Advertisement

ಮೇಘಾಲಯ: ಕಾಂಗ್ರೆಸ್‌ನ 5 ಸೇರಿ 8 ಶಾಸಕರ ರಾಜೀನಾಮೆ

02:15 PM Dec 30, 2017 | |

ಶಿಲ್ಲಾಂಗ್‌: ಮೇಘಾಲಯ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿರುವಂತೆಯೇ, ಒಟ್ಟು ಎಂಟು ಮಂದಿ ಶಾಸಕರು ತಮ್ಮ ಶಾಸಕತ್ವಕ್ಕೆ ರಾಜೀನಾಮೆ ಸಲ್ಲಿಸಿ, ಎನ್‌ಡಿಎ ಅಂಗಪಕ್ಷವಾದ ನ್ಯಾಶನಲ್‌ ಪೀಪಲ್ಸ್‌ ಪಾರ್ಟಿ  (ಎನ್‌ಪಿಪಿ)ಗೆ ಸೇರಲು ಸಜ್ಜಾಗಿದ್ದಾರೆ. ಇವರಲ್ಲಿ ಐವರು ಶಾಸಕರು ಆಡಳಿತಾರೂಢ ಕಾಂಗ್ರೆಸ್‌ಗೆ ಸೇರಿದವರು. ಈಶಾನ್ಯ ರಾಜ್ಯಗಳಲ್ಲಿ ತನ್ನ ಬಲ ವರ್ಧಿಸಿಕೊಳ್ಳಲು ಯತ್ನಿಸುತ್ತಿರುವ ಬಿಜೆಪಿಗೆ ಈ ಬೆಳವಣಿಗೆಯು ವರವಾಗಿ ಪರಿಣಮಿಸಿದೆ.

Advertisement

ಮಾಜಿ ಉಪ ಮುಖ್ಯಮಂತ್ರಿ ರೋವೆಲ್‌ ಲಿಂಗೊxà, ಸ್ನೆ„ವಾಭಾ ಲಾಂಗ್‌ ಧಾರ್‌, ಕೊಮಿಂಗೋನ್‌ ಯಿ¾ಬೊನ್‌, ಪ್ರಸ್ಟೊನ್‌ ಟೈಸೊಂಗ್‌ ಹಾಗೂ  ಗೈಟ್ಲಾಂಗ್‌ ಧಾರ್‌ ಅವರು ಕಾಂಗ್ರೆಸ್‌ ತೊರೆದ ವರು. ರಾಜೀನಾಮೆ ನೀಡಿರುವ ರೆಮಿಂಗ್ಟನ್‌ ಪೈನ್‌ಗ್ರೋಪ್‌ ಅವರು ಯುನೈಟೆಡ್‌ ಡೆಮಾಕ್ರಟಿಕ್‌ ಪಾರ್ಟಿಯವರಾಗಿದ್ದರು. ಇನ್ನು, ಸ್ಟೀಫ‌ನ್ಸನ್‌ ಮುಖೀಮ್‌ ಹಾಗೂ ಹೋಪ್‌ಫ‌ುಲ್‌ ಬ್ಯಾಮೊನ್‌ ಅವರು ಪಕ್ಷೇತರ ಶಾಸಕರಾಗಿದ್ದರು. ಇದೀಗ ಶಾಸಕತ್ವಕ್ಕೆ ರಾಜೀನಾಮೆ ಸಲ್ಲಿಸಿದ ಕಾಂಗ್ರೆಸ್‌ನ ಎಲ್ಲಾ ಐವರು ಶಾಸಕರೂ ಇತ್ತೀಚೆಗೆ ಮುಖ್ಯಮಂತ್ರಿ ಮುಕುಲ್‌ ಸಂಗ್ಮಾ ಅವರ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next