ಮಂಡ್ಯ: ಉಪಚುನಾವಣೆ ಫಲಿತಾಂಶ ಬಳಿಕ ಸಚಿವ ಸಂಪುಟದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ, ಕಾರ್ಖಾನೆ ಆರಂಭಿಸುವ ಬಗ್ಗೆ ಚರ್ಚಿಸಲಾಗುವುದು ಎಂದು ಸಂಸದೆ ಸುಮಲತಾ ಹೇಳಿದರು.
ನಗರದ ಡೀಸಿ ಕಚೇರಿ ಸಭಾಂಗಣದಲ್ಲಿ ನಡೆದಕಬ್ಬುಬೆಳೆಗಾರರಸಭೆಯಲ್ಲಿಮಾತನಾಡಿ, ಈಗಾಗಲೇ ಸಕ್ಕರೆ ಸಚಿವ ಶಿವರಾಂ ಹೆಬ್ಟಾರ್ ಅವರಿಗೆ ರೈತರ ನೇತೃತ್ವದಲ್ಲಿ ನಿಮ್ಮ ಬಾಗಿಲಿಗೆ ಬಂದು ಧರಣಿ ಕೂರಲಾಗುವುದು ಎಂದು ಎಚ್ಚರಿಸಲಾಗಿದೆ. ರೈತರು ಆವೇಶಕ್ಕೆ ಒಳಗಾಗಬಾರದು. ಸ್ವಲ್ಪ ಕಾಲಾವಕಾಶ ಕೊಡಬೇಕು. ಮೈಷುಗರ್‌ಕಾರ್ಖಾನೆ ಆರಂಭಿಸುವುದೇ ನಮ್ಮ ಮೂಲ ಉದ್ದೇಶವಾಗಿದೆ. ಕಬ್ಬು ಕಟಾವು ದರ ಏರಿಕೆ ಮಾಡಿರುವುದು ಸರಿಯಲ್ಲ. ಡೀಸಿ ನೇತೃತ್ವದಲ್ಲಿ ಎಲ್ಲ ಸಕ್ಕರೆ ಕಾರ್ಖಾನೆಗಳ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.
ಕನಗನಮರಡಿ ಗಣಿಗಾರಿಕೆ ಸ್ಥಗಿತ: ಡೀಸಿ ಡಾ.ವೆಂಕಟೇಶ್ ಮಾತನಾಡಿ, ಪಾಂಡವಪುರದಕನಗನಮರಡಿ ಗ್ರಾಮದಲ್ಲಿ ಬೆಂಗಳೂರು- ಮೈಸೂರು ರಾಷ್ಟ್ರೀಯಹೆದ್ದಾರಿ ಕಾಮಗಾರಿಗಾಗಿ ಕಲ್ಲು ತೆಗೆದು ಬಳಸಲಾಗುತ್ತಿದೆ. ಗಣಿಗಾರಿಕೆಯಿಂದ ನಾಲೆಗೆ ತೊಂದರೆಯಾಗುತ್ತಿದೆ ಎಂದು ರೈತರ ಆರೋಪವಿದ್ದು, ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಶೀಘ್ರದಲ್ಲಿಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲಿದ್ದು, ನಂತರ ವರದಿ ಮೇರೆಗೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ರೈತರ ದಿಕ್ಕು ತಪ್ಪಿಸುವ ಕೆಲಸ: ಮೈಷುಗರ್ ಕಾರ್ಖಾನೆಯ ಕಬ್ಬು ಬೆಳೆಗಾರರ ಸಂಘದ ಮುಖಂಡರಾದ ಎಸ್.ಕೃಷ್ಣ, ವೇಣು ಮಾತನಾಡಿ, ಮೈಷುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಸಿಕೊಳ್ಳಬೇಕು. ಒ ಆ್ಯಂಡ್ ಎಂ ಆಧಾರದಲ್ಲಿ ಸರ್ಕಾರಿ ನೇತೃತ್ವದಲ್ಲಿಯೇ ಕಾರ್ಖಾನೆ ಆರಂಭಿಸಬೇಕು. ಸರ್ಕಾರಗಳು ಗೊಂದಲಮಯ ಹೇಳಿಕೆ ನೀಡಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ಶಾಸಕರು ಕಾರ್ಖಾನೆ ಸಂಬಂಧಪಟ್ಟಂತೆ ರೈತರ ಪರವಾಗಿ ಚಕಾರ ಎತ್ತುತ್ತಿಲ್ಲ. ಆದ್ದರಿಂದ ನಿಮ್ಮ ನಾಯಕತ್ವದಲ್ಲಿ ಮೈಷುಗರ್ ಸಕ್ಕರೆ ಕಾರ್ಖಾನೆಆರಂಭಿಸಲುಕ್ರಮವಹಿಸುವ ಮೂಲಕ ರೈತರಿಗೆ ನೇರವಾಗಬೇಕು ಎಂದು ಮನವಿ ಮಾಡಿದರು.
ಕಬ್ಬು ಬೆಳೆಗಾರರಾದ ಗೊರವಾಲೆ ನಾಗೇಶ್, ನಾಗಣ್ಣ, ಚಾಮಲಾಪುರ ಬೊಮ್ಮೇಗೌಡ, ಪಾಪಣ್ಣ ಮಾರಗೌಡನಹಳ್ಳಿ, ಶಿವಶಂಕರ್, ಚಂದ್ರಶೇಖರ್, ಹೊಸಹಳ್ಳಿ ಲಿಂಗಣ್ಣ, ಕೃಷಿ ಜಂಟಿ ನಿರ್ದೇಶಕ ಚಂದ್ರಶೇಖರ್, ಆಹಾರ ಇಲಾಖೆಯಕುಮುದ ಶರತ್ ಹಾಜರಿದ್ದರು.