ ಗೊತ್ತಿಲ್ಲ. ಬೆಂಗಳೂರು ಮತ್ತು ಸುತ್ತಮುತ್ತಲ ಭಾಗಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮತ್ತು ವಿದ್ಯುತ್‌ ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಎಷ್ಟೇ ಅಡೆತಡೆಗಳು ಬಂದರೂ ಎಲ್ಲವನ್ನು ದಾಟಿಯೋ ಜನೆ ಅನುಷ್ಠಾನಗಳಿಸಲಾಗುವುದು ಎಂದು ತಿಳಿಸಿದರು.

ಹುಲಿ ಸಂರಕ್ಷಿತಾರಣ್ಯ ಪ್ರದೇಶ ಘೋಷಣೆ: ಮಹ ದೇಶ್ವರ ವನ್ಯಜೀವಿ ವಲಯವನ್ನು ಹುಲಿ ಸಂರಕ್ಷಿತಾರಣ್ಯ ಪ್ರದೇಶ ಎಂದು ಘೋಷಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಮತ್ತ ರಾಜ್ಯ ಸರ್ಕಾರಗಳು ಚಿಂತನೆ ನಡೆಸುತ್ತಿದ್ದು ಘೋ ಷಣೆ ಮಾಡಲು ತೀರ್ಮಾನ ಗಳಾಗುತ್ತಿವೆ ಎಂದು ಸ್ಪಷ್ಟಪ ಡಿಸಿದರು.

ವಸತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಘೋಷಣೆ ಮಾಡುವುದಿಲ್ಲ ಎನ್ನುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಸಚಿವ ಸೋಮಣ್ಣ ಅವರು ಓರ್ವ ಸಚಿವರು, ನಾನೂ ಕೂಡ ಓರ್ವ ಸಚಿವ. ಈ ಭಾಗದ ಜನರ ಸಂಕಷ್ಟವನ್ನು ಅರಿತು ಆ ರೀತಿ ಹೇಳಿರಬಹುದು. ಈ ಬಗ್ಗೆ ಸಿಎಂ ಈ ಭಾಗದ ಸ್ಥಳೀಯ ಜನಪ್ರತಿ ನಿಧಿಗಳು ಮತ್ತು ಸಾರ್ವಜನಿಕರ ಜೊತೆ ಸಾಧಕ- ಬಾಧಕಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ತಿಳಿಸಿದರು. ಅರಣ್ಯ ಇಲಾಖೆಯ ಸಿಸಿಎಫ್ ಉಪೇಂದ್ರ ಪ್ರತಾಪ್‌, ಡಿಎಫ್ಒಗಳಾದ ಏಡುಕುಂಡಲು, ನಂದೀಶ್‌, ಎಸಿಎಫ್ ಭಾಗ್ಯಲಕ್ಷ್ಮೀ, ಎಸಿಎಫ್ ಅಂಕರಾಜು, ಆರ್‌ಎಫ್ಒಗಳಾದ ಶಶಿಕುಮಾರ್‌, ಸೈಯದ್‌ ನದಾಫ್ ಮುಖಂಡರಾಧ ಪ್ರೀತನ್‌ನಾಗಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next