Advertisement

‘ಕ್ಯಾನ್ಸರ್‌ ರೋಗದ ಜಾಗೃತಿ ಮೂಡಿಸುವುದು ಅವಶ್ಯ’

05:52 AM Feb 04, 2019 | Team Udayavani |

ಮಹಾನಗರ: ಸಾರ್ವಜನಿಕರಲ್ಲಿ ಕ್ಯಾನ್ಸರ್‌ ರೋಗದ ಬಗ್ಗೆ ಜಾಗೃತಿ ಮೂಡಿಸಬೇಕಾದ ಆವಶ್ಯಕತೆ ಇದೆ ಎಂದು ಐಎಂಎ ಮಂಗಳೂರು ಅಧ್ಯಕ್ಷ ಡಾ| ಸಚ್ಚಿದಾನಂದ ರೈ ಹೇಳಿದರು.

Advertisement

ಕೆಎಂಸಿ ಮಂಗಳೂರು ರಕ್ತಶಾಸ್ತ್ರ ಮತ್ತು ಅರ್ಬುದ ಶಾಸ್ತ್ರ ವಿಭಾಗ, ಲಯನ್ಸ್‌ ಮತ್ತು ಲಿಯೋ ಕ್ಲಬ್‌ ಕದ್ರಿ ಹಿಲ್‌ ಹಾಗೂ ಕದ್ರಿ ಹಿಲ್ಸ್‌ ಲಯನ್ಸ್‌ ಸೇವಾ ಟ್ರಸ್ಟ್‌, ಇಂಡಿಯನ್‌ ಮೆಡಿಕಲ್‌ ಅಸೋಸಿಯೇಶನ್‌ ಮತ್ತು ಅಸೋಸಿಯೇಶನ್‌ ಆಫ್‌ ಮೆಡಿಕಲ್‌ ಕನ್ಸಲ್ಟೆಂಟ್ ಮಂಗಳೂರು ಅವರ ಸಹಭಾಗಿತ್ವದಲ್ಲಿ ನಗರದ ಕದ್ರಿ ಪಾರ್ಕ್‌ ನಲ್ಲಿ ವಿಶ್ವ ಕ್ಯಾನ್ಸರ್‌ ದಿನದ ಪ್ರಯುಕ್ತ ರವಿವಾರ ನಡೆದ ‘ಮೆಗಾ ಕ್ಯಾನ್ಸರ್‌ ಜಾಗೃತಿ ಪ್ರದರ್ಶನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದ.ಕ.ವನ್ನು ಕ್ಯಾನ್ಸರ್‌ ಮುಕ್ತ ಜಿಲ್ಲೆ ಯನ್ನಾಗಿಸಲು ಪ್ರತಿಯೊಬ್ಬ ನಾಗರಿಕರೂ ಸಹಕರಿಸಬೇಕಿದೆ. ಶೇ.40ರಷ್ಟು ಕ್ಯಾನ್ಸರ್‌ ರೋಗವನ್ನು ಗುಣಪಡಿಸಬಹುದಾಗಿದೆ. ಕ್ಯಾನ್ಸರ್‌ ರೋಗದ ಲಕ್ಷಣವಿದ್ದರೆ ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ಪ್ರಾಣಾಪಾಯದಿಂದ ಪಾರಾಗಬಹುದು. ನಗರದ ಆಸ್ಪತ್ರೆಗಳಲ್ಲಿಯೂ ಕ್ಯಾನ್ಸರ್‌ ಪತ್ತೆಹಚ್ಚುವ ವ್ಯವಸ್ಥೆ ಲಭ್ಯವಿದೆ ಎಂದರು. ಕ್ಯಾನ್ಸರ್‌ ಜಾಗೃತಿ ಸಾರುವ ನೂರಕ್ಕೂ ಹೆಚ್ಚು ಭಿತ್ತಿಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು.

