Advertisement
ಮಸೂದೆ ವಿರೋಧಿಸಿ ಮಂಗಳೂರಿನ ವೈದ್ಯರ ನೇತೃತ್ವದ ನಿಯೋಗವೊಂದು ಯಡಿಯೂರಪ್ಪ ಅವರನ್ನು ಗುರುವಾರ ನಗರದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ ಸಂದರ್ಭ ಬಿಎಸ್‌ವೈ ಈ ಭರವಸೆಯನ್ನು ನಿಯೋಗಕ್ಕೆ ನೀಡಿದ್ದಾರೆ.
ವೈದ್ಯರಿಗೆ, ರೋಗಿಗಳಿಗೆ ಹಾಗೂ ಜನ ಸಾಮಾನ್ಯರಿಗೆ ಮಾರಕವಾಗಿ ವೈದ್ಯ- ರೋಗಿಯ ಸಂಬಂಧ ಹಳಸುವಂತೆ ಮಾಡುವ ಈ ಕಾನೂನು ಸರಿ ಇಲ್ಲ. ಇದನ್ನು ಸದನದಲ್ಲಿ ಈ ಹಿಂದಿ ನಂತೆಯೇ ಖಡಾಖಂಡಿತವಾಗಿ ಖಂಡಿಸಲಿದ್ದೇವೆ ಎಂದು ಯಡಿಯೂರಪ್ಪ ಭರವಸೆ ನೀಡಿರುವ ಬಗ್ಗೆ ನಿಯೋಗ ವಿವರಿಸಿದೆ. ಬಿಜೆಪಿ ಮುಖಂಡರಾದ ಸದಾನಂದ ಗೌಡ, ಸಿ.ಎಂ. ಉದಾಸಿ, ಸಿಟಿ ರವಿ, ರವಿ ಕುಮಾರ್, ನಳಿನ್ ಕುಮಾರ್ ಕಟೀಲು ಅವರಿಗೂ ನಿಯೋಗ ಮನವಿ ಸಲ್ಲಿಸಿದೆ. ನಿಯೋಗದಲ್ಲಿ ಭಾರತೀಯ ವೈದ್ಯ ಸಂಘದ ಕರಾವಳಿ ವಿಭಾಗ ಸಂಚಾಲಕರಾದ ಡಾ| ಎಂ. ಅಣ್ಣಯ್ಯ ಕುಲಾಲ್ ಉಳ್ತೂರು, ಐಎಂಎ ಮಂಗಳೂರು ಅಧ್ಯಕ್ಷ ಡಾ| ಕೆ. ರಾಮಚಂದ್ರ ಕಾಮತ್, ಮಾಜಿ ಅಧ್ಯಕ್ಷ ಡಾ| ರಾಘವೇಂದ್ರ ಭಟ್, ನಿಯೋಜಿತ ಅಧ್ಯಕ್ಷ ಡಾ| ಸಚ್ಚಿದಾನಂದ ರೈ, ಆಸ್ಪತ್ರೆಯ ಅಸೋಸಿಯೇಶನ್ ಸ್ಥಾಪಕ ಅಧ್ಯಕ್ಷ ಡಾ| ಪ್ರಶಾಂತ್ ಮಾರ್ಲ, ಎಎಂಸಿ ವೈದ್ಯ ಸಂಘಟನೆಯ ಡಾ| ಯೂಸುಫ್ ಕುಂಬ್ಳೆ, ಐಎಂಎ ಟ್ರಸ್ಟ್ ಅಧ್ಯಕ್ಷ ಡಾ| ದಿವಾಕರ್
ರಾವ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.