Advertisement

ಒಪೆಕ್‌ –ರಷ್ಯಾ ನಡುವಿನ ಸಭೆ ಮುಂದಕ್ಕೆ

08:19 PM Apr 06, 2020 | Hari Prasad |

ಮಾಸ್ಕೊ: ತೈಲ ಉತ್ಪಾದನೆ ಕಡಿತ ಕುರಿತಂತೆ ಚರ್ಚಿಸಲು ಕರೆದಿದ್ದ ಸಭೆಯನ್ನು ಒಪಿಇಸಿ ಮತ್ತು ರಷ್ಯಾ ಏ.9ರವರೆಗೆ  ಮುಂದೂಡಿವೆ. ಕಚ್ಚಾ ತೈಲದ ಬೆಲೆ ಕುಸಿಯಲು ಯಾರು ಕಾರಣ ಎಂಬ ಕುರಿತಂತೆ ಸೌದಿ ಅರೇಬಿಯಾ ಮತ್ತು ರಷ್ಯಾ ನಡುವೆ ಸಾಕಷ್ಟು ಭಿನ್ನಾಭಿಪ್ರಾಯ ಇರುವ ಕಾರಣ ಸಭೆಯನ್ನು ಮುಂದೂಡಿರುವುದಾಗಿ ಒಪಿಇಸಿ ಮೂಲಗಳು ತಿಳಿಸಿವೆ.

Advertisement

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಒತ್ತಡ ಹೇರಿದ ಕಾರಣದಿಂದಲೇ ಈ ಸಭೆ ಮುಂದೂಡಲ್ಪಟ್ಟಿದೆ ಎಂದು ಹೇಳಲಾಗಿದೆ. ವಿವಿಧ ದೇಶಗಳಲ್ಲಿ ಲಾಕ್‌ಡೌನ್‌ ಜಾರಿ, ಒಪೆಕ್‌-ರಷ್ಯಾ ನಡುವಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಾ.30ರಂದು ಕಚ್ಚಾ ತೈಲದ ಬೆಲೆ 18 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು.

ಪ್ರಧಾನ್‌ ಚರ್ಚೆ: ಕೋವಿಡ್ ವೈರಸ್‌ ಸೋಂಕಿನಿಂದಾಗಿ ಉಂಟಾಗಿರುವ ಇಂಧನದ ಬೇಡಿಕೆ ಕುಸಿತಕ್ಕೆ ಸಂಬಂಧಿಸಿದಂತೆ ತೈಲ ಸಚಿವ ಧರ್ಮೇಂದ್ರ ಪ್ರಧಾನ್‌, ಅಮೆರಿಕದ ಇಂಧನ ಇಲಾಖೆ ಕಾರ್ಯದರ್ಶಿ ಡಾನ್‌ ಬ್ರೌಲೆಟ್‌ ಜತೆ ಭಾನುವಾರ ಚರ್ಚಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಸಚಿವ, ಸೋಂಕಿನ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಏರಿಳಿತವಾಗುತ್ತಿದ್ದು, ಇದು ಎರಡೂ ದೇಶಗಳಿಗೆ ತಲೆನೋವಾಗಿದೆ ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next