ನವದೆಹಲಿ: ಡೊಮಿನಿಕಾದಲ್ಲಿ ಬಂಧಿಸಲ್ಪಟ್ಟಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಇದೀಗ ಪೊಲೀಸ್ ಕಸ್ಟಡಿಯಲ್ಲಿದ್ದು, ಈ ಕುರಿತ ಫೋಟೋಗಳನ್ನು ಅಲ್ಲಿನ ಸ್ಥಳೀಯ ಮಾಧ್ಯಮಗಳು ಬಿಡುಗಡೆ ಮಾಡಿದೆ.
ಈಗಾಗಲೇ ನ್ಯಾಯಾಲಯವು ಬುಧಾವಾರದವರೆಗೆ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿರುವುದರಿಂದ, ಮೆಹುಲ್ ಚೋಕ್ಸಿ ಲಾಕ್ ಅಪ್ ನಲ್ಲಿದ್ದಾರೆ. ಚೋಕ್ಸಿ ಕಂಬಿಯ ಹಿಂದೆ ನಿಂತಿರುವ ಕೆಲವೊಂದು ಫೋಟೋಗಳು ಹೊರಬಿದ್ದಿದ್ದು ದೇಹದಲ್ಲಿ ಗಾಯದ ಗುರುತುಗಳು ಪತ್ತೆಯಾಗಿವೆ. ಮಾತ್ರವಲ್ಲದೆ ಕೈಯಲ್ಲಿ ಸುಟ್ಟ ಗಾಯಗಳು ಪತ್ತೆಯಾಗಿದೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಚೋಕ್ಸಿ ಪರ ವಕೀಲರು, ಆ್ಯಂಟಿಗುವಾ ಮತ್ತು ಬಾರ್ಬುಡಾದಿಂದ ಮೆಹುಲ್ ಚೋಕ್ಸಿ ಅಪಹರಿಸಲ್ಪಟ್ಟಿದ್ದು, ಬಲವಂತವಾಗಿ ಡೊಮಿನಿಕಾಗೆ ಕರೆತರಲಾಗಿದೆ. ಇದೀಗ ಕಸ್ಟಡಿಯಲ್ಲಿ ಅವರ ಮೇಲೆ ದಾರುಣವಾಗಿ ಹಲ್ಲೆ ನಡೆಸಲಾಗಿದ್ದು, ದೇಹದ ಕೆಲವು ಭಾಗಗಳನ್ನು ಸುಡಲಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಹೆಚ್ಚಾದ ಇಲಿಗಳ ಹಾವಳಿ: ಪ್ಲೇಗ್ ಭೀತಿ; ಭಾರತದಿಂದ ಪಾಷಾಣ ಆಮದಿಗೆ ಅಸ್ತು
ಡೊಮಿನಿಕಾ ನ್ಯಾಯಾಲಯ ಮೆಹುಲ್ ಚೋಕ್ಸಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸುವಂತೆ ಆದೇಶ ನೀಡಿದ್ದು, ವರದಿ ನೆಗೆಟಿವ್ ಬಂದಿದೆ.
ಇದನ್ನೂ ಓದಿ: ಪ್ರೇಯಸಿಯ ಜೊತೆಗೆ ವಿವಾಹ ಬಂಧನಕ್ಕೆ ಒಳಗಾದ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್