Advertisement

ಮೆಹರುನ್ನೀಸಾ ಎತ್ತುವ ಪ್ರಶ್ನೆ-> 80 ಆದರೂ ಹೀರೋ ಆಗಬಹುದಾದರೆ ನಟಿಯರಿಗೇಕೆ ವಯಸ್ಸಿನ ಲೆಕ್ಕ?

01:05 PM Jan 23, 2021 | Team Udayavani |

ಪಣಜಿ: ಸಿನಿಮಾ ರಂಗದಲ್ಲಿ ಅದರಲ್ಲೂ ಬಾಲಿವುಡ್‌ನಲ್ಲಿ ನಟನಿಗೆ ಎಂಬತ್ತು ವರ್ಷವಾದರೂ ಮುಖಬೆಲೆ ಇರುವಾಗ ನಟಿಯರಿಗೆ ಏಕಿಲ್ಲ? ವಯಸ್ಸಿನ ಲೆಕ್ಕಾಚಾರ ನಟಿಗೆ ಮಾತ್ರ ಏಕೆ? ಇದು ಪುರುಷ ಪ್ರಧಾನವಾದ ಬಾಲಿವುಡ್ ಸೇರಿದಂತೆ ಒಟ್ಟೂ ಭಾರತೀಯ ಚಿತ್ರರಂಗದ ಮುಖವಲ್ಲದೇ ಮತ್ತೇನು?  ಈ ಪ್ರಶ್ನೆಯನ್ನು ಚರ್ಚೆಗೆ ಒಡ್ಡುವುದೇ ಸಂದೀಪ್‌ ಕುಮಾರ್‌ ನಿರ್ದೇಶನದ ‘ಮೆಹರುನ್ನೀಸಾ’.

Advertisement

ಚಿತ್ರೋತ್ಸವದಲ್ಲಿ ವಿಶ್ವ ಪ್ರೀಮಿಯರ್ ಆಗಿ ಪ್ರದರ್ಶಿತಗೊಂಡ ಮೆಹರುನ್ನೀಸಾ ಬಾಲಿವುಡ್‌ ನಲ್ಲಿದ್ದು, ತೆರೆಮರೆಗೆ ಸರಿದು, ಇತ್ತೀಚಿನ ಮೂರ್ನಾಲ್ಕು ವರ್ಷಗಳಲ್ಲಿ ಒಂದಿಷ್ಟು ಅವಕಾಶಗಳನ್ನು ಪಡೆಯುತ್ತಿರುವ ನಟಿಯ ಕುರಿತಾದ ಚಿತ್ರ. ವಿಶೇಷವೆಂದರೆ ಎಂಬತ್ತೆಂಟು ವರ್ಷದ ಈ ನಟಿಯೇ ಈ ಚಿತ್ರದ ಕಥಾ ನಾಯಕಿ. ನಟಿಯ ಹೆಸರು ಫರೂಖಾ ಜಾಫರ್‌.

1983 ರಲ್ಲಿ ಉಮ್ರಾ ಜಾನ್‌ ಚಿತ್ರದಲ್ಲಿ ಪೋಷಕ ನಟಿಯಾಗಿ ಅಭಿನಯಿಸಿದ್ದರು ಫರೂಖಾ. ವಿವಿಧ ಭಾರತಿ ಆಕಾಶವಾಣಿಯ ಉದ್ಘೋಷಕಿಯೂ ಆಗಿದ್ದ ಅವರಿಗೆ ಆ ಬಳಿಕ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ತದನಂತರ ಸ್ವದೇಶ್ ಚಿತ್ರದಲ್ಲಿ ಅವಕಾಶ ಸಿಕ್ಕಿತು. ಮತ್ತೆ ಮೋಡ ಆವರಿಸಿಕೊಂಡಿತು. 2009 ರಲ್ಲಿ ಪೀಪ್ಲಿ ಲೈವ್ ನಲ್ಲಿ ಅವಕಾಶ ಸಿಕ್ಕಿತಾದರೂ ಆ ಅವಕಾಶಗಳ ಸರಪಳಿ ಮುಂದುವರಿಯಲು ನಾಲ್ಕು ವರ್ಷಗಳು ಬೇಕಾದವು. 2013 ರಲ್ಲಿ ಅನ್ವರ್‌ ಕಾ ಅಜೂಬ್‌ ಕಿಸ್ಸಾದಲ್ಲಿ ಅವಕಾಶ ಸಿಕ್ಕಿ, 2015 ರ ಬಳಿಕ ನಿರಂತರವಾಗಿ ಅಭಿನಯಿಸುತ್ತಿದ್ದಾರೆ. ಮೆಹರುನ್ನೀಸಾದ ಮೊದಲು ಅವರು ಅಭಿನಯಿಸಿದ ಚಿತ್ರ ಗುಲಾಬೊ ಸಿತಾಬೊ. ಅದರಲ್ಲಿ ಅಮಿತಾಬ್‌ ಬಚ್ಚನ್‌ ಸಹ ಅಭಿನಯಿಸಿದ್ದಾರೆ.

