Advertisement
ಮೆಹಂದಿಯ ಜೀವಾಳವೇ ಅದರ ಡಿಸೈನ್(ವಿನ್ಯಾಸವಾಗಿದೆ). ಇಂದು ಮೆಹೆಂದಿಯಲ್ಲಿ ಅರೆಬಿಕ್, ಇಂಡೋ ಅರೆಬಿಕ್, ಕ್ಲಾಸಿಕ್, ವೆಸ್ಟರ್ನ್ ಹೀಗೆ ಹಲವಾರು ಡಿಸೈನ್‌ಗಳಿದ್ದು ಬೇಡಿಕೆಯು ಅಧಿಕವಾಗಿದೆ. ಅಂತೆಯೇ ಆದಾಯವೂ ಕೂಡ. ವಿನ್ಯಾಸವೂ ತುಂಬಾ ಸೂಕ್ಷ್ಮವಾಗಿಸಿ ಅಂಗೈ ಜಾಗದಲ್ಲಿ ಸುಂದರ ಕಲಾಕೃತಿಯ ಮೆಹೆಂದಿ ಸೃಷ್ಟಿಸುವುದು ಒಂದು ಚಾಣಾಕ್ಷತನದ ಕೆಲಸವಾಗಿದೆ. ಕೆಲವು ವಿನ್ಯಾಸಕಾರರು ತಮಗೆ ಬೇಕಾದ ಟ್ಯೂಬ್ ತಾವೇ ತಯಾರಿಸಿಕೊಳ್ಳವುದು ವಿಶೇಷ.
ಈ ಕ್ಷೇತ್ರದಲ್ಲಿ ನೀವು ನಿಮ್ಮ ಅಭಿವ್ಯಕ್ತಿ ಮತ್ತು ಕ್ರಿಯಾಶೀಲತೆ ಮತ್ತು ಯಾವ ಕಾರ್ಯಕ್ರಮ ಎನ್ನುವ ಆಧಾರದ ಮೇಲೆ ಆದಾಯ ಗಳಿಕೆ ಮಾಡಲು ಸಾಧ್ಯವಿದೆ. ನೀವು ಮಾಡುವ ಡಿಸೈನ್ ಕೂಡ ನಿಮ್ಮ ಆದಾಯವನ್ನು ನಿರ್ಧಾರ ಮಾಡುತ್ತದೆ. ಶ್ರೀಮಂತ ಕುಟುಂಬಸ್ಥರು, ಸಿನಿಮಾ ತಾರೆಯರ ಕೈಯ ಮೇಲಿನ ಮೆಹೆಂದಿ ಚಿತ್ತಾರಕ್ಕೆ ಸಾವಿರದಿಂದ ಲಕ್ಷದವರೆಗೆ ಸಂಪಾದಿಸಲೂ ಅವಕಾಶವಿದೆ. ಇಂದು ಮಾಲ್, ಬ್ಯೂಟಿ ಪಾರ್ಲರ್ ಮಾತ್ರವಲ್ಲದೆ ಮನೆಗೇ ಬಂದು ಮೆಹೆಂದಿ ಇಡುವವರಿಗೂ ಬೇಡಿಕೆ ಅಧಿಕವಿದ್ದು ಒಂದು ಸಾವಿರದಿಂದ ಹದಿನೈದು ಸಾವಿರದ ಆದಾಯ ಸಾಮಾನ್ಯ ಗಳಿಕೆಯಾಗಿದೆ. ಬೇಡಿಕೆ ಹೆಚ್ಚಿಸಲು ಸಹಾಯಕ
ಇಂದು ಈ ಕ್ಷೇತ್ರ ಕೇವಲ ಆದಾಯ ಗಳಿಕೆ ಮಾತ್ರವಾಗಿರದೇ ನಿಮ್ಮನ್ನು ನೀವು ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಲು ಸಹಕಾರಿಯಾಗಿದೆ. ನಿಮ್ಮದೇ ಆದ ಬ್ಲಾಗ್ ಮಾಡಿ ನೀವು ಮಾಡಿದ ಡಿಸೈನ್ ಸಂಗ್ರಹವನ್ನು ಅದರಲ್ಲಿ ಹಾಕಿದರೆ ಬಹುತೇಕರು ನಿಮ್ಮನ್ನು ಗುರುತಿಸುತ್ತಾರೆ ಮಾತ್ರವಲ್ಲದೇ ನಿಮ್ಮ ಬೆಡಿಕೆಯೂ ಅಧಿಕವಾಗುತ್ತದೆ. ಇನ್ನೂ ಯುಟ್ಯೂಬ್‌ನಲ್ಲಿ ಮೆಹೆಂದಿ ಡಿಸೈನ್ ಬಿಡಿಸುವ ವಿಡಿಯೋ ಕೂಡ ಅಪ್ಲೋಡ್ ಮಾಡಬಹುದು. ಆದರೆ ಯಾವುದೇ ಹೊಸ ಡಿಸೈನ್ ನೀವು ಅಪ್ಲೋಡ್ ಮಾಡಿದರೆ ತರ್ಜುಮೆ ಆಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅತಿ ಅಗತ್ಯ. ಇಂದು ಬ್ಯೂಟಿಪಾರ್ಲರ್‌ನಲ್ಲಿ, ಫ್ಯಾಶನ್ ಡಿಸೈನಿಂಗ್ ಕೋರ್ಸ್ ನಲ್ಲಿ ಮೆಹೆಂದಿ ವಿನ್ಯಾಸ ಕಲಿಸಲು ತರಬೇತುದಾರರಿದ್ದು ನಿಮ್ಮ ಸ್ವ ಆಸಕ್ತಿ ಕೂಡ ಇದರಲ್ಲಿ ಅತಿಮುಖ್ಯವಾಗಿದೆ.
Related Articles
ಮೆಹಂದಿಯ ಶೈಲಿಯನ್ನು ತಿಳಿದಿರಬೇಕು.
ಡಿಸೈನ್ಸ್ ಬಗ್ಗೆ ತಿಳಿದಿರಬೇಕು.
ಆಸಕ್ತಿ ಮತ್ತು ತಾಳ್ಮೆ ಅತಿ ಮುಖ್ಯ
ಕಾರ್ಯಕ್ರಮಕ್ಕೆ ಯಾವುದು ಸೂಕ್ತ ಡಿಸೈನ್ ಎಂದು ತಿಳಿದಿರಬೇಕು.
ಉತ್ತಮ ಮಾತುಗಾರಿಕೆ ನಿಮ್ಮನ್ನು ಗುರುತಿಸಲು ಸಹಕಾರಿಯಾಗಿದೆ.
ಕ್ರಿಯಾಶೀಲತೆ ಇರಬೇಕು.
ನಗರದಲ್ಲಿ ವಾಸಿಸುವವರಾದರೆ ವಿವಿಧ ಭಾಷೆಯೂ ತಿಳಿದಿದ್ದರೆ ಉತ್ತಮ.
ಉತ್ತಮ ಏಕಾಗ್ರತೆ ಅತೀ ಅಗತ್ಯ
Advertisement
- ರಾಧಿಕಾ, ಕುಂದಾಪುರ