Advertisement

ಪಾನ್ಪೋರ್ಟ್‌ಗೆ 1.7 ಕೋಟಿ ಕೊಟ್ಟ ಚೋಸ್ಕಿ 

06:00 AM Jul 26, 2018 | Team Udayavani |

ಹೊಸದಿಲ್ಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 14 ಸಾವಿರ ಕೋಟಿ ರೂ. ವಂಚನೆ ಎಸಗಿದ ಪ್ರಕರಣದ ಆರೋಪಿ ಮೆಹುಲ್‌ ಚೋಸ್ಕಿ ಆ್ಯಂಟಿಗುವಾ ಪಾಸ್‌ಪೋರ್ಟ್‌ ಪಡೆಯಲು 1.3 ಕೋಟಿ ರೂ.ಗಳಿಂದ 1.7 ಕೋಟಿ ರೂ. ನೀಡಿದ್ದಾರೆ ಎಂಬ ಕುತೂಹಲಕರ ಮಾಹಿತಿ ಬೆಳಕಿಗೆ ಬಂದಿದೆ. ಸಿಬಿಐ ಚೋಸ್ಕಿ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಆ ರಾಷ್ಟ್ರಕ್ಕೆ ಮನವಿ ಮಾಡಿಕೊಂಡಿದೆ. ಆ ದೇಶದ ಜತೆಗೆ ಭಾರತ ಗಡಿಪಾರು ಒಪ್ಪಂದ ಹೊಂದಿಲ್ಲ. 2017ರ ನವೆಂಬರ್‌ನಲ್ಲಿಯೇ ಚೋಸ್ಕಿ ಅಲ್ಲಿನ ಪೌರತ್ವ ಪಡೆದುಕೊಂಡಿದ್ದರು. ಇ.ಡಿ ಮತ್ತು ಸಿಬಿಐಗೆ ಕೊನೆಯ ಕ್ಷಣದಲ್ಲಿ ಚೋಸ್ಕಿ ಆ್ಯಂಟಿಗುವಾದಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು ಎಂದು ಮೂಲಗಳು ಹೇಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next