Advertisement

Mega Star ಚಿರಂಜೀವಿ ಮೊಮ್ಮಗಳ ಹೆಸರು ಕ್ಲಿನ್ ಕಾರಾ ; ಏನಿದರ ಅರ್ಥ ?

10:39 PM Jun 30, 2023 | Team Udayavani |

ಹೈದರಾಬಾದ್: ಸ್ಟಾರ್ ನಟ ರಾಮ್ ಚರಣ್ ಮತ್ತು ಪತ್ನಿ, ಉದ್ಯಮಿ ಉಪಾಸನಾ  ಅವರು ತಮ್ಮ ಮಗಳಿಗೆ ಕ್ಲಿನ್ ಕಾರಾ ಕೊನಿಡೆಲಾ ಎಂದು ನಾಮಕರಣ ಮಾಡಿದ್ದಾರೆ.

Advertisement

ಶುಕ್ರವಾರ ಟ್ವಿಟರ್‌ ಪೋಸ್ಟ್ ನಲ್ಲಿ ರಾಮ್ ಚರಣ್ ತಮ್ಮ ಹೆಣ್ಣು ಮಗುವಿನ ಹೆಸರನ್ನು ಹಂಚಿಕೊಂಡಿದ್ದಾರೆ.

“ಚೆಂಚು ಬುಡಕಟ್ಟು ದೇವತೆ ಭೌರಮ್ಮ ದೇವಿಯ ಆಶೀರ್ವಾದದೊಂದಿಗೆ, ನಾವು ನಮ್ಮ ಪ್ರೀತಿಯ ಮೊಮ್ಮಗಳು ಕ್ಲಿನ್ ಕಾರಾ ಕೊನಿಡೆಲಾ ಳನ್ನು ಪರಿಚಯಿಸುತ್ತೇವೆ. “ಲಲಿತಾ ಸಹಸ್ರನಾಮದಿಂದ ಹೆಸರನ್ನು ತೆಗೆದುಕೊಳ್ಳಲಾಗಿದೆ. ಹೆಸರು ಪರಿವರ್ತಕ, ಶುದ್ಧೀಕರಿಸುವ ಶಕ್ತಿಯನ್ನು ಸೂಚಿಸುತ್ತದೆ, ಅದು ಆಧ್ಯಾತ್ಮಿಕ ಜಾಗೃತಿಯನ್ನು ತರುತ್ತದೆ. ಬಹಳಷ್ಟು ಪ್ರೀತಿಯಿಂದ ಅನಿಲ್, ಶೋಭನಾ ಮತ್ತು ಚಿರಂಜೀವಿ, ಸುರೇಖಾ, ಎಂದು ಮಗುವಿನ ಅಜ್ಜ ಅಜ್ಜಿಯರು ಸಹಿ ಮಾಡಿದ ಪತ್ರವನ್ನು ಪೋಸ್ಟ್ ಮಾಡಲಾಗಿದೆ.

ಉಪಾಸನಾ ಕೊನಿಡೇಲಾ ಮತ್ತು ರಾಮ್ ಚರಣ್ ಮದುವೆಯಾಗಿ 11 ವರ್ಷಗಳ ನಂತರ ಮಗುವಿಗೆ ಜನ್ಮ ನೀಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next