Advertisement

UV Special: ಈತ ಆಧುನಿಕ ಭಾರತದ ಕುಂಭಕರ್ಣ…ವರ್ಷದಲ್ಲಿ 300 ದಿನ ನಿದ್ದೆಗೆ ಶರಣು!

02:58 PM Jul 14, 2021 | Team Udayavani |

ಉಡುಪಿ/ನವದೆಹಲಿ: ರಾಮಾಯಣದಲ್ಲಿ ರಾವಣನ ಸಹೋದರ ಕುಂಭಕರ್ಣ ಭಾರತೀಯರ ಮನಸ್ಸಿನಲ್ಲಿ ಜನಪ್ರಿಯನಾಗಿರುವ ಕಥೆ ಎಲ್ಲರಿಗೂ ತಿಳಿದಿದೆ. ಆತ ಆರು ತಿಂಗಳ ಕಾಲ ದೀರ್ಘಕಾಲ ನಿದ್ದೆಯಲ್ಲಿರುವವನು. ಇದರಿಂದಾಗಿಯೇ ನಮ್ಮ, ನಿಮ್ಮ ಮನೆಯಲ್ಲಿ ಯಾರಾದರೂ ತುಂಬಾ ಸಮಯ ನಿದ್ದೆಗೆ ಶರಣಾದರೆ ಆತನನ್ನು ಕುಂಭಕರ್ಣನಿಗೆ ಹೋಲಿಸುವುದು ಸಾಮಾನ್ಯವಾದ ವಾಡಿಕೆ. ಆದರೆ ರಾಜಸ್ಥಾನದ ನಾಗ್ಪುರದ ನಿವಾಸಿ ಪುಖ್ರಾಮ್ ವರ್ಷದಲ್ಲಿ 300 ದಿನ ನಿದ್ದೆಗೆ ಶರಣಾಗುತ್ತಿದ್ದಾನೆ ಎಂಬ ವರದಿಯನ್ನು ನೀವು ನಂಬಲೇಬೇಕು!

Advertisement

ಇದನ್ನೂ ಓದಿ:ಪಾಕಿಸ್ತಾನ ಬಸ್ ನಲ್ಲಿ ಬಾಂಬ್ ಸ್ಫೋಟ; ಚೀನಾದ 9 ಕಾರ್ಮಿಕರು ಸೇರಿ 13 ಮಂದಿ ಸಾವು

ತಜ್ಞರ ಪ್ರಕಾರ ಒಬ್ಬ ಆರೋಗ್ಯವಂತ ಮನುಷ್ಯ ದಿನಕ್ಕೆ ಎಂಟು ಗಂಟೆಗಳ ಕಾಲ ನಿದ್ದೆ ಸಾಕಾಗುತ್ತದೆ ಎನ್ನುತ್ತಾರೆ. ಆದರೆ ನಾಗ್ಪುರದ ಪುಖ್ರಾಮ್ ತಿಂಗಳಲ್ಲಿ 25 ದಿನಗಳ ಕಾಲ ನಿರಂತರವಾಗಿ ನಿದ್ದೆಗೆ ಶರಣಾಗುತ್ತಾನಂತೆ. ಪುಖ್ರಾಮ್ ಗೆ 23ವರ್ಷಗಳ ಹಿಂದೆ ಅಪರೂಪದ ಕಾಯಿಲೆ ಇರುವುದು ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.

42 ವರ್ಷದ ಪುಖ್ರಾಮ್ ತುಂಬಾ ಅಪರೂಪದ ಆ್ಯಕ್ಸಿಸ್ ಹೈಪರ್ಸೋಮ್ನಿಯಾ ಕಾಯಿಲೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಈತ ನಿರಂತರ 25 ದಿನಗಳ ಕಾಲ ನಿದ್ದೆ ಮಾಡುತ್ತಿರುವುದಾಗಿ ವರದಿ ವಿವರಿಸಿದೆ. ಈ ಅಪರೂಪದ ಕಾಯಿಲೆಗೆ 23 ವರ್ಷಗಳ ಹಿಂದೆ ಮೊದಲ ಬಾರಿಗೆ ಚಿಕಿತ್ಸೆ ಪಡೆದಿದ್ದಾನಂತೆ. ಆದರೆ ಅದು ಗುಣಮುಖವಾಗದೆ ದಿನದಿಂದ ದಿನಕ್ಕೆ ನಿದ್ದೆ ಎಂಬುದು ಆತನ ಜೀವನದ ಒಂದು ಭಾಗವಾಗಿದೆ ಎಂದು ವರದಿ ಹೇಳಿದೆ.

ಕುತೂಹಲಕರ ಸಂಗತಿ ಏನೆಂದರೆ ಪುಖ್ರಾಮ್ ಸ್ಥಳೀಯವಾಗಿ ಪುಟ್ಟ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ಅದು ಕೇವಲ ತಿಂಗಳಲ್ಲಿ ಐದು ದಿನ ಮಾತ್ರ ತೆರೆದಿರುತ್ತದೆ. ಉಳಿದ 25 ದಿನಗಳ ಕಾಲ ಅಂಗಡಿಗೆ ರಜೆ, ಈತನಿಗೆ ಕುಂಭಕರ್ಣನ ನಿದ್ದೆ! ಆರಂಭದ ದಿನಗಳಲ್ಲಿ ದೀರ್ಘಕಾಲ ನಿದ್ದೆ ಮಾಡುತ್ತಿದ್ದ ಪುಖ್ರಾಮ್ ಕಾಯಿಲೆ ಬಗ್ಗೆ ಕುಟುಂಬ ಸದಸ್ಯರು ವೈದ್ಯರ ಬಳಿ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರಂತೆ. ಆದರೆ ಆತನ ನಿದ್ರೆಯ ಅವಧಿ ಹೆಚ್ಚಳವಾಯ್ತೇ ವಿನಃ ಕಡಿಮೆಯಾಗಿಲ್ಲ ಎಂದು ವರದಿ ತಿಳಿಸಿದೆ.

Advertisement

ನಿದ್ದೆಗೆ ಶರಣಾದ ಪುಖ್ರಾಮ್ ನನ್ನು ಎಬ್ಬಿಸುವುದೇ ದೊಡ್ಡ ಸವಾಲಿನ ಕೆಲಸವಂತೆ. ಸುದೀರ್ಘ ಕಾಲ ನಿದ್ದೆ ಮಾಡುವ ಪುಖ್ರಾಮ್ ಗೆ ತನಗೆ ಅದು ವಿಶ್ರಾಂತಿ ಎಂಬುದಾಗಿ ಹೇಳುತ್ತಾನೆ. ಅಷ್ಟೇ ಅಲ್ಲ ಕೆಲವೊಮ್ಮೆ ತೀವ್ರ ತಲೆನೋವು ಸಹ ಇರುತ್ತದೆ ಎಂದು ಪುಖ್ರಾಮ್ ಹೇಳುತ್ತಾರೆ.ಮಾಧ್ಯಮದ ವರದಿ ಪ್ರಕಾರ, ಈ ಎಲ್ಲಾ ಜಂಜಾಟದ ನಡುವೆ ಪುಖ್ರಾಮ್ ಮೊದಲಿನಂತೆ ಸಹಜ ಜೀವನ ನಡೆಸುವಂತಾಗಲಿ ಎಂಬುದು ಪತ್ನಿ ಲಿಚ್ಮಿ ದೇವಿ ಮತ್ತು ತಾಯಿ ಕಾನ್ವಾರಿ ದೇವಿ ಅವರ ಹಾರೈಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next