Advertisement

ಮೆಹುಲ್ ಚೋಕ್ಸಿ ಭಾರತಕ್ಕೆ ಗಡಿಪಾರು ಸದ್ಯಕ್ಕೆ ಕಷ್ಟ; ಕಾರಣ ಏನು ಗೊತ್ತಾ?

08:42 AM Jun 04, 2021 | Team Udayavani |

ಹೊಸದಿಲ್ಲಿ: ಭಾರತದಲ್ಲಿ ಸಾವಿರಾರು ಕೋಟಿ ರೂಪಾಯಿ ವಂಚನೆ ನಡೆಸಿ ಪರಾರಿಯಾಗಿ ಸದ್ಯ ಡೊಮಿನಿಕಾ ಪೊಲೀಸರ ಅತಿಥಿಯಾಗಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಕರೆತರಲು ಸಾಕಷ್ಟು ಪ್ರಯತ್ನಗಳು ನಡೆಯತ್ತಿದೆ. ಆದರೆ ಚೋಕ್ಸಿಯನ್ನು ಭಾರತಕ್ಕೆ ಗಡಿಪಾರು ಮಾಡಲು ಕನಿಷ್ಠ ಒಂದು ತಿಂಗಳಾದರೂ ಹಿಡಿಯಬಹುದು ಎನ್ನುತ್ತದೆ ವರದಿಗಳು.

Advertisement

ಭಾರತದಿಂದ ಪರಾರಿಯಾಗಿ ಆ್ಯಂಟಿಗಾ ಮತ್ತು ಬರ್ಬುಡಾ ದೇಶದಲ್ಲಿ ನೆಲೆಸಿದ್ದ ಚೋಕ್ಸಿ, ಅಲ್ಲಿಂದ ನಾಪತ್ತೆಯಾಗಿದ್ದ. ನಂತರ ಕೆಲ ದಿನಗಳ ಬಳಿಕ ಡೊಮಿನಿಕಾ ಪೊಲೀಸರು ಚೋಕ್ಸಿಯನ್ನು ಬಂಧಿಸಿದ್ದರು. ಇದೀಗ ಚೋಕ್ಸಿ ಡೊಮಿನಿಕಾ ಪೊಲೀಸರ ಅತಿಥಿಯಾಗಿದ್ದಾನೆ.

ಸದ್ಯ ಚೋಕ್ಸಿ ವಿರುದ್ಧ ಡೊಮಿನಿಕಾದ ಎರಡು ನ್ಯಾಯಾಲಯಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ಡೊಮಿನಿಕಾ ಪೊಲೀಸರು ತನ್ನನ್ನು ಕಾನೂನಿಗೆ ವಿರುದ್ಧವಾಗಿ ಬಂಧಿಸಿದ್ದಾರೆ. ತನ್ನನ್ನು ಆ್ಯಂಟಿಗಾ ಗೆ ಕಳುಹಿಸಬೇಕು ಎಂದು ಚೋಕ್ಸಿ ಡೊಮಿನಿಕಾ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದಾನೆ. ಮತ್ತೊಂದು ಪ್ರಕರಣದಲ್ಲಿ ಡೊಮಿನಿಕಾದ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಚೋಕ್ಸಿ ವಿರುದ್ದ ದೇಶದೊಳಗೆ ಅಕ್ರಮ ಪ್ರವೇಶದಡಿ ವಿಚಾರಣೆ ನಡೆಯುತ್ತಿದೆ.

ಇಂಡಿಯಾ ಟುಡೇ ವರದಿ ಮಾಡಿರುವಂತೆ, ಈ ಎರಡೂ ಪ್ರಕರಣಗಳು ಇತ್ಯರ್ಥವಾಗದ ಹೊರತು ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಕರೆತರಲು ಸಾಧ್ಯವಿಲ್ಲ.

ಚೋಕ್ಸಿ ಪ್ರಕರಣದ ವಿಚಾರಣೆಯನ್ನು ಡೊಮಿನಿಕಾ ಹೈಕೋರ್ಟ್ ಮುಂದೂಡಿದೆ. ಮುಂದಿನ ವಿಚಾರಣೆಯ ದಿನಾಂಕವನ್ನು ಇದುವರೆಗೆ ತಿಳಿಸಲಾಗಿಲ್ಲ. ಆದರೆ ಮೂಲಗಳ ಪ್ರಕಾರ ಈ ವಿಚಾರಣೆ ಜುಲೈ 1ಕ್ಕೆ ನಡೆಯುವ ಸಾಧ್ಯತೆ ಹೆಚ್ಚಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next