Advertisement

ಪೊಲೀಸರ ಕಾವಲಿನಲ್ಲಿ ಮಹಿಳಾ ಸಂಘದ ಸಭೆ

04:07 PM Dec 22, 2020 | Suhan S |

ತುರುವೇಕೆರೆ: ಸಾಮಾನ್ಯವಾಗಿ ಪುರುಷರ ಸಂಘಸಂಸ್ಥೆಗಳ ಸಭೆ ಸಮಾರಂಭಗಳಿಗೆ ಪೊಲೀಸರ ರಕ್ಷಣೆ ಕೇಳುವುದು ಸಹಜ. ಆದರೆ ಮಹಿಳೆಯರು ನಡೆಸುವ ಸಹಕಾರ ಸಂಘದ ಸಭೆಗೆ ಪೊಲೀಸರ ರಕ್ಷಣೆ ಕೋರಿದ ಪ್ರಸಂಗ ಇಲ್ಲಿಯ ಸೋಪನಹಳ್ಳಿಯಲ್ಲಿ ನಡೆದಿದೆ.

Advertisement

ಹೌದು. ತಾಲೂಕಿನ ಸೋಪನಹಳ್ಳಿಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು. ಇದಕ್ಕೆ ಸಬ್‌ ಇನ್ಸ್‌ಪೆಕ್ಟರ್‌ ಸೇರಿದಂತೆ ಐದಾರು ಪೊಲೀಸರು ರಕ್ಷಣೆ ನೀಡಿದರು.ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕುಟುಂಬದ ಸದಸ್ಯರೇ ವಹಿವಾಟು ನಡೆಸುತ್ತಿದ್ದಾರೆ. ತಮ್ಮಸದಸ್ಯತ್ವವನ್ನು ಅನಗತ್ಯವಾಗಿ ರದ್ದು ಮಾಡಲಾಗಿದೆ. ಸಂಘದಲ್ಲಿ ಹಲವು ಅವ್ಯವಹಾರಗಳು ನಡೆದಿವೆ ಎಂದು ಆರೋಪಿಸಿ ಅಲ್ಲಿನ ಕೆಲವು ಮಹಿಳೆಯರು ಮತ್ತುಗ್ರಾಮಸ್ಥರುಆಕ್ಷೇಪವ್ಯಕ್ತಪಡಿಸಿಜಿಲ್ಲಾಉಪನಿಬಂಧಕರು ಮತ್ತು ಸಹಾಯಕ ಉಪನಿಬಂಧಕರಿಗೆ ಲಿಖೀತವಾಗಿ ದೂರಿದ್ದರು. ಎಲ್ಲಾ ದೂರಿಗೂ ಸಾಮಾನ್ಯ ಸಭೆಯಲ್ಲಿ ಉತ್ತರ ಪಡೆದುಕೊಳ್ಳಿ ಎಂಬ ಸಾಮಾನ್ಯ ಉತ್ತರವೂ ಅಧಿಕಾರಿಗಳಿಂದ ಬಂತು.

ಇದನ್ನೇ ಅಸ್ತ್ರವನ್ನಾಗಿಸಿಕೊಂಡಿದ್ದ ಹಲವು ಮಹಿಳೆಯರು ಸಭೆ ಆರಂಭಗೊಳ್ಳುತ್ತಿದ್ದಂತೆ ಪ್ರಶ್ನೆಗಳ ಸುರಿಮಳೆ ಗೈದರು. ಆದರೆ, ಸಂಘದ ಅಧ್ಯಕ್ಷೆ ಜಯಂತಿ ತಮ್ಮ ಸಂಘ ಬಹಳ ಪ್ರಾಮಾಣಿಕವಾಗಿ ಮತ್ತು ಪಾರದರ್ಶಕತೆಯಿಂದ ನಡೆಯುತ್ತಿದೆ. ಸಂಘಕ್ಕೆ ಹಾಲು ಹಾಕುತ್ತಿದ್ದ ಸದಸ್ಯೆಯೋರ್ವರು ಹಾಲಿಗೆ ಯೂರಿಯಾ ಬೆರೆಸಿ ಕಲುಷಿತ ಗೊಳಿಸಿದ್ದರು. ಎರಡು ಬಾರಿ ಎಚ್ಚರಿಕೆ ನೀಡಿದ್ದರೂ ಅದನ್ನೆ ಮುಂದುವರಿಸಿದ್ದಾರೆ. ಹಾಗಾಗಿ, ಸಂಘದಿಂದ ಅವರನ್ನು ತೆಗೆಯಲಾಗಿದೆ ಎಂದರು.

ಇದನ್ನೆ ನೆವ ಮಾಡಿಕೊಂಡುಕೆಲವರು ತಮ್ಮ ಸಂಘದ ವಿರುದ್ಧ ಇಲ್ಲ ಸಲ್ಲದ ದೂರು ಹೊರಿಸುತ್ತಿದ್ದಾರೆ. ಇವೆಲ್ಲವೂ ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದರು. ಇದರಿಂದ ಕೆರಳಿದ ಹಲವು ಮಹಿಳೆಯರು, ಸಂಘದಲ್ಲಿ ಒಂದು ಕುಟುಂಬದ ಸದಸ್ಯರೇ ಆಡಳಿತ ಮಂಡಲಿಯ ಹಿಡಿತ ಸಾಧಿಸಿದ್ದಾರೆ. ಅಧಿಕಾರ ದುರುಪಯೋಗಪಡಿಸಿ ಕೊಳ್ಳಲಾಗುತ್ತಿದೆ. ತಮಗೆ ಬೇಕಾದವರಿಗೆ ಸಂಘದ ಸದಸ್ಯತ್ವ ನೀಡಲಾಗುತ್ತಿದೆ. ಹಣಕಾಸಿನ ವ್ಯವಹಾರವನ್ನು ಕೇಳುವವರ ಸದಸ್ಯತ್ವವನ್ನು ರದ್ದು ಮಾಡಲಾಗುತ್ತಿದೆ ಎಂದು ದೂರಿದರು.ಈ ವೇಳೆ ಮಾತಿಗೆ ಮಾತು ಬೆಳೆಯಿತು. ಸಂಘದ ಸದಸ್ಯೆಯರ ಪತಿಯಂದಿರೂ ಸಭೆಯ ಬಳಿ ಆಗಮಿಸಿದರು. ಪರಿಸ್ಥಿತಿ ಬಿಗಡಾಯಿಸ ತೊಡಗಿತು.

ಇದರಿಂದ ಎಚ್ಚೆತ್ತ ಪೊಲೀಸರು ಮಧ್ಯಪ್ರವೇ ಶಿಸಿ ಸಂಘದ ಮಹಿಳಾ ಸದಸ್ಯರು ಮತ್ತು ಅವರ ಪತಿರಾಯರನ್ನು ಸಮಾಧಾನ ಻ಪಡಿಸಲು ಹರಸಾಹಸ ಮಾಡಿದರು. ಹಲವು ಗೊಂದಲಗಳ ನಡುವೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಸಭೆ ಅಂತ್ಯಗೊಂಡಿತು. ಸಭೆಯಲ್ಲಿ ಸಂಘದ ಅಧ್ಯಕ್ಷೆ ಜಯಂತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಗೌರಮ್ಮ, ಜಯ್ಯಮ್ಮ, ವಸಂತ, ಸುಜಾತ, ಕುಮಾರಮ್ಮ, ಸುಧಾರಾಣಿ, ಸವಿತಾ, ಲಕ್ಷ್ಮಮ್ಮ ಮತ್ತು ಮಂಜಮ್ಮ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next