ಮಂಡ್ಯ: “ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಬೇಕು. ಇಲ್ಲದಿದ್ದರೆ ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಎಚ್ಚರಿಸಿದರು. ನಗರದ ಜಿಪಂನ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ನಗರಾಭಿವೃದ್ಧಿ ಪ್ರಾಧಿಕಾರದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಡ್ಯ ನಗರ ಸೇರಿ ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ, ಮಳವಳ್ಳಿ, ಮದ್ದೂರು, ನಾಗಮಂಗಲ ಪಟ್ಟಣಗಳಲ್ಲಿ ಕುಡಿವ ನೀರು, ಒಳಚರಂಡಿ ಕಾಮಗಾರಿ ನಡೆಯುತ್ತಿವೆ. ಆದರೆ, ಅವಧಿಗೆ ಸರಿಯಾಗಿ ಗುತ್ತಿಗೆದಾರರು ಮುಗಿಸುತ್ತಿಲ್ಲ. ಹೀಗಾಗಿ ಜನತೆ ಪ್ರಶ್ನಿಸುತ್ತಿದ್ದಾರೆಂದರು.
4 ಬಾರಿ ಚಾಲನೆ: ಕೆ.ಆರ್.ಪೇಟೆಯಲ್ಲಿ ಕುಡಿವ ನೀರು ಮತ್ತು ಯುಜಿಡಿ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಅವಧಿಯಲ್ಲೇ ಕಾಮಗಾರಿಗೆ ಒಪ್ಪಿಗೆ ಪಡೆದು, 15 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿ, ಸುಮಾ ರು 4 ಬಾರಿ ಭೂಮಿ ಪೂಜೆ ಮಾಡಿದ್ದೇನೆ. ಆದರೂ, ಇನ್ನೂ ಕಾಮಗಾರಿ ಮುಗಿಸಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಸಚಿವ ಭೈರತಿ ಬಸವರಾಜು ಅವರ ಗಮನಕ್ಕೆ ತಂದರು.
ಶೀಘ್ರ ಕಾಮಗಾರಿ ಮುಗಿಸದಿದ್ದರೆ ಕೆಲಸ ದಿಂದ ಅಮಾನತು ಮಾಡಬೇಕಾಗು ತ್ತದೆ ಎಂದು ಪುರಸಭೆ ಸಹಾಯಕ ಎಂಜಿನಿ ಯರ್ ಮಹದೇವು ಅವರಿಗೆ ಎಚ್ಚರಿಕೆ ನೀಡಿದರು. ಜಿಲ್ಲೆಯ ಮಂಡ್ಯ ನಗರ ಮತ್ತು ತಾಲೂಕು ವಾರು ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿ ಶೀಘ್ರ ಮುಗಿಸಿ, ಡಿಸೆಂಬರ್ ಅಷ್ಟರೊಳಗೆ ಸಂಬಂಧಿಸಿದ ಕಾಮಗಾರಿಗಳ ಫೋಟೋ ತಲುಪಿಸುವಂತೆ ಜಲಮಂಡಳಿ ಅಧಿಕಾರಿ ಮುಖ್ಯ ಎಂಜಿನಿಯರ್ ಸಿದ್ದ ನಾಯಕ್‌ರಿಗೆ ಸೂಚಿಸಿದರು.
ಹೋಬಳಿವಾರು ಭೇಟಿ ನೀಡಿ: ಅಮೃತ್ ಯೋಜನೆಯಡಿ ಮಂಡ್ಯ ನಗರದ ಕುಡಿವ ನೀರಿನ ಯೋಜನೆಯನ್ನು ತಾನು ಸಂಸದ ನಾಗಿದ್ದ ಅವಧಿಯಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಅದು ಇನ್ನೂ ಮುಗಿದಿಲ್ಲ ಎಂದಾಗ, ಪ್ರಸ್ತುತ ಸುಮಾರು 23 ಕಿ.ಮೀ. ಪೈಪ್‌ಲೈನ್ ಹಾಕಲಾಗಿದೆ. ಇನ್ನು 2 ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಹೆದ್ದಾರಿ ಪಕ್ಕದ ಕಟ್ಟಡ ತೆರವು ಗೊಳಿಸದ ಕಾರಣ ಅರ್ಧಕ್ಕೆ ನಿಂತಿದೆ ಎಂದರು. ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್, ಕೇವಲ ಐದಾರು ಕಟ್ಟಡ ಮಾತ್ರ ತೆರವು ಗೊಳಿಸಬೇಕಾಗಿದ್ದು, ಅದನ್ನು ಕೆಲವೇ ದಿನಗಳಲ್ಲಿ ತೆರವುಗೊಳಿಸಲಾಗುವುದ ಎಂದರು.
