Advertisement
ತಮ್ಮ ಕಚೇರಿಯಲ್ಲಿ ಕಾರ್ಪೊರೇಟರ್ ಗಳ ಸಭೆ ನಡೆಸಿದ ಅವರು, ಈ ಅನುದಾನದ ಪೈಕಿ 10 ಕೋ.ರೂ. ಸಾಮಾನ್ಯವಾಗಿದ್ದು, ಉಳಿದ 2.5 ಕೋ. ರೂ. ಗಳನ್ನು ಅಲ್ಪಸಂಖ್ಯಾಕರು ಹೆಚ್ಚಿರುವ ಪ್ರದೇಶಗಳ ರಸ್ತೆ ಡಾಮರು ಕಾಮಗಾರಿಗೆ ಬಳಸಲಾಗುವುದು. ಅನುದಾನವನ್ನು ಡಾಮರು ಕಾಮಗಾರಿಗೆ ಮಾತ್ರವೇ ವಿನಿಯೋಗಿಸಬೇಕೇ ಹೊರತು ಕಾಂಕ್ರೀಟ್ ರಸ್ತೆಗಳಿಗೆ ಬಳಸುವಂತಿಲ್ಲ ಎಂದರು.
ಕಾರ್ಪೊರೇಟರ್‌ಗಳು ಅನುದಾನ ಬಳಸಿಕೊಳ್ಳುವ ಕುರಿತು ಮುಂಚಿತವಾಗಿ ಪಟ್ಟಿ ಕೊಡಬೇಕು. ಜತೆಗೆ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಯಾರ ವಾರ್ಡ್‌ಗೆ ಅಗತ್ಯವಿದೆ ಎಂದು ತಿಳಿದುಕೊಂಡು ಆದ್ಯತೆಯ ನೆಲೆಯಲ್ಲಿ ಪಟ್ಟಿ ತಯಾರಿಸುವಂತೆ ಸೂಚಿಸಿದರು.