Advertisement

Megastar: ಸಾಲು ಸಾಲು ಸೋಲಾದರೂ ಮತ್ತೆ ರಿಮೇಕ್‌ ಸಿನಿಮಾನೇ ಯಾಕೆ? ಚಿರಂಜೀವಿ ರಿಯಾಕ್ಟ್

03:07 PM Aug 07, 2023 | Team Udayavani |

ಹೈದರಾಬಾದ್: ಟಾಲಿವುಡ್‌ ಸೂಪರ್‌ ಸ್ಟಾರ್‌ ಚಿರಂಜೀವಿ ಅವರ ʼ ಭೋಲಾ ಶಂಕರ್ʼ ರಿಲೀಸ್‌ಗೆ ರೆಡಿಯಾಗಿದೆ. ಸಿನಿಮಾ ರಿಲೀಸ್‌ಗೆ ದಿನಗಣನೆ ಬಾಕಿ ಉಳಿದಿದೆ. ಈ ಹಿನ್ನೆಲೆ ಚಿತ್ರತಂಡ ಭರ್ಜರಿ ಪ್ರಚಾರದಲ್ಲಿ ನಿರತವಾಗಿದೆ.

Advertisement

ಮೆಗಾ ಸ್ಟಾರ್ ಚಿರಂಜೀವಿ ಅವರ ಇತ್ತೀಚಿಗಿನ ಸಿನಿಮಾಗಳು ಅಷ್ಟಾಗಿ ಮಿಂಚಿಲ್ಲ. ಸತತ ಸೋಲಿನಿಂದ ಅವರ ಅಭಿಮಾನಿಗಳು ಹತಾಶರಾಗಿದ್ದಾರೆ. ಈ ಸೋಲಿಗೆ ಕಾರಣಗಳನ್ನು ಹುಡುಕಿದರೆ, ತಿಳಿದು ಬರುವ ಮೊದಲ ಕಾರಣ, ಚಿರಂಜೀವಿ ಅವರ ಕಳೆದ ಕೆಲ ಸಿನಿಮಾಗಳು ರಿಮೇಕ್‌ ಎನ್ನುವುದು.

ಚಿರಂಜೀವಿ ಅವರ ಈ ಹಿಂದೆ ಬಂದ ʼಗಾಡ್‌ ಫಾದರ್ʼ ಮಲಯಾಳಂ ಸೂಪರ್‌ ಹಿಟ್‌ ʼ ‘ಲೂಸಿಫರ್’ ಸಿನಿಮಾದ ರಿಮೇಕ್.‌ ಇದೀಗ ರಿಲೀಸ್‌ ಆಗುತ್ತಿರುವ ʼಭೋಲಾ ಶಂಕರ್ʼ ಸಿನಿಮಾ ಕೂಡ ಕಾಲಿವುಡ್‌ ನ ʼವೇದಲಂʼ ಸಿನಿಮಾದ ರಿಮೇಕ್.‌ ಇನ್ನು ಕಳೆದ ಕೆಲ ದಿನಗಳಿಂದ ಚಿರಂಜೀವಿ ಮುಂದೆ ಮಲಯಾಳಂನ ʼಬ್ರೋ ಡ್ಯಾಡಿʼ ಸಿನಿಮಾದ ತೆಲುಗು ರಿಮೇಕ್‌ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

‘ಭೋಲಾ ಶಂಕರ್’ ಪ್ರೀ ರಿಲೀಸ್‌ ಇವೆಂಟ್‌ ನಲ್ಲಿ ಚಿರಂಜೀವಿ ರಿಮೇಕ್‌ ಸಿನಿಮಾಗಳನ್ನು ಮಾಡುತ್ತಿರುವ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಧೂಮಂ, ಹಂಟ್‌ ಫಾರ್‌ ವೀರಪ್ಪನ್‌: ಓಟಿಟಿ ಶೋಗಳ ಹಂಗಾಮ

