ಹನೂರು: ಆಲಿಕಲ್ಲು ಮಳೆ ಮತ್ತು ಭಾರೀ ಗಾಳಿಯಿಂದಾಗಿ ಹಾನಿಗೀಡಾಗಿದ್ದ ಶಾಗ್ಯ ಗ್ರಾಮ ಮತ್ತು ಸುತ್ತಮುತ್ತಲ ಜಮೀನುಗಳಿಗೆ ಕಂದಾಯ ಇಲಾಖಾ ಅಧಿಕಾರಿಗಳು ಭೇಟಿ ನೀಡಿ ಉಂಟಾಗಿರುವ ಬೆಳೆಹಾನಿ, ಮನೆಹಾನಿಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ಪಡೆದು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ.
ಹನೂರು ಕ್ಷೇತ್ರ ವ್ಯಾಪ್ತಿಯ ಶಾಗ್ಯ ಗ್ರಾಮದಲ್ಲಿ ಶುಕ್ರವಾರ ಸಂಜೆ 4 ಗಂಟೆ ಸಮಯದಲ್ಲಿ ಭಾರಿ ಬಿರುಗಾಳಿ ಮತ್ತು ಮಳೆಯಿಂದಾಗಿ ಹಾನಿಗೀಡಾಗಿದ್ದ ಕುಮಾರಿ, ನರಸಿಂಹನಾಯ್ಕ, ಮಾದೇವಿ, ಮಾದೇವಪ್ಪ, ಸುರೇಶ್‌ಕುಮಾರ್, ನಿಂಗಯ್ಯ, ಮಾದಮ್ಮ ಅವರ ಮನೆಗಳಿಗೆ ತೆರಳಿ ಹಾನಿಗೀಡಾಗಿರುವ ಬಗ್ಗೆ ಮಾಹಿತಿ ಪಡೆದರು.
ಬೆಳೆ ನಾಶ: ಬಿರುಗಾಳಿಯಿಂದಾಗಿ ಶಾಗ್ಯ ಗ್ರಾಮದ ಮುತ್ತುರಾಜ್ ಎಂಬುವವರ ಜಮೀನಿನಲ್ಲಿ ಬೆಳೆದಿದ್ದ 300 ಬಾಳೆ ಗಿಡಗಳು, ರಂಗಮ್ಮ ನವರ ಜಮೀನಿನಲ್ಲಿ 3 ತೇಗದ ಮರ ನೆಲಕಚ್ಚಿವೆ. ಸಿದ್ದರಾಜಮ್ಮ ತೋಟದ ಮನೆ ಸೇರಿದಂತೆ ತೇಗದ ಮರಗಳು ವಿದ್ಯುತ್ ತಂತಿ ಮತ್ತು ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ಪುಟ್ಟಸ್ವಾಮಿ ಎಂಬ ರೈತನ 200 ಬಾಳೆಗಳು ನೆಲಕಚ್ಚಿದೆ ಬಸವಣ್ಣ ಜಮೀನಿನ 8 ಹೆಬ್ಬೇವು, 200 ಬಾಳೆ ಗಿಡಗಳು ಶಿವರಾಜಮ್ಮ 100 ಕ್ಕೂ ಹೆಚ್ಚು ಬಾಳೆ ಗಿಡಗಳು ಹಾನಿಯಾಗಿದೆ.
ಜಾನುವಾರುಗಳ ಶೆಡ್‌ಗೆ ಹಾನಿ: 10 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ರೈತ ಬಸವಣ್ಣನ ಶೇಡ್ ಮೇಲ್ಚಾವಣಿ ಹಾಗೂ ಕಬ್ಬಿಣದ ಪೈಪುಗಳು ಕಳಚಿರುವ ಬಗ್ಗೆ ಗೋಡೆಗಳು ಬಿರುಕು ಬಿಟ್ಟಿರುವ ಬಗ್ಗೆ ಅಧಿಕಾರಿಗಳು ವರದಿ ಪಡೆದಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ವರದಿ: ಶಾಗ್ಯ ಗ್ರಾಮದ ರೈತ ಬೆಳೆ ನಷ್ಟ ಹೈನುಗಾರಿಕೆ ಶೇಡ್ ಸೇರಿದಂತೆ 8 ಕ್ಕೂ ಹೆಚ್ಚು ಮನೆಗಳು ಹಾನಿಯಾಗಿದೆ ಲಕ್ಷಾಂತರ ಬೆಲೆ ಬಾಳುವ ಬೆಳೆ ನಷ್ಟ ಬಗ್ಗೆ ಜಿಲ್ಲಾದಿಕಾರಿಗಳು ವರದಿ ಸಲ್ಲಿಸಿದ್ದಾರೆ ಪ್ರಕೃತಿ ವಿಕೋಪದಡಿ ಸಿಗುವ ಪರಿಹಾರಕ್ಕೆ ಕ್ರಮವಹಿಸಲಾಗುವುದು ಎಂದು ಗ್ರಾಮ ಲೆಕ್ಕಾಧಿಕಾರಿ ಹೊಂಬೇಗೌಡ, ಗ್ರಾಮ ಸಹಾಯಕ ಬಸವರಾಜ್ ತಿಳಿಸಿದರು.