Advertisement

PDP ಒಡೆಯಬೇಡಿ,1987ರ ಸ್ಥಿತಿ ಬರುತ್ತದೆ;BJPಗೆ ಮೆಹಬೂಬಾ ಎಚ್ಚರಿಕೆ!

10:15 AM Jul 13, 2018 | Team Udayavani |

ಜಮ್ಮು: ಪಿಡಿಪಿಯನ್ನು ಒಡೆಯಲು ಯತ್ನಿಸಬೇಡಿ .ಹಾಗೇನಾದರು ಮಾಡಿದರೆ 1987 ರ ಪರಿಸ್ಥಿತಿ ಬರುತ್ತದೆ ಎಂದು ಜಮ್ಮ ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ  ಎಚ್ಚರಿಕೆ ನೀಡಿದ್ದಾರೆ. 

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಮುಫ್ತಿ  ಪಿಡಿಪಿಯನ್ನು ಒಡೆದರೆ ಯಾಸಿನ್‌ ಮಲೀಕ್‌ ಮತ್ತು ಸಯ್ಯದ್‌ ಸಲಾಲುದ್ದೀನ್‌ ಅವರಂತಹ ಪ್ರತ್ಯೇಕವಾದಿಗಳ ಜನ್ಮಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ. 

ಮೆಹಬೂಬಾ ಮುಫ್ತಿ ತನ್ನ ಹೇಳಿಕೆ ವೇಳೆ ಬಿಜೆಪಿ ಹೆಸರನ್ನು ಹೇಳಿಲ್ಲ, ಆದರೆ ದೆಹಲಿ ಎಂದು ಹೇಳಿ ಪರೋಕ್ಷವಾಗಿ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ. 

ಬಿಜೆಪಿ ಪಿಡಿಪಿಯೊಂದಿಗೆ ಮೈತ್ರಿ ಕಳೆದುಕೊಂಡಿದ್ದು, ಇದೀಗ ಕಾಶ್ಮೀರದಲ್ಲಿ  ರಾಜ್ಯಪಾಲರ ಆಡಳಿತವಿದೆ. ಬಿಜೆಪಿ ಪಿಡಿಪಿ ಬಂಡುಕೋರ ಮತ್ತು ಪಕ್ಷೇತರ ಶಾಸಕರೊಂದಿಗೆ ಸರ್ಕಾರ ರಚಿಸಲು ಯತ್ನಿಸುತ್ತಿದೆ ಎಂಬ ಸುದ್ದಿಗಳ ಬಳಿಕ ಮೆಹಬೂಬಾ ಈ ಎಚ್ಚರಿಕೆ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next