Advertisement
ಮರಳುಗಾರಿಕೆ ಈ ವರ್ಷ ನಡೆಯುವ ಆಸೆ ನಮಗಿಲ್ಲ. ಕನಿಷ್ಠ ಆಗಸ್ಟ್‌ಗಾದರೂ ಆರಂಭಿಸಲು ತಯಾರಿ ಮಾಡಬೇಕು. ಆ. 1ರಿಂದ ಮರಳುಗಾರಿಕೆ ನಡೆಸಲೇಬೇಕು. ಈ ಬಗ್ಗೆ ಚರ್ಚಿಸಲು ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸಹಿತ ಜಿಲ್ಲೆಯ ಶಾಸಕರು ಜಿಲ್ಲಾಧಿಕಾರಿಯವರ ಜತೆ ಅಧಿಕೃತ ಸಭೆ ನಡೆಸಲಿದ್ದಾರೆ.
ಪ್ರ. ಕಾರ್ಯದರ್ಶಿ ಅನುಮತಿಯ ಮೇರೆಗೆ ಮೇ 15ರಂದು 7 ಮಂದಿ ಮರಳು ಹೋರಾಟ ಸಮಿತಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಸಿಆರ್‌ಝೆಡ್‌ನಲ್ಲಿ ವ್ಯಾಪ್ತಿಯಲ್ಲಿ ಮರುಳು ದಿಬ್ಬ ತೆರವುಗೊಳಿಸುವ ಕುರಿತು ಚರ್ಚಿಸಲಾಗಿದೆ. ಜೂ. 1ರಿಂದ ಜು 31ರ ವರೆಗೆ ಮರಳುಗಾರಿಕೆ ನಿಷೇಧವಿದೆ. ಈ ಎರಡು ತಿಂಗಳ ಅವಧಿಯಲ್ಲಿ ಕಾನೂನು ವ್ಯಾಪ್ತಿಯಲ್ಲಿ ಶೀಘ್ರದಲ್ಲಿ ಮರಳುಗಾರಿಕೆ ಪ್ರಾರಂಭಿಸುವ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದು ಡಿಸಿ ತಿಳಿಸಿದ್ದಾರೆ.