Advertisement

Richest beggar; ಈ ವ್ಯಕ್ತಿ ಜಗತ್ತಿನ ಶ್ರೀಮಂತ ಭಿಕ್ಷುಕ…! ತಿಂಗಳ ಆದಾಯ ಎಷ್ಟು ಗೊತ್ತಾ?

02:48 PM Jul 06, 2023 | Team Udayavani |

ನವದೆಹಲಿ: ಭಿಕ್ಷುಕ ಎಂಬ ಪದ…ತೀವ್ರ ಬಡತನ, ಎರಡು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ವ್ಯಕ್ತಿಗಳ ಚಿತ್ರಣ ನಮ್ಮ ಕಣ್ಣ ಮುಂದೆ ಹಾದುಹೋಗುತ್ತದೆ. ಆದರೆ ಕುತೂಹಲದ ವಿಚಾರವೆಂಬಂತೆ ಕೆಲವರು ಭಿಕ್ಷಾಟನೆಯನ್ನೇ ಲಾಭದಾಯಕ ವೃತ್ತಿಯನ್ನಾಗಿ ಮಾಡಿಕೊಂಡ ವ್ಯಕ್ತಿಗಳಿದ್ದಾರೆ…

Advertisement

ಇದನ್ನೂ ಓದಿ:PM ಯಾರೇ ಆಗಲಿ, ಆದರೆ ಪತ್ನಿ ಇಲ್ಲದೇ ಪ್ರಧಾನಿ ನಿವಾಸದಲ್ಲಿ ಇರಬಾರದು: ಲಾಲು

ಎಕಾನಾಮಿಕ್‌ ಟೈಮ್ಸ್‌ ವರದಿಯ ಪ್ರಕಾರ, ಬಹುತೇಕ ದೇಶದ ಮಹಾನಗರ ಸೇರಿದಂತೆ ಜಿಲ್ಲೆ, ತಾಲೂಕು ಪ್ರದೇಶಗಳಲ್ಲಿಯೂ ಭಿಕ್ಷುಕರು ಇದ್ದೇ ಇರುತ್ತಾರೆ. ಆದರೆ ಮುಂಬೈನಲ್ಲಿ ವಾಸವಾಗಿರುವ ಭರತ್‌ ಜೈನ್‌ ಎಂಬಾತ ಜಗತ್ತಿನ ಶ್ರೀಮಂತ ಭಿಕ್ಷುಕ ಎಂಬುದಾಗಿ ತಿಳಿಸಿದೆ.

ಚಿಕ್ಕಂದಿನಲ್ಲಿ ಆರ್ಥಿಕ ಸಂಕಷ್ಟದಿಂದಾಗಿ ಭರತ್‌ ಜೈನ್‌ ಗೆ ಶಿಕ್ಷಣ ಪಡೆಯಲು ಸಾಧ್ಯವಾಗಿಲ್ಲವಾಗಿತ್ತು. ಹೀಗೆ ವಾಣಿಜ್ಯ ನಗರಿ ಮುಂಬೈಯ ಛತ್ರಪತಿ ಶಿವಾಜಿ ಟರ್ಮಿನಲ್‌ ಅಥವಾ ಆಜಾದ್‌ ಮೈದಾನ್‌ ಪ್ರದೇಶದಲ್ಲಿ ಭಿಕ್ಷಾಟನೆಯನ್ನೇ ಜೈನ್‌ ಕಾಯಕವನ್ನಾಗಿ ಮಾಡಿಕೊಂಡಿದ್ದರು.

Advertisement

ವಾಣಿಜ್ಯ ನಗರಿಯಲ್ಲಿ ಭಿಕ್ಷಾಟನೆ ನಡೆಸಿ ಜೀವನ ಸಾಗಿಸಿರುವ ಭರತ್‌ ಜೈನ್‌ ಒಟ್ಟು 7.5 ಕೋಟಿ ರೂ. ಮೌಲ್ಯದ ಆಸ್ತಿಯ ಒಡೆಯ. ಜೈನ್‌ ಭಿಕ್ಷಾಟನೆ ಮೂಲಕ ತಿಂಗಳಿಗೆ ಸಂಪಾದಿಸುವ ಹಣದ ಮೊತ್ತ 60,000 ರಿಂದ 75 ಸಾವಿರ ರೂಪಾಯಿ ಎಂದು ವರದಿ ವಿವರಿಸಿದೆ.

ವಿವಾಹಿತರಾಗಿರುವ ಜೈನ್‌ ಗೆ ಇಬ್ಬರು ಮಕ್ಕಳು. ತನಗೆ ಚಿಕ್ಕಂದಿನಲ್ಲಿ ವಿದ್ಯೆ ಕಲಿಯಲು ಸಾಧ್ಯವಾಗದಿರುವುದಕ್ಕೆ ತನ್ನಿಬ್ಬರು ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ್ದಾರೆ. ವರದಿಯ ಪ್ರಕಾರ, ಭರತ್‌ ಜೈನ್‌ ಮುಂಬೈನಲ್ಲಿ 1.4 ಕೋಟಿ ರೂ. ಮೌಲ್ಯದ ಎರಡು ಫ್ಲ್ಯಾಟ್‌ ಹೊಂದಿದ್ದಾರೆ. ಜೊತೆಗೆ ಥಾಣೆಯಲ್ಲಿ ಎರಡು ಅಂಗಡಿ ಕೋಣೆ ಇದ್ದು, ತಿಂಗಳಿಗೆ 30,000 ಸಾವಿರ ರೂಪಾಯಿ ಬಾಡಿಗೆ ಪಡೆಯುತ್ತಿದ್ದಾರೆ. ಭರತ್‌ ಮುಂಬೈನ ಪರೇಲ್‌ ನಲ್ಲಿ ವಾಸವಾಗಿದ್ದು, ಕುಟುಂಬದ ಇತರ ಸದಸ್ಯರು ಸ್ಟೇಶನರಿ ಅಂಗಡಿಯನ್ನು ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next