ಲಯನ್ಸ್‌ ಗವರ್ನರ್‌ ದೇವದಾಸ್‌ ಭಂಡಾರಿ, ಕೆಎಂಸಿ ಡೀನ್‌ ಡಾ| ಎಂ. ವೆಂಕಟ್ರಾಯ ಪ್ರಭು, ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ| ಆನಂದ ವೇಣುಗೋಪಾಲ್‌, ಅಸೋಸಿಯೇಶನ್‌ ಆಫ್‌ ಮೆಡಿಕಲ್‌ ಕನ್ಸಲ್ಟೆಂಟ್ ಮಂಗಳೂರು ಅಧ್ಯಕ್ಷ ಡಾ| ದಿವಾಕರ ರಾವ್‌, ರೊನಾಲ್ಡ್‌ ಗೋಮ್ಸ್‌, ಗೀತ್‌ ಪ್ರಕಾಶ್‌, ಪಲ್ಲವಿ ಪೈ, ಜೀವಿತಾ ಸಹಿತ ಮತ್ತಿತರರು ಉಪಸ್ಥಿತರಿದ್ದರು.

ಮಂಜುಳಾ ಶೆಟ್ಟಿ ಮತ್ತು ಅರೆಹೊಳೆ ಸದಾಶಿವ ರಾವ್‌ ನಿರೂಪಿಸಿದರು. ಕದ್ರಿ ಲಯನ್ಸ್‌ ಅಧ್ಯಕ್ಷೆ ಗೀತಾ ಆರ್‌. ರಾವ್‌ ಸ್ವಾಗತಿಸಿ, ಡಾ| ಪ್ರಶಾಂತ್‌ ಭಟ್ ವಂದಿಸಿದರು. ಪುಷ್ಪಲತಾ ಕಾರಂತ್‌ ಪ್ರಾರ್ಥಿಸಿದರು.

Advertisement

ಆಹಾರವೂ ಕಾರಣ
ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಎಚ್.ಆರ್‌. ನಾಯಕ್‌ ಮಾತನಾಡಿ, ವಾತಾವರಣದ ವ್ಯತ್ಯಾಸ, ಅಸಮರ್ಪಕ ಆಹಾರ ಪದ್ಧತಿಯೂ ಕ್ಯಾನ್ಸರ್‌ ರೋಗಕ್ಕೆ ಕಾರಣವಾಗುತ್ತದೆ. ಕೆಲವೊಂದು ನಗರ ಪ್ರದೇಶದಲ್ಲಿ ತರಕಾರಿಗಳನ್ನು ಮಲೀನಗೊಂಡ ನೀರಿನ ಪ್ರದೇಶದಲ್ಲಿ ಬೆಳೆಸಲಾ ಗುತ್ತದೆ. ಇವುಗಳನ್ನು ಬಳಕೆ ಮಾಡಿದರೆ ಒಂದಲ್ಲಾ ಒಂದು ರೋಗ ಬಾಧಿಸುತ್ತದೆ ಎಂದರು.

ವೈದ್ಯರಿಂದ ಯಕ್ಷಗಾನ
ಇಂಡಿಯನ್‌ ಮೆಡಿಕಲ್‌ ಅಸೋಸಿಯೇಶನ್‌ ಮತ್ತು ಅಸೋಸಿಯೇಶನ್‌ ಆಫ್‌ ಮೆಡಿಕಲ್‌ ಕನ್ಸ್‌ಲೆಟೆಂಟ್ ಮಂಗಳೂರು ಸಹಕಾರದಿಂದ ಲಯನ್ಸ್‌ ಕ್ಲಬ್‌, ಇಂಡಿಯನ್‌ ರೆಡ್‌ಕ್ರಾಸ್‌ ಸಂಸ್ಥೆಯ ಹವ್ಯಾಸಿ ವೈದ್ಯ ಯಕ್ಷಗಾನ ಕಲಾವಿದರು ಮತ್ತು ಹಿಮ್ಮೇಳನದಲ್ಲಿ ಮಿತ್ರ ಕಲಾವಿದರ ಕೂಡುವಿಕೆಯಿಂದ ಕ್ಯಾನ್ಸರ್‌ ಜನಜಾಗೃತಿ ಅಂಗವಾಗಿ ಕದ್ರಿ ಪಾರ್ಕ್‌ ನಲ್ಲಿ ‘ಅರ್ಬುದಾಸುರ ಗರ್ವಭಂಗ’ ಎಂಬ ಯಕ್ಷಗಾನ ಪ್ರದರ್ಶಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next