Advertisement

ಆಸೀಸ್‌ ವನಿತಾ ಕ್ರಿಕೆಟ್‌: ನಾಯಕತ್ವಕ್ಕೆ ಮರಳಿದ ಲ್ಯಾನಿಂಗ್‌

06:10 AM Feb 22, 2018 | Team Udayavani |

ಮೆಲ್ಬರ್ನ್: ಕಳೆದ 7 ತಿಂಗಳಿಂದ ವಿಶ್ರಾಂತಿಯಲ್ಲಿದ್ದ ಆಸ್ಟ್ರೇಲಿಯ ವನಿತಾ ಕ್ರಿಕೆಟ್‌ ನಾಯಕಿ ಮೆಗ್‌ ಲ್ಯಾನಿಂಗ್‌ ಮರಳಿ ತಂಡವನ್ನು ಸೇರಿಕೊಂಡಿದ್ದಾರೆ. ಮುಂಬರುವ ಭಾರತ ಪ್ರವಾಸದ ವೇಳೆ ತಂಡದ ನೇತೃತ್ವವನ್ನು ವಹಿಸಲಿದ್ದಾರೆ.

Advertisement

ಮಾ. 3ರಂದು ಭಾರತಕ್ಕೆ ಆಗಮಿಸಲಿರುವ ಆಸ್ಟ್ರೇಲಿಯ ತಂಡ ಮುಂಬಯಿಯಲ್ಲಿ 2 ಅಭ್ಯಾಸ ಪಂದ್ಯಗಳನ್ನು ಆಡಿದ ಬಳಿಕ (ಮಾ. 6 ಮತ್ತು 8) ವಡೋದರಲ್ಲಿ 3 ಪಂದ್ಯಗಳ ಏಕದಿನ ಸರಣಿಯನ್ನು ಆರಂಭಿಸಲಿದೆ (ಮಾ. 12). ಅನಂತರ ಮುಂಬಯಿಯಲ್ಲಿ ಇಂಗ್ಲೆಂಡ್‌ ತಂಡವನ್ನೊಳಗೊಂಡ ಟಿ20 ತ್ರಿಕೋನ ಸರಣಿ ನಡೆಯಲಿದೆ.

ಈ 2 ಸರಣಿಗಾಗಿ ಬುಧವಾರ ಆಸ್ಟ್ರೇಲಿಯ ತಂಡವನ್ನು ಪ್ರಕಟಿಸಲಾಯಿತು. ಆಲ್‌ರೌಂಡರ್‌ಗಳಾದ ಸೋಫಿ ಮಾಲಿನೆಕ್ಸ್‌, ನಿಕೋಲಾ ಕ್ಯಾರಿ ಈ ತಂಡದ ಹೊಸಬರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next