Advertisement

ʼ ಖೈದಿ ಸಂಖ್ಯೆ 150ʼ ಸಿನಿಮಾದ ಡೈಲಾಗ್ಸ್‌ ಗಳನ್ನು ಹೇಳುತ್ತಾ ಮಾತು ಆರಂಭಿಸಿದ ಅವರು “ನಾನು ಮೆಚ್ಚಿಕೊಂಡೇ ‘ಭೋಲಾ ಶಂಕರ್’ ಸಿನಿಮಾವನ್ನು ಮಾಡಿದ್ದೇನೆ. ಈ ಸಿನಿಮಾವನ್ನು ನೀವು ಕೂಡ ಇಷ್ಟಪಡುತ್ತೀರಿ ಎನ್ನುವ ಭರವಸೆ ನನಗಿದೆ. ರಿಮೇಕ್‌ ಯಾಕೆ ಮಾಡುತ್ತೀರಿ ಎಂದು ಎಲ್ಲರೂ ನನ್ನ ಬಳಿ ಕೇಳುತ್ತಾರೆ. ಒಂದೊಳ್ಳೆ ಕಂಟೆಂಟ್‌ ಇದ್ದರೆ ನಿರ್ದೇಶಕರು ಹಾಗೂ ನಟರು ಅದನ್ನು ತೆಲುಗು ಜನರಿಗೆ ತರುವ ಪ್ರಯತ್ನ ಮಾಡುತ್ತಾರೆ. ಇದರಲ್ಲಿ ತಪ್ಪೇನಿದೆ? ಓಟಿಟಿ ಪ್ಲಾಟ್‌ಫಾರ್ಮ್‌ ಬಂದ ಬಳಿಕ ಜನ ವಿವಿಧ ಪ್ರಕಾರಗಳ ಸಿನಿಮಗಳನ್ನು ನೋಡುತ್ತಾರೆ. ಓಟಿಟಿ ಜಗತ್ತಿನಲ್ಲಿ ರಿಮೇಕ್ ಮಾಡುವ ಅಗತ್ಯವನ್ನು ಜನರು ಕೇಳುತ್ತಾರೆ. ʼವೇದಲಂʼ ಯಾವುದೇ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿಲ್ಲ. ಅದು ನಮಗೆ ಸಿನಿಮಾ ಮಾಡುವ ವಿಶ್ವಾಸ ಮೂಡಿಸಿತು” ಎಂದು ಚಿರಂಜೀವಿ ಹೇಳಿದರು.  ‌

“ಇದೇ ವಿಶ್ವಾಸದಿಂದ ನನಗೆ ನಿರ್ದೇಶಕ ಮೆಹರ್ ರಮೇಶ್ ಮತ್ತು ನಿರ್ಮಾಪಕ ಅನಿಲ್ ಸುಂಕರ ಅವರನ್ನು ಸಂಪರ್ಕಿಸಿದ್ದರು. ಬ್ಯಾಕ್‌ ಟು ಬ್ಯಾಕ್‌ ರಿಮೇಕ್‌ ಚಿತ್ರಗಳನ್ನು ಮಾಡುತ್ತಿರುವ ಬಗ್ಗೆ ನಾನು ಅವರಿಗೆ ಹೇಳಿದ್ದೆ. ಅವರು ಈ ಸಿನಿಮಾದ ಕಂಟೆಂಟ್‌ ಸ್ಟ್ರಾಂಗ್‌ ಆಗಿದೆ ಎಂದು ನನ್ನ ಮನವರಿಕೆ ಮಾಡಿದರು”ಎಂದು ಹೇಳಿದರು.

ಸದ್ಯ ಚಿರಂಜೀವಿ ಅವರ ರಿಮೇಕ್‌ ಕುರಿತಾದ ರಿಯಾಕ್ಷನ್‌ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

‘ಭೋಲಾ ಶಂಕರ್’ 2015 ರ ತಮಿಳು ಚಿತ್ರ ‘ವೇದಾಲಂ’ ನ ಅಧಿಕೃತ ತೆಲುಗು ರಿಮೇಕ್ ಆಗಿದೆ. ತೆಲುಗು ಆವೃತ್ತಿಯಲ್ಲಿ ಚಿರಂಜೀವಿ, ತಮನ್ನಾ ಭಾಟಿಯಾ, ಕೀರ್ತಿ ಸುರೇಶ್ ಮತ್ತು ಸುಶಾಂತ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದೇ ಆಗಸ್ಟ್‌ 11 ರಂದು ಸಿನಿಮಾ ತೆರೆಗ ಬರಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next