ಶಾಸಕ ಸಿ.ಎಸ್.ಪುಟ್ಟರಾಜು, ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಸಿಇಒಜುಲ್ಫಿಕಾರ್ ಅಹಮದ್ ಉಲ್ಲಾ ಇದ್ದರು.
400 ನಿವೇಶನ ಹರಾಜಿಗೆ ಸೂಚನೆ : ಮುಡಾ ವ್ಯಾಪ್ತಿಗೆ ಬರುವ ವಿವೇಕಾನಂದ ನಗರ (ಕೆರೆಯಂಗಳ)ದಲ್ಲಿ ಸುಮಾರು 400 ನಿವೇಶನಗಳಿದ್ದು, ಹರಾಜು ಹಾಕಿದರೆ 70 ಕೋಟಿ ರೂ. ಮುಡಾಗೆ ಲಾಭ ಬರಲಿದೆ ಎಂದು ಆಯುಕ್ತ
ನರಸಿಂಹಮೂರ್ತಿ ಸಚಿವರ ಗಮನಕ್ಕೆ ತಂದರು. ಶೀಘ್ರವೇ ಹರಾಜು ಹಾಕಿ ಬಂದ ಹಣದಲ್ಲಿ ನಗರದ ಮೂಲ ಸೌಕರ್ಯಕ್ಕೆ ಬಳಸಿಕೊಳ್ಳಿ ಎಂದು ಸಚಿವ ಬೈರತಿ ಬಸವರಾಜು ಸೂಚಿಸಿದರು.
27.76 ಕೋಟಿ ರೂ. ನೀರಿನ ಕರ ಬಾಕಿ : ಮಂಡ್ಯ ನಗರಕ್ಕೆ ಪೂರೈಕೆ ಮಾಡುತ್ತಿರುವ ಕುಡಿವ ನೀರಿನ ಕರದ ಬಾಕಿ ಹಣ ಸುಮಾರು 27.76 ಕೋಟಿ ರೂ. ಬರಬೇಕಾಗಿದೆ ಎಂದು ಜಲ ಮಂಡಳಿ ಮುಖ್ಯ ಎಂಜಿನಿಯರ್ ಸಭೆ ಗಮನಕ್ಕೆ ತಂದಾಗ, ಇಂತಿಷ್ಟು ಅವಧಿಯಲ್ಲಿ ಅಸಲನ್ನು ಕಟ್ಟಿದರೆ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಜನತೆಗೆ ಒಂದು ನೋಟಿಸ್ ಹೊರಡಿಸಿ ಎಂದರು. ಜಿಲ್ಲಾ ಉಸ್ತು ವಾರಿ ಸಚಿವ ಕೆ.ಸಿ.ನಾರಾ ಯಣ ಗೌಡ ಮಾತನಾಡಿ, ಅಧಿಕಾರಿಗಳು ನೀರನ್ನು ನಿಲ್ಲಿಸಿದರೆ, ಕೆಲವರು ಗೂಂಡಾಗಳಂತೆ ವರ್ತಿಸುತ್ತಾರೆ. ಯಾರು ನೀರಿನ ಕರವನ್ನು ಕಟ್ಟಿಲ್ಲವೋ ಅಂತಹವರ ಪಟ್ಟಿ ತಯಾರಿಸಿ ಕೊಡಿ. ಹಣ ಕಟ್ಟದಿದ್ದರೆ ನೀರನ್ನು ನಿಲ್ಲಿಸಿ ಎಂದು ಸೂಚಿಸಿದರು.