Advertisement
ಸದಸ್ಯೆ ಪ್ರೇಮಾ ಟೀಚರ್ ಮಾತನಾಡಿ, ಜನರ ಬೇಡಿಕೆಗಳನ್ನು ಜನಪ್ರತಿನಿಧಿಗಳು ಸಭೆಯ ಮುಂದಿಡುತ್ತಾರೆ. ಅದಕ್ಕೆ ಸ್ಪಂದಿಸುವ ಹೊಣೆಗಾರಿಕೆ ಅಧಿಕಾರಿಗಳದ್ದು. ಆ ಕೆಲಸ ಸಮರ್ಪಕವಾಗಿ ಆಗಬೇಕು ಎಂದರು. ಪ್ರತಿಕ್ರಿಯಿಸಿದ ಕೋಟ, ಸದಸ್ಯರು ಜನರ ಪ್ರತಿನಿಧಿಗಳು. ಬೇಡಿಕೆ ಅನುಷ್ಠಾನಕ್ಕೆ ಅಧಿಕಾರಿಗಳು ಇರುತ್ತಾರೆ. ಇಬ್ಬರೂ ಜತೆಯಾಗಿ ಕೆಲಸ ಮಾಡಬೇಕು ಎಂದರು.
ನಗರದ ತ್ಯಾಜ್ಯ ಸಂಗ್ರಹದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ವಿಲೇವಾರಿಗೆ ವ್ಯವಸ್ಥೆ ಕುರಿತು ಪ್ರಶ್ನಿಸಿದರು. ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ಆಲೆಟ್ಟಿ ಗ್ರಾಮದಲ್ಲಿರುವ ಕಲ್ಚೆರ್ಪೆ ಡಂಪಿಂಗ್ ಯಾರ್ಡ್ ಅವ್ಯವಸ್ಥೆಗಳ ಕುರಿತು ಪ್ರಸ್ತಾವಿಸಿದರು. ಅವೈಜ್ಞಾನಿಕ ತ್ಯಾಜ್ಯ ಸಂಗ್ರಹಣೆಯಿಂದ ಪರಿಸರದಲ್ಲಿ ರೋಗ ಭೀತಿ ಹಬ್ಬಿದೆ ಎಂದು ವಿವರಿಸಿದರು. ಪ್ರಕಾಶ್ ಹೆಗ್ಡೆ ಗರಂ..!
ಅಪಘಾತಕ್ಕೆ ಈಡಾಗಿ ವಿಶ್ರಾಂತಿಯಲ್ಲಿದ್ದ ನ.ಪಂ. ಮಾಜಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಸಭೆಗೆ ಆಗಮಿಸಿ, ಚರ್ಚೆಯಲ್ಲಿ ಪಾಲ್ಗೊಂಡರು. ಶಾಂತಿನಗರದಲ್ಲಿ ದಲಿತ ಸಮುದಾಯದ ಶ್ರೀನಿವಾಸ ಅವರಿಗೆ ಶೌಚಾಲಯಕ್ಕೆ ಸಹಾಯಧನ ನೀಡದಿರುವ ಬಗ್ಗೆ ಪ್ರಸ್ತಾವಿಸಿದರು. ಈ ಹಿಂದಿನ ಆಡಳಿತದಲ್ಲಿ ಸಹಾಯಧನ ನೀಡುವಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಫಲಾನುಭವಿ ಹತ್ತಾರು ಬಾರಿ ಅಲೆದಾಡಿದರೂ ಸ್ಪಂದನೆ ಸಿಕ್ಕಿಲ್ಲ. ಮುಖ್ಯಾಧಿಕಾರಿ, ಆರೋಗ್ಯಾಧಿಕಾರಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಶೋಷಿತ ಸಮುದಾಯದ ಹಕ್ಕು ನಿರಾಕರಿಸಿದರೆ ಸುಮ್ಮನಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅವರನ್ನು ಸಮಾಧಾನಿಸಿದ ಕೋಟ, ಅಧಿಕಾರಿ ರವಿಕೃಷ್ಣ ಬಳಿ ಮಾಹಿತಿ ಪಡೆದರು. ನಿರ್ಣಯ ಕೈಗೊಂಡಿದ್ದರೆ, ತತ್‌ಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.