ಕುಷ್ಟಗಿ: ಸಮಾಜದಲ್ಲಿ ಕ್ರಿಯಾಶೀಲಗಳಾಗಿ ಸಕ್ರೀಯರಾಗಿ ನಿಷ್ಕ್ರಿಯರಾಗದೇ ಹೆದರದೇ ಬಣಜಿಗ ಶಕ್ತಿ ಏನೆಂಬುದು ತೋರಿಸಿ ಎಂದು ಕುಷ್ಟಗಿ ತಾಲೂಕಾ ಬಣಜಿಗ ಸಮಾಜದ ಅಧ್ಯಕ್ಷ ಬಸಟೆಪ್ಪ ಕುಂಬಳಾವತಿ ಕರೆ ನೀಡಿದರು.
ಕುಷ್ಟಗಿಯ ಕೊಪ್ಪಳ ರಸ್ತೆಯ ವೀರೇಶ ಬಂಗಾರಶೆಟ್ಟರ್ ಅವರ ವಾಣಿಜ್ಯ ಮಳಿಗೆಯಲ್ಲಿ ನಡೆದ ಬಣಜಿಗ ಸಮಾಜದ ಸಭೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಬಣಜಿಗರು ಎಲ್ಲಾ ಕ್ಷೇತ್ರಗಳಲ್ಲಿ ಸಮಾಜದಲ್ಲಿ ಮುಂಚೂಣಿಯಾಗಿ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ ಎಂದ ಅವರು ಸಂಘಟಿತರಾಗಿ ಒಗ್ಗಟ್ಟು ಉಳಿಸಿಕೊಳ್ಳಬೇಕೆಂದರು. ಸಿವಿಲ್ ಇಂಜಿನೀಯರ್
ವೀರೇಶ ಬಂಗಾರಶೆಟ್ಟರ್ ಮಾತನಾಡಿ, ಪ್ರತಿಭೆ ಎಂಬುದು ಬಣಜಿಗ ಸಮಾಜದ ಹುಟ್ಟುಗುಣ ನಮ್ಮ ನಡವಳಿಕೆಯಿಂದ ಸಮಾಜ ಗುರುತಿಸುತ್ತಿದೆ.ನಮ್ಮ ಮೂಲ ವೃತ್ತಿ ತಕ್ಕಡಿ ಹಿಡಿಯುವವರಾಗಿದ್ದು, ತೂಕದ ಮಾತುಗಳಿರುತ್ತವೆ ಎಂದರು. ಸಮಾಜದ ಬಗ್ಗೆ ಡೋಂಗಿ ಅಭಿಮಾನ ಸಲ್ಲದು ಎಂದ ಅವರು, ಸಂಘಟನೆಯಾಗಬೇಕು ವಿಘಟನೆಗೆಯಾಗಬಾರದು. ಯಾವೂದೇ ಪಕ್ಷ ನಮ್ಮ ಸಮಾಜವನ್ನು ಕಡೆಗಾಣಿಸಿಲ್ಲ. ಕಡೆಗಾಣಿಸುವುದೂ ಇಲ್ಲ. ಹೀಗಾಗಿ ಸಮಾಜದಲ್ಲಿಬಣಜಿಗ ಸಮಾಜದ ತೂಕವಿದೆ ಎಂದರು.
ಶ್ರೀಶೈಪ್ಪ ಕಲಕಬಂಡಿ, ಬಸವರಾಜ ಕುದರಿಮೋತಿ, ಸಿದ್ದಮಲ್ಲಪ್ಪ ಜಿಗಜಿನ್ನಿ, ಪಕೀರಪ್ಪ ಹೊಸವಕ್ಕಲ, ಪ್ರಶಾಂತ ಅಂಗಡಿ, ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಬಳ್ಳೊಳ್ಳಿ ಮತ್ತೀತರಿದ್ದರು.
ಸಾಧಕರಿಗೆ ಸನ್ಮಾನ: ಇದೇ ವೇಳೆ ಕುಷ್ಟಗಿ ಪುರಸಭೆ ನಾಮನಿರ್ದೇಶಿತ ಸದಸ್ಯರಾದ ವೀರೇಶ ಬಳ್ಳೊಳ್ಳಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮಲ್ಲಪ್ಪ ಕುದರಿ,ಸರ್ಕಾರಿ ನೌಕರ ಸಂಘದ ಗೌರವಾಧ್ಯಕ್ಷ ಬಾಲಾಜಿ ಬಳಿಗಾರ, ಉಪಾಧ್ಯಕ್ಷ ವಿರುಪಾಕ್ಷಪ್ಪ ಅಂಗಡಿ, ಪ್ರಾಥಮಿಕ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರುದ್ರಮ್ಮ ಗುತ್ತೂರು, ನಿರ್ದೇಶಕ ಮಹೇಶ ಪಡಿ ಅವರನ್ನು ಸನ್ಮಾನಿಸಲಾಯಿತು.