Advertisement

ರಂಗು ರಂಗಿನ ಮದರಂಗಿ ದುನಿಯಾ…

12:28 PM Oct 11, 2017 | |

ಅಲ್ನೋಡೇ ಎಷ್ಟು ಚೆನ್ನಾಗಿ ಕಾಣಿಸುತ್ತಿದೆ ಅವಳ ಕೈ….ಯಾರ ಕೈಯಲ್ಲಾದ್ರೂ ಮದರಂಗಿ ನೋಡಿದಾಗ ಮೊದಲು ಬರುವ ಉದ್ಗಾರವಿದು. ಮೆಹಂದಿ/ ಮದರಂಗಿ ಎಂದಾಕ್ಷಣ, ಹಬ್ಬ-ಹರಿದಿನ, ಸಂತೋಷ, ಸಂಭ್ರಮದ ವಾತಾವರಣ ಮನಸ್ಸಲ್ಲಿ ಮೂಡುತ್ತದೆ. ಒಂದು ಡಿಸೈನ್‌ ಮತ್ತೂಂದಕ್ಕಿಂತ ಉತ್ತಮ, ಸುಂದರ, ಸುಮಧುರ ಎಂದೆನಿಸುತ್ತದೆ. ತಮ್ಮ ಕೈಗೂ ಅಂಥದ್ದನ್ನು ಹಾಕಿಸಿಕೊಳ್ಳಬೇಕೆಂದು ಹೆಂಗಳೆಯರು ಇಷ್ಟಪಡುತ್ತಾರೆ.

Advertisement

ಮದರಂಗಿಯ ರಂಗಿಲ್ಲದೆ ಯಾವ ಶುಭ ಸಮಾರಂಭವೂ ಪೂರ್ಣವಾಗುವುದಿಲ್ಲ. ಕೈ ಮೇಲೆ ಮದರಂಗಿಯ ರಂಗು ಮೂಡಿಸುವ ಕಲೆ ಈಗ ನಮ್ಮ ದೇಶದಲ್ಲಿ ದೊಡ್ಡ ಉದ್ಯಮವಾಗಿಯೂ ಬೆಳೆಯುತ್ತಿದೆ. ಈ ಬಗೆಯ ಸೃಜನಾತ್ಮಕತೆಯಲ್ಲಿ ಆಸಕ್ತಿ ಉಳ್ಳವರು ಮೆಹೆಂದಿ ಡಿಸೈನಿಂಗ್‌ನಲ್ಲೇ ಪ್ರೊಫೆಷನಲಿಸ್ಟ್‌ಗಳಾಗಲು ಅವಕಾಶಗಳಿದ್ದು, ಅದಕ್ಕಾಗಿ ಹಲವಾರು ಟ್ರೇನಿಂಗ್‌ ಸೆಂಟರ್‌ಗಳಿವೆ.

 ವಿವಾಹ ಸಮಾರಂಭದಲ್ಲಂತೂ ಮೆಹಂದಿ ಬಿಡಿಸುವುದೇ ಒಂದು ಶಾಸ್ತ್ರ. ಮದುವೆಗಿಂತ ಒಂದೆರಡು ದಿನಗಳ ಮೊದಲೇ ವಧುವಿಗೆ ಹಾಗೂ ಕುಟುಂಬದ ಉಳಿದ ಮಹಿಳೆಯರಿಗೆ ಮೆಹಂದಿ ಬಿಡಿಸುವುದಕ್ಕೇ ಒಂದು ಸಮಾರಂಭ ಏರ್ಪಡಿಸಲಾಗುತ್ತಿದೆ. ಉತ್ತರ ಭಾರತೀಯರಲ್ಲಿ ಈ ಸಂಪ್ರದಾಯ ಹೆಚ್ಚು ಪ್ರಚಲಿತದಲ್ಲಿದೆ. ವಧುವಿನ ಕೈಯಲ್ಲಿ ವರನ ಹೆಸರನ್ನು ಕಂಡೂ ಕಾಣಿಸದಂತೆ ಬರೆದು, ಅದನ್ನು ಹುಡುಕಲು ಹೇಳುವ ಆಟಗಳನ್ನೂ ನಡೆಸುತ್ತಾರೆ. ಮೆಹಂದಿ ಡಿಸೈನ್‌ನ ಮಧ್ಯದಲ್ಲಿರುವ ವರನ ಹೆಸರನ್ನು ಆಕೆ ಹುಡುಕಬೇಕು. ಮದರಂಗಿಯ ರಂಗು ಎಷ್ಟು ಗಾಢವಾಗಿ ಮೂಡುತ್ತದೋ ಅಷ್ಟು ಗಾಢವಾಗಿ ಪತಿ ಆಕೆಯನ್ನು ಪ್ರೀತಿಸುತ್ತಾನೆ ಎಂದು ಹೇಳುವುದೂ ಒಂದು ನಂಬಿಕೆ. 

ಮೊದಲೆಲ್ಲಾ ಮದರಂಗಿ ಗಿಡದ ಎಲೆಗಳನ್ನು ಅರೆದು ಅದನ್ನು ಕೈಗೆ ಹಚ್ಚಲಾಗುತ್ತಿತ್ತು. ಆದರೆ ಈಗ ವಿವಿಧ ಕಂಪನಿಗಳ ಮೆಹಂದಿ ಕೋನ್‌, ಇನ್‌ಸ್ಟಂಟ್‌ ಕಲರ್‌ ಫ‌ುಲ್‌ ಮೆಹಂದಿಗಳು ಮಾರ್ಕೆಟ್‌ನಲ್ಲಿ ಲಭ್ಯ. 

ರುಬಿನಾ ಅಂಜುಂ, ಮೈಸೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next