Advertisement

MEILನಿಂದ ಆಸ್ಪತ್ರೆಗಳಿಗೆ ನಿತ್ಯ 500ರಿಂದ 600 ಉಚಿತ ಆಕ್ಸಿಜನ್ ಸಿಲಿಂಡರ್ ರವಾನೆಗೆ ಸಿದ್ಧತೆ

06:19 PM May 09, 2021 | Team Udayavani |

ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ಕರೋನಾ ಎರಡನೇ ಅಲೆಯಿಂದ ಉದ್ಭವಿಸಿರುವ ಆಕ್ಸಿಜನ್ ಕೊರತೆ ನೀಗಿಸಲು ಅಮೂಲ್ಯವಾದ ಪ್ರಾಣಾವಾಯುವನ್ನು ಉಚಿತವಾಗಿ ಒದಗಿಸಲು ಮೆಘಾ ಇಂಜಿನಿಯರಿಂಗ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿ., ಸಿದ್ಧತೆ ನಡೆಸಿದೆ.

Advertisement

ಆರಂಭಿಕ ಹಂತದಲ್ಲಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯದಲ್ಲಿ ಈ ಕಾರ್ಯ ಆರಂಭಿಸಿರುವ ಇಂಜಿನಿಯರಿಂಗ್ ಕ್ಷೇತ್ರದ ದೈತ್ಯ ಎಂಇಐಎಲ್, ಕೋವಿಡ್‌ನಿಂದ ಬಳಲುತ್ತಿರುವ ರೋಗಿಗಳಿಗೆ ತುರ್ತು ಅಗತ್ಯಕ್ಕೆ ಪ್ರತಿ ನಿತ್ಯ 500 ರಿಂದ 600 ಸಿಲಿಂಡರ್‌ಗಳಷ್ಟು ಆಕ್ಸಿಜನ್ ಉಚಿತವಾಗಿ ಸರಬರಾಜು ಮಾಡಲು ಸಿದ್ಧತೆ ನಡೆಸಿದೆ.

ಡಿಆರ್‌ಡಿಓ ಸಹಕಾರದಲ್ಲಿ ಆಕ್ಸಿಜನ್ ಘಟಕಗಳ ಸ್ಥಾಪನೆ:

ಪ್ರಸ್ತುತ ಆಕ್ಸಿಜನ್ ಸರಬರಾಜಿನ ಜತೆಗೆ ಎಂಇಐಎಲ್ ದೇಶದ ಅತ್ಯುನ್ನತ ಸಂಸ್ಥೆ ಡಿಆರ್‌ಡಿಓ ತಾಂತ್ರಿಕ ಸಹಕಾರದೊಂದಿಗೆ 30ರಿಂದ 40 ಆಕ್ಸಿಜನ್ ಉತ್ಪಾದನಾ ಘಟಕವನ್ನು ಆರಂಭಿಸಲೂ ಮುಂದಡಿ ಇರಿಸಿದೆ.

ಯುದ್ಧ ವಿಮಾನಗಳಲ್ಲಿ ಬಳಕೆ ಮಾಡುವ ಅತ್ಯಾಧುನಿಕ ತಂತ್ರಜ್ಞಾನದ ಈ ಪ್ರತಿ ಘಟಕವು ಪ್ರತಿ ನಿಮಿಷಕ್ಕೆ 150 ರಿಂದ 1000 ಲೀಟರ್‌ಗಳಷ್ಟು ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯದ್ದಾಗಿರಲಿವೆ. ಈ ಸಂಬಂಧ ಈಗಾಗಲೇ ಮೆಘಾ ಇಂಜಿನಿಯರಿಂಗ್ ಡಿಆರ್‌ಡಿಓ ಜತೆ ಮಾತುಕತೆ ನಡೆಸಿದ್ದು, ಡಿಆರ್‌ಡಿಓ ನಿರ್ದೇಶಕ ಬಿ.ಎಸ್. ರಾವತ್ ಅವರು ಈ ಕಾರ್ಯ ಸಹಯೋಗಕ್ಕೆ ತಮ್ಮ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ರಾಘವೇಂದ್ರ ರಾವ್ ಅವರನ್ನು ನೇಮಿಸಿದೆ.

Advertisement

ಇದನ್ನೂ ಓದಿ :ಮಾಲ್ಡೀವ್ಸ್‌ ಮಾಜಿ ಅಧ್ಯಕ್ಷ ನಶೀದ್‌ ಮೇಲೆ ದಾಳಿ ಪ್ರಕರಣ : ಪೊಲೀಸರಿಂದ ಶಂಕಿತನ ಬಂಧನ

ಪ್ರಸ್ತುತ ಎಂಇಐಎಲ್ ಪ್ರತಿನಿತ್ಯ 30 ಟನ್‌ಗಳಷ್ಟು ಕ್ರಯೋಜೆನಿಕ್ ಆಕ್ಸಿಜನ್ ಉತ್ಪಾದಿಸುತ್ತಿದ್ದು, ನಂತರ ಇದನ್ನು ವೈದ್ಯಕೀಯ ಬಳಕೆಗೆ ಅನುವಾಗುವಂತೆ ಪರಿವರ್ತಿಸಿ ಸರಬರಾಜು ಮಾಡಲಿದೆ. ಇದೇ 13ರ ವೇಳೆಗೆ ಭದ್ರಾಚಲಂನಲ್ಲಿ ಇಂತಹ ಘಟಕವೊಂದು ಕಾರ್ಯಾರಂಭಿಸಲಿದೆ.

ಮುಂದಿನ ದಿನಗಳಲ್ಲಿ ಎಂಇಐಎಲ್ ರಾಜ್ಯಗಳ ಅಗತ್ಯತೆ ತಕ್ಕಂತೆ ಸ್ಪೇನ್‌ನಿಂದ 2ರಿಂದ 3 ಕ್ರಯೋಜೆನಿಕ್ ಟ್ಯಾಂಕ್‌ಗಳನ್ನು ಆಮದು ಮಾಡಿಕೊಂಡು ಇನ್ನಷ್ಟು ಪ್ರಾಣವಾಯು ಉತ್ಪಾದನೆಗೆ ಚಿಂತನೆ ನಡೆಸಿದೆ.

ಪ್ರಸ್ತುತ ಎಂಇಐಎಲ್‌ನ ಆಕ್ಸಿಜನ್ ‘ಬಿ’ ಮಾದರಿಯ ವೈದ್ಯಕೀಯ ಬಳಕೆಯದಾಗಿದ್ದು, ಪ್ರತಿ ಸಿಲಿಂಡರ್ 7000 ಲೀಟರ್ ಸಾಮರ್ಥ್ಯದಾಗಿರಲಿದೆ ಮತ್ತು ಒಟ್ಟಾರೆ 35 ಲಕ್ಷ ಲೀಟರ್ ಆಕ್ಸಿಜನ್ ಸರಬರಾಜಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next