ಇದನ್ನೂ ಓದಿ:  ವರ್ಚುಯಲ್ ವರ್ಸಸ್ ಫಿಸಿಕಲ್: ಚರ್ಚೆ ಹುಟ್ಟುಹಾಕಿದ ಪಣಜಿ ಚಿತ್ರೋತ್ಸವ

ಸಂದೀಪ್‌ ಕುಮಾರ್‌ ಭಾರತೀಯ ಮೂಲದವರಾದರೂ ಆಸ್ಟ್ರಿಯಾದ ಚಿತ್ರ ನಿರ್ದೇಶಕ. ತಮ್ಮ ಸಿನಿಮಾದ ಮೂಲಕ ವಿವರಿಸುತ್ತಾ, ‘ವೃದ್ಧ ನಟರೂ ಹೀರೋಗಳಾಗಬಹುದಾದರೆ, ನಟಿಯರಿಗೆ ಯಾಕೆ ಅವಕಾಶ ಇಲ್ಲ. ಈ ತಾರತಮ್ಯ ಭಾರತೀಯ ಸಿನಿಮಾ ರಂಗದಲ್ಲಿ ಮಾತ್ರ. ಯುರೋಪಿನಲ್ಲಿ ಇಂದಿಗೂ 80ರ ಪ್ರಾಯದವರು ನಾಯಕರಾಗಿ ಅಭಿನಯಿಸುತ್ತಾರೆ. ನಾನು ಹೀಗೇ ಕಥೆಯ ಎಳೆ ಹುಡುಕುವಾಗ ಫರೂಖಾ ಜಾಫರ್ ಕುರಿತು ಓದಿದೆ. ವಿಚಿತ್ರವೆನಿಸಿತು. ಆ ಬಳಿಕ ಅಧ್ಯಯನ ಮಾಡಿ ಕಥೆಯನ್ನು ರೂಪಿಸಿದೆ. ಆದಷ್ಟು ನೈಜ ಲೋಕೇಷನ್‌ಗಳನ್ನೇ ಬಳಸಿದ್ದೇವೆ’ ಎಂದರು.

Advertisement

ಭಾರತೀಯ ಕಥಾವಸ್ತುವಿನ ಚಿತ್ರಕ್ಕೆ ಭಾರತದಲ್ಲೇ (ಇಫಿ) ವಿಶ್ವ ಪ್ರೀಮಿಯರ್‌ ಮಾಡಲು ಅವಕಾಶ ಸಿಕ್ಕಿದ್ದು ಒಂದು ಒಳ್ಳೆಯ ಅವಕಾಶ. 40 ವರ್ಷಗಳಿಂದ ತೆರೆಗೆ ಸರಿದಿದ್ದ ಒಬ್ಬ ನಟಿಯ ಪ್ರಧಾನ ನೆಲೆಗೆ ತಂದ ಖುಷಿ ನಮ್ಮದು ಎಂದರು ಸಂದೀಪ್‌ ಕುಮಾರ್.

ಇದನ್ನೂ ಓದಿ:   ಗೋವಾ ಚಿತ್ರೋತ್ಸವ: ಓಟಿಟಿ ಸಿನಿಮಾ ಮಂದಿರಗಳನ್ನು ಕೊಲ್ಲುತ್ತದೆಯೇ? ಒಂದು ಚರ್ಚೆ

ಇದು ಮೂರು ತಲೆಮಾರುಗಳ ಕಥೆ. ಫರೂಖಾ ಜಾಫರ್‌ ನ ಮಗಳಾಗಿ ಅಭಿನಯಿಸಿರುವ ತುಲಿಕಾ ಬ್ಯಾನರ್ಜಿ, ಹೊಸ ತಲೆಮಾರು (ಯುವಜನರು] ಗ್ಯಾಜೆಟ್ಸ್‌ ಗಳ ಬಗ್ಗೆ ಚೆನ್ನಾಗಿ ತಿಳಿದಿರಬಹುದು. ಆದರೆ ನಮ್ಮ ಹಿರಿಯರು ಬದುಕಿನ ಅನುಭವಗಳನ್ನೇ ಆಸ್ತಿಯಾಗಿಟ್ಟುಕೊಂಡಿದ್ದಾರೆ. ವಯಸ್ಸು ಎಂಬುದು ಬರೀ ಒಂದು ಸಂಖ್ಯೆಯೇ ಹೊರತು ಬೇರೇನೂ ಅಲ್ಲ. ಇದನ್ನು ತಿಳಿಸುವುದೇ ಚಿತ್ರದ ಉದ್ದೇಶ’ ಎಂದರು. ಮೊಮ್ಮಗಳಾಗಿ ಅಭಿನಯಿಸಿರುವ ಅಂಕಿತಾ ದುಬೆ ಸಹ, ‘ಇದರ ಸ್ಕ್ರಿಪ್ಟ್ ಇಷ್ಟವಾಯಿತು. ಹೊಸದು ಎನಿಸಿತು’ ಎಂದರು.

ಮೆಹರುನ್ನೀಸಾ ಚಿತ್ರದಲ್ಲಿ ಬೇಗಂ (ಫ‌ರೂಖಾ ಜಾಫ‌ರ್‌) ಹೀರೋ ಆಗಿ ಅಭಿನಯಿಸಿದ್ದಾರೆ.

ಇದನ್ನೂ ಓದಿ:  ಒಂದು ನಗರದ ಹನ್ನೊಂದು ಕಥೆಗಳಲ್ಲಿ ನಾವೆಲ್ಲಿ ?

Advertisement

Udayavani is now on Telegram. Click here to join our channel and stay updated with the latest news.

Next