Advertisement

ಬಿಜೆಪಿ ನಾಯಕನ ಫಾರ್ಮ್ ಹೌಸ್‌ ಮೇಲೆ ದಾಳಿ: 73 ಮಂದಿ ಬಂಧನ

06:09 PM Jul 24, 2022 | Team Udayavani |

ಶಿಲ್ಲಾಂಗ್‌: ಮೇಘಾಲಯದ ಬಿಜೆಪಿ ನಾಯಕ ಬರ್ನಾರ್ಡ್‌ ಎನ್‌ ಮರಾಕ್‌ ಅವರ ಮಾಲೀಕತ್ವದ ಫಾರ್ಮ್ ಹೌಸ್‌ ಮೇಲೆ ಪೊಲೀಸರು ಶನಿವಾರ ದಾಳಿ ನಡೆಸಿದ್ದಾರೆ.

Advertisement

ತುರಾ ನಗರದ ಬಳಿ ಇರುವ ಫಾರ್ಮ್ ಹೌಸ್‌ ನಲ್ಲಿ ಅಕ್ರಮವಾಗಿ ಕೂಡಿಡಲಾಗಿದ್ದ ಆರು ಮಕ್ಕಳನ್ನು ರಕ್ಷಿಸಲಾಗಿದ್ದು, ಅಲ್ಲಿದ್ದ 73 ಮಂದಿಯನ್ನು ಬಂಧಿಸಲಾಗಿದೆ.

ಈ ಫಾರ್ಮ್ ಹೌಸ್‌ ನಲ್ಲಿ 30 ಚಿಕ್ಕ ಚಿಕ್ಕ ಕೊಠಡಿಗಳಿದ್ದು, ಅವೆಲ್ಲವನ್ನು ವೇಶ್ಯಾವಾಟಿಕೆಗೆ ಬಳಕೆ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳದಲ್ಲಿದ್ದ 27 ವಾಹನಗಳು, 8 ದ್ವಿಚಕ್ರ ವಾಹನಗಳು, 400 ಮದ್ಯದ ಬಾಟಲಿಗಳು, 500 ಕಾಂಡೋಮ್‌ಗಳು ಸೇರಿ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next