Advertisement

ಮೇಘನಾ ಗಾಂವ್ಕರ್‌ ಕಲರ್‌ ಫುಲ್‌ ಫೋಟೋಶೂಟ್‌

03:03 PM Sep 24, 2021 | Team Udayavani |

ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ನಾಯಕಿ ನಟಿಯರು ಸದಾ ಆ್ಯಕ್ಟೀವ್‌ ಆಗಿರುತ್ತಾರೆ. ಅದರಲ್ಲಿ ನಾಯಕಿ ಮೇಘನಾ ಗಾಂವ್ಕರ್‌ ಕೂಡಾ ಒಬ್ಬರು. ಸಿನಿಮಾ ಜೊತೆಗೆ ಆಗಾಗ ಸಖತ್‌ ಸ್ಟೈಲಿಶ್‌ ಫೋಟೋಶೂಟ್‌ ಕೂಡಾ ಮಾಡಿಸುತ್ತಾ ಸುದ್ದಿಯಾಗುತ್ತಾರೆ.

Advertisement

ಈ ಬಾರಿಯೂ ಮೇಘನಾ ಕಲರ್‌ಫ‌ುಲ್‌ ಆಗಿ ಫೋಟೋಶೂಟ್‌ ಮಾಡಿಸಿದ್ದಾರೆ. ಹಾಗಂತ ಇದು ಯಾವುದೇ ಸಿನಿಮಾಕ್ಕಲ್ಲ, ಅವರ ಖುಷಿಗಷ್ಟೇ.

ಈ ಫೋಟೋಶೂಟ್‌ ಬಗ್ಗೆ ಮಾತನಾಡುವ ಮೇಘನಾ, “ಇದು ಯಾವುದೇ ಸಿನಿಮಾಕ್ಕಾಗಿ ಮಾಡಿದ ಫೋಟೋಶೂಟ್‌ ಅಲ್ಲ. ತುಂಬಾ ದಿನಗಳಿಂದ ಒಂದು ಫೋಟೋಶೂಟ್‌ ಮಾಡಿಸಬೇಕೆಂದುಕೊಂಡಿದ್ದೆ. ಹಾಗಾಗಿ ಮಾಡಿಸಿದೆ’ ಎನ್ನುವುದು ಮೇಘನಾ ಮಾತು.

ಇದನ್ನೂ ಓದಿ:ತಂದೆಯಾದ ಖುಷಿಯಲ್ಲಿ ನಿಖಿಲ್| ಹೆಚ್‍ಡಿಕೆ ಮನೆಗೆ ಹೊಸ ಅತಿಥಿ ಆಗಮನ  

ಸದ್ಯ ಮೇಘನಾ ನಟಿಸಿರುವ “ಶುಭ ಮಂಗಳ’ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. 1975ರಲ್ಲಿ ಪುಟ್ಟಣ್ಣ ಕಣಗಾಲ್‌ ಅವರ ನಿರ್ದೇಶನದಲ್ಲಿ “ಶುಭಮಂಗಳ’ ಸಿನಿಮಾ ಬಂದಿತ್ತು. ಈಗ ಅದೇ ಹೆಸರಿನಲ್ಲಿ ಆದರೆ, ಹೊಸ ರೂಪದಲ್ಲಿ ಈ ಚಿತ್ರ ಮೂಡಿಬರುತ್ತಿದೆ.

Advertisement

ಸಂತೋಷ್‌ ಗೋಪಾಲ್‌ ಎಂಬುವವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಟೈಟಲ್‌ ಗಮನ ಸೆಳೆದಿದ್ದು, ಈ ಮೂಲಕ ಮೇಘನಾ ಮಹಿಳಾ ಪ್ರಧಾನ ಸಿನಿಮಾಕ್ಕೆ ನಾಯಕಿ ಆಗಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next