Advertisement
ಕಾಶ್ಮೀರ ಕಣಿವೆಗೆ ಸೇರಿದ ರಾಜಕಾರಣಿಗಳಾಗಿರುವ ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ ಮತ್ತು ಮೆಹಬೂಬ ಮುಫ್ತಿ ಅವರು ಈ ಬಾರಿಯ ಲೋಕಸಭಾ ಚುನಾವಣೆಗಳಿಗೆ ಸ್ಪರ್ಧೆ ಮಾಡುವುದಕ್ಕೆ ತಡೆ ನೀಡಬೇಕು ಎಂದು ಬಿಜೆಪಿಯು ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದನ್ನು ಮುಫ್ತಿ ಅವರು ತಮ್ಮ ಟಿಟ್ಟರ್ ಅಕೌಂಟ್ ನಲ್ಲಿ ಬಲವಾಗಿ ವಿರೋಧಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಫ್ತಿ ಹಾಗೂ ಗೌಂಭೀರ್ ನಡುವೆ ಟ್ವಿಟ್ಟರ್ ಚಕಮಕಿ ನಡೆದಿತ್ತು. ಕಣಿವೆ ರಾಜ್ಯದ ರಾಜಕಾರಣಿಗಳು ಸ್ಪರ್ಧಾತ್ಮಕ ಚುನಾವಣೆಯಲ್ಲಿ ಸ್ಪರ್ಧಿಸುವುದು ‘ಸಂವಿಧಾನ ವಿರೋಧಿ’ ಎಂಬುದು ಬಿಜೆಪಿಯ ವಾದವಾಗಿದೆ.
ಮುಫ್ತಿ ಅವರ ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದ ಗೌತಮ್ ಗಂಭೀರ್ ಅವರು ‘ಇದು ಭಾರತ, ನಿಮಗೆ ಬೇಕಾದ ಹಾಗೆ ಅಳಿಸಿ ಹಾಕಲು ಕಪ್ಪು ಚುಕ್ಕೆಯಲ್ಲ’ ಎಂದು ಪ್ರತಿಕ್ರಿಯಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಮುಫ್ತಿ ಅವರು ‘ಬಿಜೆಪಿಯಲ್ಲಿ ನಿಮ್ಮ ಹೊಸ ಇನ್ನಿಂಗ್ಸ್ ನಿಮ್ಮ ಕ್ರಿಕೆಟ್ ಜೀವನದಷ್ಟು ಕೆಟ್ಟದಾಗಿರಲಿಕ್ಕಿಲ್ಲ ಎಂದು ಆಶಿಸುತ್ತೇನೆ’ ಎಂದು ರಿಟ್ವೀಟ್ ಮಾಡಿದ್ದರು. ಇದಕ್ಕೆ ಗಂಭೀರ್ ಅವರು ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದರು ಮತ್ತು ಆ ಬಳಿಕ ಮುಫ್ತಿ ಅವರು ಗಂಬೀರ್ ಅವರ ಅಕೌಂಟ್ ಅನ್ನು ಬ್ಲಾಕ್ ಮಾಡಿದ್ದರು. ಗೌತಮ್ ಅವರು ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ 90 ಲಕ್ಷಕ್ಕೂ ಹೆಚ್ಚಿನ ಫಾಲೋವರ್ಸ್ ಹೊಂದಿದ್ದಾರೆ.
Related Articles
Advertisement